Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.03.2022
Share:

By Village Missionary Movement

Wednesday, 09-Mar-2022

ಧೈನಂದಿನ ಧ್ಯಾನ(Kannada) – 09.03.2022

ತುರಾಯಿ ಮರವು ಹೇಳುವ ಸತ್ಯ 

“ನೀನು ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು" - ಆದಿಕಾಂಡ 6:14

ಮಾಲಾ ಮತ್ತು ಕವಿತಾ ಎಂಬ ಇಬ್ಬರು ಗೆಳತಿಯರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು.  ಕವಿತಾ ಯೇಸುಕ್ರಿಸ್ತನ ಪ್ರೀತಿಯನ್ನು ತಿಳಿಯದ ಕುಟುಂಬದಲ್ಲಿ ಜನಿಸಿದ ಹುಡುಗಿ.  ಮಾಲಾ ತನ್ನ ಚಿಕ್ಕಂದಿನಿಂದಲೂ ಪ್ರಾರ್ಥನೆ, ಸತ್ಯವೇದ ಧ್ಯಾನ  ಹೀಗೆ ಯೇಸುವಿಗಾಗಿ ಉತ್ಸಾಹವಾಗಿ ಮುನ್ನಡೆಯುತ್ತಿದ್ದಳು. ಇವಳು ತನ್ನ ಸುತ್ತಮುತ್ತಲಿನ ಎಲ್ಲರೊಂದಿಗೆ ಪ್ರೀತಿಯಿಂದಿರುತ್ತಿದ್ದಳು, ಅವಳು ಕಾಲೇಜು ಶಿಕ್ಷಣ ಮತ್ತು ಕ್ರೀಡೆಗಳು ಎಲ್ಲಾ ಕ್ಷೇತ್ರಗಳಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಿದ್ದಳು.  ಇದಕ್ಕೆ ವಿರುದ್ಧವಾಗಿ ಇದ್ದವಳೇ ಅವಳ ಸ್ನೇಹಿತೆ ಕವಿತಾ.  ತನ್ನ ಕಾಲೇಜು ದಿನಗಳಲ್ಲಿ ಆಕೆಗೆ ಪ್ರಪಂಚ ಮತ್ತು ಲೌಕಿಕ ಸುಖಗಳೊಂದಿಗೆ ಸಮಯ ಕಳೆಯುವ ಉತ್ಸಾಹವಿತ್ತು.  ಅವಳು ಓದುವುದರಲ್ಲಿಯೂ ಸ್ವಲ್ಪ ಮಂದಗತಿಯಲ್ಲಿದ್ದಳು.

ಕವಿತಾ ಒಮ್ಮೆ ಮಾಲಾ ಬಳಿ ಒಂದು ಪ್ರಶ್ನೆ ಕೇಳಿದಳು.  "ಮಾಲಾ, ನಾವು ಚಿಕ್ಕಂದಿನಿಂದಲೂ ಬೆಸ್ಟ್ ಫ್ರೆಂಡ್ಸ್, ಆದರೆ ನಮ್ಮಲ್ಲಿ ತುಂಬಾ ವ್ಯತ್ಯಾಸಗಳಿವೆ, ನಿನ್ನಿಂದ ಮಾತ್ರ ಹೇಗೆ ಎಲ್ಲಾದರಲ್ಲಿಯೂ  ಮೊದಲ ಸ್ಥಾನ ಪಡೆಯಲು ಸಾಧ್ಯವಾಗುತ್ತಿದೆ?"  ಎಂದು ಸ್ವಲ್ಪ ದುಃಖದಿಂದ ಕೇಳಿದಳು.  ಕವಿತಾಳ ಬಳಿ ಮಾಲಾ ಹೇಳಿದಳು, “ನನ್ನನ್ನು ಸೃಷ್ಟಿಸಿದ ದೇವರೊಂದಿಗೆ ನಾನು ನನ್ನ ದೈನಂದಿನ ಜೀವನದ ಮೊದಲ ಗಂಟೆಯನ್ನು ಕಳೆಯುತ್ತೇನೆ.  ಮನುಷ್ಯರೊಂದಿಗೆ ಮಾತನಾಡುವ ಮೊದಲು ನಾನು ಅವರ ಪಾದಗಳ ಬಳಿ ಮೊದಲ ಸಮಯವನ್ನು ಕಳೆಯುತ್ತೇನೆ ಮತ್ತು ನಂತರ ಅವರು ನನ್ನೊಂದಿಗೆ ಮಾತನಾಡುತ್ತಾರೆ.  ನಾನು ಅವರ ಶಬ್ಧವನ್ನು ಕೇಳುವ ಮೂಲಕ ನನ್ನ ದಿನವನ್ನು ಪ್ರಾರಂಭಿಸುವುದರಿಂದ, ಎಲ್ಲವನ್ನೂ ಜಯಿಸುತ್ತಿದ್ದೇನೆ, ಪ್ರಪಂಚದ ಇಚ್ಛೆ ಮತ್ತು ಕೆಟ್ಟ ಅಭ್ಯಾಸಗಳಲ್ಲಿ ಸಿಲುಕಿಕೊಳ್ಳದಂತೆ ಅದು ನಮ್ಮನ್ನು ಕಾಪಾಡುತ್ತದೆ" ಎಂದು ಹೇಳಿದಳು.  ಆ ಮಾತುಗಳು ಕವಿತಾಳ ಹೃದಯವನ್ನು ಮುಟ್ಟಿತು ತಕ್ಷಣವೇ ಅವಳು
ತನ್ನ ಜೀವನವನ್ನು ದೇವರಿಗೆ ಅರ್ಪಿಸಿದಳು.

ಸತ್ಯವೇದದಲ್ಲಿಯೂ ಸಹ ಕರ್ತನು ನೋಹನಿಗೆ ಆ ದಿನಗಳಲ್ಲಿ  ತುರಾಯಿ ಮರದಿಂದ ಒಂದು ನಾವೆಯನ್ನು  ಮಾಡಬೇಕೆಂದು ಹೇಳುತ್ತಾರೆ.  ಏಕೆ ದೇವರು ತುರಾಯಿ ಮರವನ್ನು ಆರಿಸಿಕೊಂಡರು ಗೊತ್ತಾ?  ತುರಾಯಿ ಮರವು ಎಷ್ಟು ನೀರಿದ್ದರೂ ಅದರೊಂದಿಗೆ ಅಂಟಿಕೊಳ್ಳುವುದಿಲ್ಲ ಮತ್ತು ಅದರ ರಾಳದಂತಿರುವ  ಲೂಬ್ರಿಸಿಟಿಯು ನೀರನ್ನೂ, ಧೂಳನ್ನು ಮರದ ಮೇಲ್ಭಾಗಕ್ಕೆ ಅಂಟಿಕೊಳ್ಳದಂತೆ ಮಾಡುತ್ತದೆ.  ನಾವು ದೇವರನ್ನು ತಿಳಿದಿದ್ದರೂ ಮತ್ತು ಪ್ರಪಂಚದೊಂದಿಗೆ ವಾಸಿಸುತ್ತಿದ್ದರೂ, ನಾವು ಪ್ರಪಂಚದ ಪಾಪಗಳು ಮತ್ತು ಕೆಟ್ಟ ಕಾರ್ಯಗಳಿಂದ ನಮ್ಮನ್ನು ಕಾಪಾಡಿಕೊಳ್ಳಬೇಕು.  ಅಂದು  ತುರಾಯಿ ಮರದಲ್ಲಿ ಮಾಡಲ್ಪಟ್ಟ  ನಾವೆಯಲ್ಲಿ ಇರುವ ನೋಹನ ಕುಟುಂಬದವರ ಹಾಗೆ ನಾವೂ ರಕ್ಷಿಸಲ್ಪಡಲು  ಲೋಕದೊಂದಿಗೆ ಬೆರೆಯದೆ ಸಾಕ್ಷಿಯುಳ್ಳ ಜೀವನವನ್ನು ನಡೆಸಲು ದೇವರ ಸಹಾಯದೊಂದಿಗೆ  ಸಿದ್ಧರಾಗೋಣವಾ?
-    V.  ವಿಶಾಲಿ

ಪ್ರಾರ್ಥನಾ ಅಂಶ:
ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ವಿಲೇಜ್ ಟೈಮ್ ಕಾರ್ಯಕ್ರಮದ ಮೂಲಕ ಅನೇಕರು ಆಶೀರ್ವದಿಸಲ್ಪಡುವಂತೆ  ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet