Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.03.2022
Share:

By Village Missionary Movement

Sunday, 20-Mar-2022

ಧೈನಂದಿನ ಧ್ಯಾನ(Kannada) – 21.03.2022

ನಿರಾಕರಣೆ ಒಳ್ಳೆಯದು

"...ನನ್ನನ್ನು ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು." - ಆದಿಕಾಂಡ 45:5

ನೆಲ್ಸನ್ ಮಂಡೇಲಾ ರವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದಾಗ ಒಮ್ಮೆ ಅವರು ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದರು.  ಎದುರಿನ ಮೇಜಿನಲ್ಲಿ ಯಾರೋ ಒಬ್ಬ ವ್ಯಕ್ತಿ ತುಂಬಾ ಭಯದಿಂದ ನಡುಗುತ್ತಾ ಊಟ ಮಾಡುತ್ತಿದ್ದರು.  ಅಧ್ಯಕ್ಷರೊಂದಿಗಿದ್ದ  ಪೋಲೀಸರು ಆ ವ್ಯಕ್ತಿಯ ದೇಹಭಾಷೆಯನ್ನು ಗಮನಿಸಿ ನೆಲ್ಸನ್ ಮಂಡೇಲಾಗೆ ಅನುಮಾನ ವ್ಯಕ್ತಪಡಿಸಿದರು.  ನೆಲ್ಸನ್ ನೇರವಾಗಿ ಎದ್ದು ಆ ವ್ಯಕ್ತಿಯನ್ನು ನೋಡಿದರು.  ಅವರ ಮುಖದಲ್ಲಿ ಕಿರು ನಗು ಇತ್ತು.  ‘‘ನಾನು ಜೈಲಿನಲ್ಲಿದ್ದಾಗ ಅವರೇ ನನ್ನ ಜೈಲು ಸಿಬ್ಬಂದಿಯಾಗಿದ್ದರು, ಒಮ್ಮೆ ನೀರು ಕೇಳಿದಾಗ ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.  ಈಗ ಜೈಲಿನಿಂದ ಬಿಡುಗಡೆಯಾಗಿಬಿಟ್ಟಿದ್ದೇನೆ. ಅಷ್ಟೇ ಅಲ್ಲದೆ ಅಧ್ಯಕ್ಷನಾಗಿದ್ದೇನಲ್ಲಾ, ನಾನು ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎಂಬ ಭಯದಲ್ಲಿ ನಡಗುತ್ತಿದ್ದಾರೆ" ಎಂದರು.  ಅವರತ್ತ ನೋಡಿ ಸ್ನೇಹಪೂರ್ವಕವಾಗಿ ಒಂದು ಮುಗುಳ್ನಗು ಚೆಲ್ಲಿ ಎದ್ದು ಹೊರಟು ಹೋದರು.

ಸತ್ಯವೇದದಲ್ಲಿ, ಯೋಸೇಫನ ಸಹೋದರರು ಯೋಸೇಫನನ್ನು ಇಪ್ಪತ್ತು ಬೆಳ್ಳಿ ನಾಣ್ಯಗಳಿಗೆ ಮಾರಿದರು.  ಐಗುಪ್ತದ ಮನೆಯಲ್ಲಿ ಪೋಟೀಫರನ ತನ್ನ ಹೆಂಡತಿಯ ನಿಮಿತ್ತವಾಗಿ ಸೆರೆಮನೆಗೆ ಹಾಕಲ್ಪಟ್ಟರು. ಯೋಸೇಫನು ತನ್ನ 30 ನೇ ವಯಸ್ಸಿನಲ್ಲಿ ಐಗುಪ್ತ ದೇಶದ ಅಧಿಕಾರಿಯ ಸ್ಥಾನಕ್ಕೆ ಏರಿಸಲ್ಪಟ್ಟರು.  ಆಗ ಯೋಸೇಫನ ಸಹೋದರರಿದ್ದ ದೇಶದಲ್ಲಿ ಬರಗಾಲ ಉಂಟಾಗಿ, ತನ್ನ ಸಹೋದರನಾದ ಯೋಸೇಫನೇ ಅಲ್ಲಿನ ಅಧಿಕಾರಿ ಎಂದು ತಿಳಿಯದೇ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು ಯೋಸೇಫನ ಬಳಿಗೆ ಬಂದರು. ಆದರೆ ಬಂದವರು ತನ್ನ ಸಹೋದರರೆಂದು ಯೋಸೇಫನು ತಿಳಿದುಕೊಂಡರು.  ಯೊಸೇಫನು  ತನ್ನ ಸಹೋದರರನ್ನು ಸೇಡು ತೀರಿಸಿಕೊಳ್ಳುವ ಅಥವಾ ಅವರನ್ನು ತಿರಸ್ಕರಿಸುವ ಉದ್ದೇಶವನ್ನು ಹೊಂದಿರಲಿಲ್ಲ.  ಆದರೆ ಯೋಸೇಫನನ್ನು ಅವನ ಸಹೋದರರು ಸಂಪೂರ್ಣವಾಗಿ ತಿರಸ್ಕರಿಸಿಯೇ ಮಾರಿಬಿಟ್ಟಿದ್ದರು. ಕಗ್ಗೊಲೆ, ಮತ್ತು ಪ್ರತೀಕಾರದ ಸ್ವಭಾವವು ಒಂದು ವ್ಯಕ್ತಿಗೋ, ಒಂದು ದೇಶಕ್ಕೋ ಇದ್ದರೆ ಅವರು ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ.  ಎಲ್ಲರನ್ನೂ ಸಂತೈಸುವ ಗುಣ ಒಬ್ಬರಲ್ಲಿದ್ದರೆ ಮಾತ್ರವೇ ಒಂದು ಸಾಮ್ರಾಜ್ಯವನ್ನು ಪಡೆಯಲು ಸಾಧ್ಯ.  ಈ ಗುಣವು ಯೋಸೇಫನಲ್ಲಿತ್ತು.  ಇದನ್ನು ಓದುತ್ತಿರುವ ಪ್ರಿಯರೇ!  ಯಾರಾದರೂ ನಿಮ್ಮನ್ನು ತಿರಸ್ಕರಿಸಿದರೆ ಚಿಂತಿಸಬೇಡಿ!  ಸಾಮಾನ್ಯವಾಗಿ ಜನರು ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೇ ತಿರಸ್ಕರಿಸುತ್ತಾರೆ. ನಾವು ಕೂಡ ಯಾರೋ ಒಂದು ದಿನ ಮಾಡಿದ ದುಷ್ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶ, ಕಗ್ಗೊಲೆಯ ಭಾವನೆ ಬೆಳೆಸಿಕೊಳ್ಳದಿದ್ದರೆ ಖಂಡಿತವಾಗಿಯೂ ದೇವರು ನಮ್ಮನ್ನು ತಿರಸ್ಕರಿಸದೆ ಅಭಿವೃದ್ಧಿ ಪಡಿಸುತ್ತಾರೆ.
-    Mrs.  ಶಕ್ತಿ ಶಂಕರರಾಜ್

ಪ್ರಾರ್ಥನಾ ಅಂಶ:
ಕತ್ತೆಗಳ ಮಾರ್ಗದರ್ಶಿ ಎಂದು ಸೇವಕರು ಗಳಿಗಾಗಿ ಹೊರಬರುವ ಮಾಸ ಪತ್ರಿಕೆಯನ್ನು  ತಪ್ಪದೆ ಮುದ್ರಿಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet