Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.04.2022
Share:

By Village Missionary Movement

Wednesday, 13-Apr-2022

ಧೈನಂದಿನ ಧ್ಯಾನ(Kannada) – 13.04.2022

 

ತೀರಿತು

 

"ಯೇಸು ಆ ಹುಳಿರಸವನ್ನು ತಕ್ಕೊಂಡ ಮೇಲೆ - ತೀರಿತು ಎಂದು ಹೇಳಿ ತಲೇಬಾಗಿಸಿ ಆತ್ಮವನ್ನು ಒಪ್ಪಿಸಿಕೊಟ್ಟನು" - ಯೋಹಾನ 19:30

 

ಯೇಸು ಶಿಲುಬೆಯ ಮೇಲೆ ನುಡಿದ ಆರನೆಯ ಮಾತು:

ಆರಂಭದಲ್ಲಿ ದೇವರೊಂದಿಗೆ ನಡೆಯುತ್ತಿದ್ದ ನೋಹನಿಗೆ ಕರ್ತನ ದೃಷ್ಟಿಯಲ್ಲಿ ಕೃಪೆ ದೊರೆಯಿತು. ದೇವರು ಈ ಲೋಕದಲ್ಲಿ ನೋಹನ ವಿಷಯದಲ್ಲಿ ತನ್ನ ಉದ್ದೇಶವನ್ನು ಪೂರೈಸಿದರು. ದೇವರು ತನಗೆ ಆಜ್ಞಾಪಿಸಿದಂತೆಲ್ಲಾ ನೋಹನು ಮಾಡಿ ಮುಗಿಸಿದನು.

 

ನಮಗೆ ತಿಳಿದಿರುವಂತೆ, ಯೇಸು ಕ್ರಿಸ್ತನು ಈ ಲೋಕದಲ್ಲಿ ತಂದೆಯ ಚಿತ್ತವನ್ನು ಮಾಡುವವರಾಗಿಯೇ ಜೀವಿಸುತ್ತಿದ್ದರು. ತಂದೆಯಾದ ದೇವರು ಅವರಿಗೆ ತೋರಿಸಿದ್ದನ್ನು ಮಾತ್ರ ಮಾಡಿದರು. ಯೇಸುಕ್ರಿಸ್ತನು ಈ ಲೋಕಕ್ಕೆ ಬಂದ ಉದ್ದೇಶವೇ ಈ ಲೋಕದಲ್ಲಿ ಜನಿಸಿದ ಮತ್ತು ಹುಟ್ಟುವ ಪ್ರತಿಯೊಬ್ಬರ ಪಾಪಗಳು, ಶಾಪಗಳು ಮತ್ತು ರೋಗಗಳನ್ನು ನೀಗಿಸಿ ಅವರನ್ನು ವಿಮೋಚಿಸಲು ಅದಕ್ಕಾಗಿ ತನ್ನ ಜೀವವನ್ನು ನೀಡುವುದಕ್ಕಾಗಿ ಬಂದರು. ಯೇಸುವಿನ ರಕ್ತವು ಸಕಲಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿಮಾಡುತ್ತದೆ ಎಂದು 1 ಯೋಹಾನ 1: 7 ರಲ್ಲಿ ಓದುತ್ತೇವೆ. ನಿಜವಾಗಿಯೂ ನಮ್ಮ ಸಂಕಷ್ಟಗಳನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಎಂದು ಯೆಶಾಯ 53: 4 ರಲ್ಲಿ ಓದುತ್ತೇವೆ, ತಂದೆಯ ಚಿತ್ತವನ್ನು ಮರಣದ ವರೆಗೆ ನೆರವೇರಿಸಿದ ಯೇಸು, ತನ್ನ ದೇಹದಲ್ಲಿ ಬಹಳ ನೋವನ್ನು ಹೊಂದಿದ್ದರೂ ಬಹುಶಃ ತನ್ನ ಹೃದಯದಲ್ಲಿ ಸಂಪೂರ್ಣವಾಗಿ ತೀರಿತು ಎಂದು ಹೇಳಿ ತನ್ನ ಜೀವನವನ್ನು ತಂದೆಯ ಬಳಿ ಒಪ್ಪಿಕೊಟ್ಟರು.

 

ನನ್ನ ಪ್ರಿಯರೇ, ದೇವರು ಆತನಿಂದ ಪೂರ್ವನಿರ್ಧರಿತವಾದವರೊಂದಿಗೆ ತನ್ನ ಕೆಲಸವನ್ನು ಸಾಧಿಸುತ್ತಾನೆ. ದೇವರು ನೋಹನಿಗೆ ತನ್ನ ಯೋಜನೆಯನ್ನು ಪೂರೈಸಲು ಬಯಸಿದಾಗ ನೋಹನು ಅದಕ್ಕೆ ವಿಧೇಯದನು. ಆದ್ದರಿಂದಲೇ ದೈವ ಭಕ್ತಿಯುಳ್ಳ ತಲೆಮಾರುಗಳು ಸೃಷ್ಟಿಯಾಗಲು ಮತ್ತು ಭೂಮಿಯ ಮೇಲಿನ ಎಲ್ಲಾ ಜೀವಿಗಳೂ ಸೃಷ್ಟಿಯಾಗಲು ಕಾರಣರಾಗಿದ್ದರು.

 

ಆದರೆ ಯೇಸು ಕ್ರಿಸ್ತನ ವಿಧೇಯತೆಯಿಂದ ಇಡೀ ಜಗತ್ತು ರಕ್ಷಿಸಲ್ಪಟ್ಟಿದೆ ಎಂಬುದು ಎಷ್ಟು ದೊಡ್ಡ ಸಂತೋಷವಾಗಿದೆ. ಇಂದು ನಾವು ನಮ್ಮ ವಿಧೇಯತೆಯ ಬಗ್ಗೆ ಸ್ವಲ್ಪ ಯೋಚಿಸೋಣ. ನಮ್ಮ ವಿಧೇಯತೆಯು ನಮ್ಮ ಕುಟುಂಬವನ್ನು ಕಾಪಾಡುತ್ತದೆಯೇ? ನಮ್ಮ ಸುತ್ತಲಿರುವವರನ್ನು ಕಾಪಾಡುತ್ತದೆಯೇ? ನಮ್ಮ ಸ್ವಂತದವರು ಕಾಪಾಡಲ್ಪಡುತ್ತಾರೆಯೇ? ಯೇಸುವನ್ನು ತಿಳಿಯದ ಅನ್ಯ ಮತದವರು ಕಾಪಾಡಲ್ಪಡುತ್ತಾರೆಯೇ? ಯೇಸು ತಂದೆಯ ಚಿತ್ತವನ್ನು ಮಾಡಿ "ತೀರಿತು" ಎಂದು ಹೇಳಿದಾಗ ಮಾನವಕುಲದ ವಿಮೋಚನೆಯು ಪ್ರಾರಂಭವಾಯಿತು. ನಾವು ನಮ್ಮ ಕರ್ತವ್ಯಗಳನ್ನು ಮುಗಿಸಿ "ತೀರಿತು" ಎಂದು ಹೇಳಿ ನಮ್ಮ ಕಣ್ಣುಗಳನ್ನು ಮುಚ್ಚುವಾಗ ನಮ್ಮ ನಂತರ ಬರುವವರು ದೈವಿಕ ಸಂತತಿಯಾಗುತ್ತಾರೆಯೇ? ಅದಕ್ಕೆ ನಾವು ಇಂದಿನ ದಿನಗಳಲ್ಲಿ ದೇವರ ಚಿತ್ತವನ್ನು ನೆರವೇರಿಸಲ ಪ್ರಯತ್ನಿಸೋಣವಾ? ಯೇಸುವಿನ ಮಾತುಗಳಿಗೆ ವಿಧೇಯರಾಗುವುದರಲ್ಲಿ ನಿಮ್ಮ ಪಾಲು ಇದೆಯೇ?

- Bro.ಪೊನ್ಮಣಿ ಪಾಲ್

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯನ್ನು ಓದುವವರು ಸತ್ಯದಲ್ಲಿ ಬೆಳೆಯಲು ಮತ್ತು ಸಾಕ್ಷಿಯಾಗಿ ಜೀವಿಸಲು ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet