Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.03.2022
Share:

By Village Missionary Movement

Tuesday, 01-Mar-2022

ಧೈನಂದಿನ ಧ್ಯಾನ(Kannada) – 01.03.2022

ದೈನಂದಿನ ಜೀವನದಲ್ಲಿ ಬೇಸರವೇ?

"...ದೇವರು ನಿನ್ನ ನಡತೆಗೆ ಈಗ ಮೆಚ್ಚಿದನಷ್ಟೆ" - ಪ್ರಸಂಗಿ 9:7

ಜೀವನದಲ್ಲಿ ನಮಗೆ ಬರುವ ಎಲ್ಲಾ ಸಮಸ್ಯೆಗಳು ಗೋಲಿಯಾತ್‌ನಂತಹ ದೊಡ್ಡ ಸಮಸ್ಯೆಗಳಲ್ಲ.  ಹಾಗೆ ದೊಡ್ಡ ಸಮಸ್ಯೆಗಳು ಬಂದಾಗ ಅದನ್ನು ನಾವು ನಿಭಾಯಿಸಿ ಬಿಟ್ಟರೆ ಅದರಲ್ಲೊಂದು ಸಂಭ್ರಮ, ಸಂತೃಪ್ತಿ ದೊರೆಯುತ್ತದೆ.  ಜೀವನಕ್ಕೆ ಒಂದು ಅರ್ಥವಿದೆ ಎಂಬಂತೆ ತೋಚುತ್ತದೆ.  ಆದರೆ ದೈನಂದಿನ ಜೀವನದಲ್ಲಿ ನಾವು ಪ್ರತಿದಿನ ಮಾಡುವ ಸಾಮಾನ್ಯ ಕೆಲಸಗಳು ನಮಗೆ ಬೇಸರವನ್ನುಂಟು ಮಾಡುತ್ತವೆ. ದಿನನಿತ್ಯ ಕೆಲಸಕ್ಕೆ ಹೋಗುವುದು, ಅಡುಗೆ ಮಾಡುವುದು, ಪಾಠ ಕಲಿಯುವುದು ಮುಂತಾದ ವಿಷಯಗಳು ನಮಗೆ ಸಾಕಾಗಿ ಬಿಡುತ್ತದೆ. ನಾವು ಜೀವನದಲ್ಲಿ ಏನನ್ನು ದೊಡ್ಡದಾಗಿ ಸಾಧಿಸಿಬಿಟ್ಟಿದ್ದೇವೆ ಎಂಬ ಆಲೋಚನೆಯಲ್ಲಿ ಈ ದೈನಂದಿನ ಕೆಲಸಗಳು ಕೂಡ ಭಾರವಾಗಿ, ದಣಿದಂತೆ ತೋರಲು ಪ್ರಾರಂಭಿಸುತ್ತದೆ.

ಕ್ರಿಸ್ತನಿಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡಿದವರ ವಿಸ್ಮಯ-ಸ್ಫೂರ್ತಿದಾಯಕ ಜೀವನಚರಿತ್ರೆಗಳನ್ನು ನಾವು ಓದುವಾಗ ಮತ್ತು ಕೇಳಿದಾಗ ನಮ್ಮ ಜೀವನವೂ ಒಂದು ಜೀವನವೇನಾ? ಇಂತಹ ನನ್ನ ದೈನಂದಿನ ಜೀವನ ದೇವರಿಗೆ ಮೆಚ್ಚಿಕೆಯಾಗಿದೆಯೋ?  ಎಂಬ ಪ್ರಶ್ನೆಗಳೂ ಸಹ ಏಳುತ್ತವೆ.

ದೇವರಿಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡಲು ಕರೆಯಲ್ಪಟ್ಟಿರುವ ನಾವು, ಒಂದು ವಿಷಯವನ್ನು ಮರೆತುಬಿಡಬಾರದು.  "ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ" (1 ಕೊರಿಂಥ. 10:31) ಈ ವಚನವು ಏನು ಹೇಳುತ್ತದೆ?  ನಾವು ಆತನಿಗಾಗಿ ನಮ್ಮ ಜೀವನದಲ್ಲಿ ಮಾಡುವ ಸಣ್ಣಪುಟ್ಟ ಕೆಲಸಗಳನ್ನು ಕೂಡ ಆತನಿಗಾಗಿ ಮಾಡುವಾಗ ಅವರು ಅದನ್ನು  ಪರಿಮಳ ವಾಸನೆಯಾಗಿ ಅಂಗೀಕರಿಸುತ್ತಾರೆ.  ಹೌದು, ದೇವರಿಗಾಗಿ ನಾವು ಮಾಡುವ ಚಿಕ್ಕ ಚಿಕ್ಕ ಕೆಲಸಗಳನ್ನೂ ಅವರು ದೊಡ್ಡದಾಗಿಯೇ ನೋಡುತ್ತಾರೆ.  ಆದರೆ ನಮ್ಮ ಹೆಸರಿನ ಪ್ರಸ್ತಾವನೆಗಾಗಿ ನಾವು ಮಾಡುವ ಮಹತ್ಕಾರ್ಯಗಳು ಅವರ ದೃಷ್ಟಿಯಲ್ಲಿ ಅಲ್ಪವಾದದ್ದೇ.

ಪ್ರಿಯರೇ!  ನೀವು ಒಂದು ವಿದ್ಯಾರ್ಥಿಯೋ, ಕುಟುಂಬವನ್ನು ಆಸಕ್ತಿಯಿಂದ ಗಮನಿಸುವ ಹೆಂಡತಿಯೋ,  ಕಂಪನಿಯಲ್ಲಿ ಕೆಲಸ ಮಾಡುವ ಗಂಡನಾಗಿಯೋ, ಸೇವಕನಾಗಿಯೋ ಕರೆಯಲ್ಪಟ್ಟಿರಬಹುದು.  ನೀವು ಏನು ಮಾಡಿದರೂ ಕರೆಯಲ್ಪಟ್ಟ ಸ್ಥಳದಿಂದ ನೀವು ಮಾಡುವ ಎಲ್ಲಾ ಕಾರ್ಯವನ್ನು  ಪ್ರಾಮಾಣಿಕವಾಗಿ ಯಥಾರ್ಥವಾಗಿ ಮಾಡುವಾಗ ದೇವರು ನಿಮ್ಮಲ್ಲಿ ಮಹಿಮೆ ಹೊಂದುತ್ತಾರೆ.  "ಇವನು ಮಾಡುವುದು ಅಡುಗೆ ತಾನೇ" ಮತ್ತು "ಇವನು ಮಾಡುವುದು ದೈನಂದಿನ ಕಚೇರಿ ಕೆಲಸ ತಾನೇ" ಎಂದು ದೇವರು ಎಂದಿಗೂ ಯೋಚಿಸುವುದಿಲ್ಲ.  ಆದ್ದರಿಂದ ಇನ್ನು ಮುಂದೆ ನಿಮ್ಮ ದೈನಂದಿನ ಕೆಲಸಗಳ ಬಗ್ಗೆ ಬೇಸರವೂ, ಪ್ರಶ್ನೆಯೂ ಬೇಡ. ನಿಮ್ಮ ದೈನಂದಿನ ಜೀವನದ ಕಾರ್ಯಗಳೆಲ್ಲವನ್ನು ದೇವರ ಸನ್ನಿಧಾನದಲ್ಲಿ ಪರಿಮಳ ವಾಸನೆಯಾಗಿ ಸ್ವೀಕರಿಸಲಾಗುತ್ತದೆ.   ಹಲ್ಲೇಲೂಯ!
-    J.  ಸಂತೋಷ್

ಪ್ರಾರ್ಥನಾ ಅಂಶ:
ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet