Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.02.2022 (God’s creation’s special)
Share:

By Village Missionary Movement

Friday, 18-Feb-2022

ಧೈನಂದಿನ ಧ್ಯಾನ(Kannada) – 19.02.2022 (God’s creation’s special)

ಹಸಿ ಮುಳ್ಳಿನ ಬಗ್ಗೆ

"ಅವನು ನೋಡುವದಕ್ಕೆ ಹತ್ತಿರ ಬರುವದನ್ನು ಕರ್ತನು ನೋಡಿದಾಗ..." - ವಿಮೋಚನಕಾಂಡ 3:4

ಸತ್ಯವೇದದಲ್ಲಿರುವ ಮನುಷ್ಯನೋ, ಮೃಗವೋ ಅಥವಾ ಮರವೋ ಯಾವುದರ ಮೂಲಕವಾದರೂ ದೇವರು ಅನೇಕ ವಿಷಯಗಳನ್ನು ಕಲಿಸಬಲ್ಲನೆಂದು ನಾನು ತಿಳಿದಿದ್ದೇನೆ.  ಆದ್ದರಿಂದ ಇಂದು ನಾನು ಧೈರ್ಯವಾಗಿ ನಿಮ್ಮೊಂದಿಗೆ ಮಾತನಾಡಲು ಮುಂದೆ ಬಂದಿದ್ದೇನೆ.  ಮೊದಲು ನನ್ನ ಪರಿಚಯ ಮಾಡಿಕೊಳ್ಳುತ್ತೇನೆ.  ಸಾಮಾನ್ಯವಾಗಿ ಯಾರೂ ನನ್ನನ್ನು ಇಷ್ಟಪಡುವುದಿಲ್ಲ, ಪ್ರಾಣಿಗಳೂ ಸಹ!  ಹಾಗಾಗಿ ಯಾರೂ ನನ್ನ ಹತ್ತಿರ ಬರುವುದಿಲ್ಲ.  ಆದರೆ ಮೋಶೆಯನ್ನು ದೊಡ್ಡ ನಾಯಕತ್ವದ ಕೆಲಸಕ್ಕೆ ಕರೆಯಲು ದೇವರು ನನ್ನನ್ನೇ ಬಳಸಿದರು ಎಂದರೆ, ನಿಮ್ಮಿಂದ ಅದನ್ನು ನಂಬಲು ಸಾಧ್ಯವೇನಾ?  ಹೌದು, ನಾನೇ ಮುಳ್ಳು ಗಿಡ!

Ok, ನನ್ನೊಂದಿಗೆ ಬನ್ನಿ  ನಾವು ಮರುಭೂಮಿಗೇನೆ ಹೋಗೋಣ.  ಬೇಗ ಹತ್ತಿ, ಹತ್ತಿ... ಪೈಲಟ್, ಸ್ವಲ್ಪ ವಿಮಾನವನ್ನು ಕೆಳಕ್ಕೆ ಹಾರಲು ಬಿಡಿ.  ಇದೇ ಮರುಭೂಮಿಯ ಹಿಂಭಾಗದಲ್ಲಿರುವ ಹೋರೇಬ್ ದೇವ ಪರ್ವತ.  ಇಲ್ಲಿಯೇ ನಾನು ತುಂಬಾ ವರ್ಷಗಳಿಂದ ನಿಂತಿದ್ದೆನು.  ಒಂದು 100 ಡಿಗ್ರಿ ಬಿಸಿಲು, ಇಲ್ಲವಾದರೆ ಕಠಿಣವಾದ ಇಬ್ಬನಿ.  ಇವೆರಡನ್ನು ನೋಡುತ್ತಲೇ ನಾನು ಬೆಳೆದೆ.  ಸರಿ, ನಾನು ನಿಮಗೆ ಕೆಲವು ವಿಷಯಗಳನ್ನು ತ್ವರಿತವಾಗಿ ಹೇಳುತ್ತೇನೆ...!  1. ದೇವರು ನನ್ನ ಮೂಲಕ ಮೋಶೆಗೆ ತನ್ನನ್ನು ಬಹಿರಂಗಪಡಿಸಿದರು.  ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮ ಮೂಲಕ ದೇವರನ್ನು ನೋಡಬಹುದೇ?  ಯೇಸುವನ್ನು ಬಹಿರಂಗಪಡಿಸುವ ವ್ಯಕ್ತಿಯಾಗಿ ನೀವು ಈ ಲೋಕದಲ್ಲಿ ಜೀವಿಸುತ್ತಿದ್ದೀರಾ?  2. ನಾನು ಬೆಂಕಿಯನ್ನು ಅಂಗೀಕರಿಸಿದೆ.  ಅದರಂತೆ ದೇವರು ನಿಮ್ಮನ್ನು ಯಾವ ವಿಧಾನದಲ್ಲಿ ನಡೆಸಿದರೂ ಇದನ್ನು ಸ್ವೀಕರಿಸುತ್ತೀರಾ?  ಅದು ಸಿಂಹದ ಗವಿಯಾದರೂ ಅಥವಾ ಸುತ್ತುವರಿದ ಬೆಂಕಿಯಾದರೂ ಆಗಿರಬಹುದು. ಇದು ನನಗೆ ಬೇಡ, ನಾನು ಸಹಿಸಲಾರೆ ಎಂದು ನೀವು ಅವರೊಂದಿಗೆ ಹೋರಾಡುತ್ತೀರಾ?  ನಿಮ್ಮ ಜೀವನದಲ್ಲಿ ಬರುವ ಕಷ್ಟದ ಸಂದರ್ಭಗಳನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಖಂಡಿತವಾಗಿಯೂ ಮಹಿಮೆಯಾದ ಕಾರ್ಯವು ನಡೆಯುತ್ತದೆ.

3. ನಾನು ಮೋಶೆಯನ್ನು ನನ್ನ ಬಳಿಗೆ ಬರುವಂತೆ ಮನವೊಲಿಸಿದೆನು.  ಅದರಂತೆ ನೀವು ಕೂಡ ದೇವರ ಪ್ರೀತಿಯಿಂದ ಹೊರಗಿರುವವರನ್ನು ಮನವೊಲಿಸಿ ಆಕರ್ಷಿಸುವವರಾಗಿ  ಕಾಣಲ್ಪಡುತ್ತಿದ್ದೀರಾ?  ನಿಮ್ಮನ್ನು ನೋಡುವವರು, ಯಾರ ಬಳಿಯೂ ಇರದಂತಹ ದೈವೀಕ ಸ್ವಭಾವವನ್ನು ನಿಮ್ಮ ಬಳಿ ನೋಡಿ ನಿಮ್ಮ ಹತ್ತಿರ ಬರುತ್ತಿದ್ದಾರಾ?  ಅಚ್ಚಚ್ಚೋ, ನಾನು ನಿಮ್ಮ ಬಳಿ ಬರೀ ಪ್ರಶ್ನೆಗಳನ್ನೇ ಕೇಳ್ತಿದೀನಾ?  ಪ್ರಶ್ನಿಸುವುದು ನನಗೆ ಕೈಗೆ ಬಂದ ಕಲೆ!  ಏಕೆಂದರೆ, ನಾನು ದೇವರನ್ನು ಭೇಟಿಯಾಗುವವರೆಗೂ, ನನ್ನ ಜೀವನದಲ್ಲಿ ಮುಳ್ಳುಗಳು ಏಕೆ?  ಏಕೆ ಈ ಅರಣ್ಯ ಜೀವನ?  ಯಾಕೆ ಈ ಒಂಟಿತನ?  ಯಾಕೆ ಈ ನಿರ್ಲಕ್ಷ್ಯ?  ಎಂದು ಪ್ರಲಾಪಿಸುತ್ತಿದ್ದೆ. ಯಾವಾಗ ದೇವರನ್ನು ನೋಡಿದೆನೋ, ಆಗಲೇ ನನ್ನ ಪ್ರಶ್ನೆಗಳೆಲ್ಲಾ  ಕಣ್ಮರೆಯಾಯಿತು.  ನಿಮ್ಮ ಜೀವನದಲ್ಲೂ ಹಲವು ಪ್ರಶ್ನೆಗಳಿವೆಯಲ್ಲವೇ?  ದೇವರನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ಪ್ರಯಾಸಪಡಿರಿ.  ಅವರೇ ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗಿ ಬದಲಾಗುತ್ತಾರೆ.  ನಾನು ನಿಮ್ಮೊಂದಿಗೆ ಇನ್ನೂ ಸ್ವಲ್ಪ ಮಾತನಾಡಬೇಕೆಂಬ ಆಸೆಯಾಗ್ತಿದೆ, ಆದರೆ ಅದಕ್ಕೆ ಸಾಕಷ್ಟು ಸಮಯವಿಲ್ಲ.  ನೀವು ನನ್ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಇಂದಿನ ಸತ್ಯವೇದ ಭಾಗವನ್ನು ಮತ್ತೆ ಮತ್ತೆ ಓದಿ.  Ok, Bye. 
- Bro. ಜಾನ್ ಜಯರಾಜ್

ಪ್ರಾರ್ಥನಾ ಅಂಶ:
ಗೆತ್ಸೆಮನೆ ಕ್ಯಾಂಪಸ್‌ನಲ್ಲಿ ಇಬ್ಬರಿಬ್ಬರು ಮಿಷನರಿಗಳಾಗಿ ತಂಗಲು ಮತ್ತು ತರಬೇತಿ ಪಡೆದುಕೊಳ್ಳಲು ಅಗತ್ಯವಾಗಿರುವ 60 ಮಿಷನರಿ ಕೊಠಡಿಗಳ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet güncel holiganbet giriş holiganbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet cashwin tambet grandpashabet bahiscasino amgbahis betbey amgbahis radissonbet betpuan cashwin matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet