Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.05.2022
Share:

By Village Missionary Movement

Saturday, 07-May-2022

ಧೈನಂದಿನ ಧ್ಯಾನ(Kannada) – 07.05.2022

 

ದುರ್ಗುಣ

 

“ಎಲ್ಲಾ ದ್ವೇಷ... ಸಕಲವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ" - ಎಫೆಸದವರಿಗೆ 4:31

 

ಇಂಗ್ಲಿಷ್ ನಲ್ಲಿ ದುರ್ಗುಣ ಎಂಬ ಪದದ ಅರ್ಥ malice. ಇದರರ್ಥ ದುಷ್ಟ ಉದ್ದೇಶ ಅಥವಾ ಇತರರಿಗೆ ಹಾನಿ ಮಾಡುವ ಬಯಕೆ ಎಂಬುದಾಗಿದೆ. ಅಂದರೆ ನಾವು ದ್ವೇಷಿಸುವ ವ್ಯಕ್ತಿಯ ಮೇಲೆ ಕೆಲವು ರೀತಿಯಲ್ಲಿ ಆಕ್ರಮಣ ಮಾಡುವುದು. ಹಾಮಾನನು ತನ್ನನ್ನು ನಮಸ್ಕರಿಸದ ಮೊರ್ದೆಕೈಯನ್ನು ತನ್ನ ಕುಲದವರೊಡನೆ ನಾಶಮಾಡಲು ಸಂಚು ಹೂಡಿದನು! ಈಜೆಬೆಲಳು ಮೋಸದಿಂದ ಅಮಾಯಕ ನಾಬೋತನನ್ನು ಕೊಂದಳು! ಸಹಾಯಕ್ಕಾಗಿ ತನ್ನ ಬಳಿಗೆ ಬಂದ ದಾವೀದನ ಜನರನ್ನು ನಾಬಾಲನು ಅವಮಾನಿಸಿ ಕಳುಹಿಸಿದನು! .... ಇವೆಲ್ಲವೂ ದುಷ್ಟತನದ ಕಾರ್ಯಗಳಾಗಿವೆ. ಬಹುಶಃ ಇವರೆಲ್ಲರೂ ಬಹಳ ಬುದ್ಧಿವಂತಿಕೆಯಿಂದ ವರ್ತಿಸಿದ್ದಾರೆಂದು ಭಾವಿಸಿದ್ದಾರೆ. ಆದರೆ ಯಾಕೋಬ 3:15 ರಲ್ಲಿ ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತ ಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು.

ಎಂದು ನಾವು ಓದುತ್ತೇವೆ.

 

ಯಾರನ್ನಾದರೂ ನೋಯಿಸಲು ಅವಮಾನಿಸಲು ಏನು ಮಾಡಿದರೂ ಅದು ದುರ್ಗುಣವೇ. ಖಾಲಿ ಪತ್ರಗಳನ್ನು ಬರೆಯುವುದು, ವದಂತಿಗಳನ್ನು ಹರಡುವುದು, ನಿಂದೆ ಹೊರಿಸುವುದು, ನೆರೆಹೊರೆಯವರಲ್ಲಿ ನಿಂದೆಯ ಮಾತುಗಳನ್ನು ಹರಡುವುದು, ನಾವು ದ್ವೇಷಿಸುವ ಜನರ ಸದ್ಗುಣಗಳನ್ನು ಮೆಚ್ಚದಿರುವುದು ಮತ್ತು ಅವರ ಕಾರ್ಯಗಳಲ್ಲಿ ದೋಷವನ್ನು ಕಂಡುಹಿಡಿಯುವುದು ಇವೆಲ್ಲವೂ ದುರ್ಗುಣಗಳಾಗಿವೆ.

 

ಜ್ಞಾನೋಕ್ತಿಗಳು 24:9 ರಲ್ಲಿ ದುಷ್ಟ ಉದ್ದೇಶವು ಪಾಪ ಎಂದು ನಾವು ಓದುತ್ತೇವೆ. ಜೀಫ್ ಊರಿನವರು ಅರಣ್ಯದಲ್ಲಿ ಅಡಗಿಕೊಂಡಿದ್ದ ದಾವೀದನನ್ನು, ಅರಸನಾದ ಸೌಲನನ್ನು ಮೆಚ್ಚಿಸಲು ತೋರಿಸಿಕೊಟ್ಟ ಹಾಗೆ, ಉನ್ನತ ಹುದ್ದೆಯಲ್ಲಿರುವವರನ್ನು ಮೆಚ್ಚಿಸಲು ಅನ್ಯಾಯದ ಕೃತ್ಯಗಳನ್ನು ಮಾಡುವುದು ಅವಿವೇಕದ ಕೆಲಸ. ಯೋಸೇಫನು ಸಜ್ಜನನಾಗಿದ್ದು, ಮರಿಯಳನ್ನು ಅವಮಾನಿಸದೆ ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಯಾರಿಗೂ ತಿಳಿಯದಂತೆ ಆ ಕಾರ್ಯವನ್ನು ರಹಸ್ಯವಾಗಿ ಇರಿಸಲು ಸಿದ್ಧನಿದ್ದನು ಎಂದು ಸತ್ಯವೇದವು ಹೇಳುತ್ತಿದೆ. ಹೌದು! ನೀತಿವಂತರು ದುಷ್ಟತನಕ್ಕೆ ಸ್ಥಳ ಕೊಡುವುದಿಲ್ಲ.

 

ನಮ್ಮ ದುಷ್ಟತನವನ್ನು ವ್ಯಕ್ತಪಡಿಸಲು ನಮಗೆ ಎಲ್ಲಾ ಸ್ವಾತಂತ್ರ್ಯವಿದೆ. ಆದರೆ ಹಾಗೆ ಮಾಡದಿರಲು ನಾವು ನಮ್ಮನ್ನು ದೇವರಿಗೆ ದಾಸರಾಗಿ ಒಪ್ಪಿಸಬೇಕು (1 ಪೇತ್ರ 2:16). ವಿಧೇಯರಾಗೋಣವಾ?

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಹಳ್ಳಿಗಳಲ್ಲಿ VBS ಗೆ ಸಿದ್ಧವಾಗಲು You tube-ನಲ್ಲಿ ನಾವು ಹೊರಬಿಡುತ್ತಿರುವ ಕಾರ್ಯಕ್ರಮಗಳ ಮೂಲಕ ಹಳ್ಳಿಗಳಲ್ಲಿ ಚಿಕ್ಕ ಮಕ್ಕಳ ನಡುವೆ ಸೇವೆ ಮಾಡುವ ವ್ಯಕ್ತಿಗಳು ಮುಂದೆ ಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet