Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.02.2022 (God’s creation’s special)
Share:

By Village Missionary Movement

Friday, 25-Feb-2022

ಧೈನಂದಿನ ಧ್ಯಾನ(Kannada) – 25.02.2022 (God’s creation’s special)

ಸಮಾಧಿಯ ಗೋಳಾಟ

"...ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ." - ಮತ್ತಾಯ 23:27

ರಾಜನಾದರೂ ಸರಿ, ಆಂಟಿಯಾದರೂ ಸರಿ, ಕೊನೆಗೆ ಜೀವ ಹೋದಾಗ ಹಾಡು ಹಾಡಿ ನನ್ನ ಬಳಿಗೇ ಕರೆದುಕೊಂಡು ಬರಬೇಕು.  ನಾನೇ ಅವರ ಕೊನೆಯ ಸ್ಥಳ.  ಬದುಕಿರುವವನೊಬ್ಬನು ಏಕಾಂಗಿಯಾಗಿ ನನ್ನ ಬಳಿಗೆ ಬರಲು ತುಂಬಾ ಹೆದರುತ್ತಾನೆ.  ಆದರೆ ಒಬ್ಬನು ಮಾತ್ರ ಹಗಲು ರಾತ್ರಿ ನನ್ನೊಂದಿಗೇ ಜೀವಿಸುತ್ತಿದ್ದನು.  ಅವನನ್ನು ಸರಪಳಿಯಿಂದ ಬಂಧಿಸಲಾಗಿತ್ತು.  ಅವನು ತನ್ನ ದೇಹವನ್ನು ಕಲ್ಲುಗಳಿಂದ ಕಡಿದುಕೊಳ್ಳುತ್ತಾ ಇದ್ದನು. ಅವನೊಳಗೆ ದಂಡು ಎಂಬ ದೆವ್ವಗಳು ವಾಸಿಸುತ್ತಿದ್ದವು.  ಆದರೆ ಒಂದು ದಿನ ಯೇಸು ಅವನನ್ನು ಭೇಟಿಯಾದರು.  ಅವನೊಳಗೆ ವಾಸಿಸುತ್ತಿದ್ದ  ಎಲ್ಲಾ ದೆವ್ವಗಳನ್ನು ಅಟ್ಟಾಡಿಸಿ ಓಡಿಸಿದರು.  ಅವನು ಸ್ವಸ್ಥಬುದ್ಧಿಯಿಂದ, ಬಟ್ಟೆಗಳನ್ನು ಹಾಕಿಕೊಂಡು ದೇವರಿಗಾಗಿ ಸಾಕ್ಷಿಯಾಗಿ ಬದುಕಲು ಪ್ರಾರಂಭಿಸಿದನು. ದೆಕಪೊಲಿ ಎಂಬ ಸೀಮೆಯಲ್ಲೆಲ್ಲಾ ಯೇಸುವಿನ ಬಗ್ಗೆ ಪ್ರಚಾರ ಮಾಡಲು ಪ್ರಾರಂಭಿಸಿದನು.

ಈ ಸಮಾಧಿ ಮತ್ತು ಮನುಷ್ಯನ ದೇಹ ಎರಡೂ ಅಶುದ್ಧವಾಗಿತ್ತು.  ಈಗ ಎಲ್ಲವೂ ಶುದ್ಧವಾಯಿತು.  ಆದರೆ ಯೇಸು ಕೆಲವರನ್ನು ಸುಣ್ಣ ಹಚ್ಚಿರುವ ಸಮಾಧಿಗಳು ಎಂದು ಹೇಳುತ್ತಾರೆ.  ಯಾಕೆ ಹಾಗೆ ಹೇಳುತ್ತಾರೆ?  ನನ್ನಲ್ಲಿ ಶವಗಳ ದುರ್ವಾಸನೆ, ಹೊಲಸು ತುಂಬಿದೆ.  ಆದರೆ ಹೊರನೋಟಕ್ಕೆ ಜೋಡಿಸಲ್ಪಟ್ಟು, ಸುಂದರವಾಗಿ ಕಾಣುತ್ತೇನೆ.  ಇದಕ್ಕಾಗಿಯೇ ಯೇಸು ಹೀಗೆ ಹೇಳುತ್ತಿದ್ದಾರೆ.  ಏಕೆಂದರೆ ತೋರಿಕೆಯಲ್ಲಿ ಬಿಳಿಯ ಬಟ್ಟೆ ಧರಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದು ಮಾಯಾಜಾಲವಾಗಿ ಬದುಕುತ್ತಿರುವ ಜನರನ್ನು ನೋಡಿ “ಸುಣ್ಣ ಬಳಿದ ಸಮಾಧಿ” ಎಂದು ಯೇಸು ಹೇಳುತ್ತಿದ್ದಾರೆ.  ಶಾಸ್ತ್ರಿಗಳು ಮತ್ತು ಫರಿಸಾಯರು ಇವರನ್ನು ನೋಡಿಯೇ ಯೇಸು ಹೇಳುತ್ತಿದ್ದಾರೆ, “ನೀವು ಮೇಲ್ನೋಟಕ್ಕೆ ಮನುಷ್ಯರಿಗೆ ನೀತಿವಂತರಾಗಿ ಕಾಣುತ್ತಿದ್ದೀರ.  ಆಂತರಿಕವಾಗಿ ಭ್ರಮೆ ಮತ್ತು ಅಧರ್ಮದಿಂದ ತುಂಬಿದ್ದೀರ” ಎಂದರು.

ಪ್ರಿಯರೇ!  ಇಂತಹ ಜೀವನ ನಿಮಗೆ ಬೇಡ. ಒಳಗೊಂದು ಕಾರ್ಯವನ್ನಿಟ್ಟುಕೊಂಡು ಹೊರಗೆ ಒಳ್ಳೆಯವರಂತೆ ನಟಿಸುವುದು ದೇವರಿಗೆ ಇಷ್ಟವಿಲ್ಲದ ಕಾರ್ಯ. ನನ್ನಂತೆ ಇರಬೇಡಿರಿ.  ಒಳಗೆ ದುರ್ವಾಸನೆ ಮತ್ತು ಅಸಹ್ಯ!  ಅದು ನನ್ನೊಂದಿಗೇ ಹೋಗಲಿ. ನೀವು ಯೆಸುವಿನ ಹಾಗೆ ಇರಿ.  ಸತ್ಯವೇದವು ಹೇಳುವುದನ್ನು ಕೇಳಿ ನಡೆಯಿರಿ.  ಈ ಸಮಾಧಿಯ ಜೀವನ ನಿಮಗೆ ಬೇಡ.  ಇದೇ ನನ್ನ ಗೋಳಾಟ.  ನೀವು ಸುಣ್ಣ ಹಚ್ಚಿದ ಸಮಾಧಿಯಂತೆ ಬದುಕಿದರೆ, ಈ ಲೋಕದಲ್ಲೂ ನರಕದ ಜೀವನ, ಲೋಕದ ನಂತರವೂ ಶಾಶ್ವತವಾದ ನರಕ ಜೀವನ. ಆ ರೀತಿ ಬೇಡ.
-    Mrs.  ಮಂಜುಳಾ

ಪ್ರಾರ್ಥನಾ ಅಂಶ:
ಸೇವಕರಿಗಾಗಿ ವಿಶೇಷವಾಗಿ ತಯಾರಿಸಲ್ಪಡುವ "ಕತ್ತೆಗಳ ಮಾರ್ಗದರ್ಶಿ"  ಎಂಬ ಪತ್ರಿಕೆಯನ್ನು ಕಳುಹಿಸಲು "Postal permit" ಸಿಗಲು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet