Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.03.2022
Share:

By Village Missionary Movement

Saturday, 26-Mar-2022

ಧೈನಂದಿನ ಧ್ಯಾನ(Kannada) – 26.03.2022

ಸತ್ಕಾರ್ಯಗಳು

''…ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು" - ಮತ್ತಾಯ 5:16

ವಿಶ್ವದ ಅತ್ಯಂತ ಕೆಟ್ಟ ಜೈಲು ಎಂದು ಕರೆಯಲ್ಪಡುವುದು "ಸಿಸ್ಸಿಸ್" ಜೈಲು. ಒಂದು ಬಾರಿ ಕೇರ್‌ಟೇಕರ್‌ನ ಹೆಂಡತಿಯಾದ ಕ್ಯಾಥರೀನ್ ಲಾಸ್ ಸಾಂದರ್ಭಿಕವಾಗಿ ತನ್ನ ಮಕ್ಕಳೊಂದಿಗೆ ಜೈಲಿಗೆ ಹೋಗುತ್ತಾಳೆ.  ನಂತರ ಅವರು ಪ್ರತಿ ಖೈದಿಗಳ ಬಗ್ಗೆ ಪ್ರತ್ಯೇಕವಾಗಿ ಆಸಕ್ತಿ ಹೊಂದಿದ್ದರು.  ಕೊಲೆ ಮಾಡಿದ ಅಪರಾಧಕ್ಕಾಗಿ ಸೆರೆವಾಸದಲ್ಲಿದ್ದ ಒಬ್ಬ ಕೈದಿ ಕುರುಡನಾಗಿ ಕಂಡು ಬಂದಿದ್ದರಿಂದ, ಬ್ರೈಲ್ ಓದಲು ಕಲಿಸಿಕೊಟ್ಟರು.  ಅವರು ಆರು ಕಿವುಡ ಮತ್ತು ಮೂಕ ಖೈದಿಗಳಿಗೆ ಇತರರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಹೇಗೆ ಸಂವಹನ ನಡೆಸಬೇಕೆಂದು ಕಲಿಸಿದರು.  ಅಂತೆಯೇ ಅವರು ಕೈದಿಗಳ ಅಗತ್ಯಗಳನ್ನು ಪೂರೈಸುತ್ತಾ ಸೇವೆ ಮಾಡುತ್ತಿದ್ದರು.  ಕ್ಯಾಥರೀನ್ ರವರು ಒಂದು ಕಾರು ಅಪಘಾತದಲ್ಲಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿ 100 ಕೈದಿಗಳು ಬಂದು ಕ್ಯಾಥರೀನ್ ಅವರನ್ನು ನೋಡಲು ಅನುಮತಿ ಪಡೆದು ಕಣ್ಣೀರು ಹಾಕಿದರು.
 
ಇದೇ ರೀತಿಯಲ್ಲಿ, ಯೊಪ್ಪ ಎಂಬ ಪಟ್ಟಣದಲ್ಲಿದ್ದ ದೊರ್ಕ ಎಂಬ ಸ್ತ್ರೀಯು ಸಹ ತಾನಿದ್ದ ಸ್ಥಳದಲ್ಲಿರುವ ಜನರಿಗೆ ಸತ್ಕ್ರಿಯೆಗಳನ್ನೂ ಅನೇಕ ವಿಧವೆಯರಿಗೆ ಸಹಾಯವನ್ನು ಮಾಡುತ್ತಾ, ನಿಲುವಂಗಿಗಳನ್ನು ಮಾಡಿಕೊಡುತ್ತಿದ್ದಳು. ಅವಳು ಸತ್ತಾಗ ಆಕೆಯ ಶವವನ್ನು ತೊಳೆದು ಮೇಲಂತಸ್ತಿನಲ್ಲಿಟ್ಟು ಎಲ್ಲರೂ ಅಳುತ್ತಿದ್ದರು. ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ ಮೇಲಂಗಿಗಳನ್ನೂ ತೋರಿಸಿ ಪೇತ್ರನನ್ನು ಕರೆದು ಕಣ್ಣೀರಿಟ್ಟರು.  ಪೇತ್ರನು ಬಂದು ಪ್ರಾರ್ಥಿಸಿದಾಗ ಜೀವಂತವಾಗಿ ಎದ್ದೇಳುತ್ತಾಳೆ.  ಈ ದೊರ್ಕಳು ತನ್ನ ಕೆಲಸದ ಮಧ್ಯೆ ಹಲವರಿಗೆ ಒಳ್ಳೆಯ ಕೆಲಸಗಳನ್ನು ಮಾಡಿದಳು.  ಆದ್ದರಿಂದ ಅವಳ ಖ್ಯಾತಿ ಅಥವಾ ಅವಳ ಬೆಳಕು ಯೊಪ್ಪ ಪಟ್ಟಣದಾದ್ಯಂತ ಬೆಳಗಿತು.

ಇದನ್ನು ಓದುತ್ತಿರುವ ಪ್ರಿಯರೇ, ನಾವು ತುರ್ತು ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ.  ಇಂದು ಅನೇಕರಿಗೆ ತಮ್ಮ ಮನೆಯ ಹತ್ತಿರ ಯಾರಿದ್ದಾರೆ ಎಂಬುದೇ ತಿಳಿದಿರುವುದಿಲ್ಲ.  ಬದಲಿಗೆ, ಕ್ಯಾಥರೀನ್‌ನಂತೆ, ನಾವು ಇತರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರಿಗೆ ಸಹಾಯ ಮಾಡಬೇಕು.  ನಾವು ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಕ್ರಿಸ್ತನ ಪ್ರೀತಿಯನ್ನು ಹೇಳಬೇಕಾಗಿಲ್ಲ.  ಏಕೆಂದರೆ ನಾವು ಬದುಕಿ ತೋರಿಸುತ್ತಿದ್ದೇವೆ.  ಹೀಗೆ ಅನೇಕರು ಕ್ರಿಸ್ತನ ಬಳಿಗೆ ನಡೆಸಲ್ಪಡುವರು.  ನಾವು ಕಳೆಯುವ ಸಮಯ, ಹಣ, ವಸ್ತು ಎಲ್ಲವೂ ಆತ್ಮಗಳಾಗಿ ನಮಗೆ ದೊರೆಯುತ್ತವೆ.  ಆತ್ಮಗಳು ಪರಲೋಕದ ಸಂಪತ್ತಲ್ಲವೇ?  ಒಳ್ಳೆಯ ಕಾರ್ಯಗಳನ್ನು ಮಾಡೋಣ ಪರಲೋಕದ ಸಂಪತ್ತನ್ನು ಸೇರಿಸೋಣ.
-    Mrs.  .ಅನ್ಬು ಜ್ಯೋತಿ ಸ್ಟಾಲಿನ್

ಪ್ರಾರ್ಥನಾ ಅಂಶ:
ಗೆತ್ಸೆಮನೆ ಆವರಣದಲ್ಲಿ ನಡೆಯುತ್ತಿರುವ ವೈದ್ಯಕೀಯ ಸೇವೆಗಳಿಗಾಗಿ; ಮತ್ತು ಪ್ರತಿ ಆತ್ಮದ ರಕ್ಷಣೆಗಾಗಿ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet