Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.05.2022 (Kids Special)
Share:

By Village Missionary Movement

Sunday, 15-May-2022

ಧೈನಂದಿನ ಧ್ಯಾನ(Kannada) – 15.05.2022 (Kids Special)

 

ಒಳ್ಳೆಯದನ್ನು ಬಿತ್ತು ಅದನ್ನೇ ಕೊಯ್ಯುತ್ತೀಯ

 

 "...ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು" - ಗಲಾತ್ಯ 6:7

 

ಒಂದು ಊರಿನಲ್ಲಿ ಮರದ ವ್ಯಾಪಾರಿಯೊಬ್ಬರು ದೊಡ್ಡ ಸೌದೆ ಅಂಗಡಿಯನ್ನು ನಡೆಸುತ್ತಿದ್ದರು. ಆ ಅಂಗಡಿಯ ಬಳಿ ಇನ್ನೊಬ್ಬ ಕಬ್ಬಿಣದ ವ್ಯಾಪಾರಿ ಕಬ್ಬಿಣದ ಅಂಗಡಿಯನ್ನು ನಡೆಸುತ್ತಿದ್ದರು. ಇಬ್ಬರು ಅಂಗಡಿಯವರು ಸ್ನೇಹಿತರಾಗಿ ವ್ಯಾಪಾರ ನಡೆಸುತ್ತಿದ್ದರು. ಮರದ ವ್ಯಾಪಾರಿ ವ್ಯಾಪಾರ ಬೆಳೆದಂತೆ ಕಬ್ಬಿಣದ ಅಂಗಡಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದನು.

 

ಒಂದು ದಿನ ಕಬ್ಬಿಣದ ವ್ಯಾಪಾರಿ ತನ್ನ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಲು ನಿರ್ಧರಿಸಿದನು. ಅವನು ತನ್ನ ಸ್ನೇಹಿತನಾದ, ಮರದ ವ್ಯಾಪಾರಿಯ ಬಳಿ ತನ್ನ ಅಂಗಡಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಹೇಳಿ ಹೊರಟು ಹೋದನು. ಈ ಮರದ ವ್ಯಾಪಾರಿ ಅವರು ಹಿಂತಿರುಗಿ ಬರುವಷ್ಟರಲ್ಲಿ ಕಬ್ಬಿಣದ ಸಾಮಾನುಗಳನ್ನೆಲ್ಲ ಮಾರಿ ಏನೂ ಆಗಿಲ್ಲ ಎಂಬಂತೆ ಸುಮ್ಮನಾಗಿಬಿಟ್ಟನು. ಖುಷಿಯಿಂದ ಪ್ರವಾಸಕ್ಕೆ ಹೋಗಿದ್ದ ಕಬ್ಬಿಣದ ವ್ಯಾಪಾರಿ ಸಂತೋಷದಿಂದ ಮನೆಗೆ ಹಿಂತಿರುಗಿ ಬಂದು ಅಂಗಡಿಯತ್ತ ನೋಡಿದರು. ಅಲ್ಲಿ ಒಂದು ಕಬ್ಬಿಣವೂ ಕಾಣದೇ ದುಃಖ ಪಟ್ಟರು. ದುಃಖದೊಂದಿಗೆ ಮರದ ವ್ಯಾಪಾರಿಯ ಬಳಿ ಹೋಗಿ ಏನಾಯ್ತು ಎಂದು ಕೇಳಿದರು. ಇಲಿ ತಿಂದು ಬಿಟ್ಟಿತು ಎಂದು ಅಸಡ್ಡೆಯಿಂದ ಉತ್ತರಿಸಿದನು. ಇಬ್ಬರಿಗೂ ವಾದ ಬಂತು. ಈ ಪ್ರಕರಣವನ್ನು ರಾಜನ ಬಳಿಗೆ ಒಯ್ಯಲಾಯಿತು. ಅರಸನು ಮರದ ವ್ಯಾಪಾರಿ ಹೇಳಿದ ಮಾತನ್ನು ನಂಬುವಂತೆ ನಟಿಸಿದರು. ದಿನಗಳು ಉರುಳಿದವು, ಕೆಲವು ತಿಂಗಳುಗಳ ನಂತರ ಮತ್ತೆ ಕಬ್ಬಿಣದ ವ್ಯಾಪಾರಿ ಹಬ್ಬಕ್ಕೆ ತನ್ನ ಸ್ವಂತ ಊರಿಗೆ ಹೋಗಲು ಮರದ ವ್ಯಾಪಾರಿಯನ್ನು ಆಹ್ವಾನಿಸಿದರು. ಅವರು ಬರಲು ನಿರಾಕರಿಸಿದರು. ನಿನ್ನ ಮಗನನ್ನಾದರೂ ಕಳುಹಿಸಿಕೊಡು ಎಂದರು. ಮರದ ವ್ಯಾಪಾರಿಯು ಒಪ್ಪಿ ತನ್ನ ಒಬ್ಬನೇ ಮಗನನ್ನು ಕಬ್ಬಿಣದ ವ್ಯಾಪಾರಿಯೊಂದಿಗೆ ಕಳುಹಿಸಿದರು. ಎಲ್ಲರೂ ಹೋಗಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

 

ಹಬ್ಬ ಮುಗಿಸಿ ಹಿಂತಿರುಗಿ ಬಂದಾಗ, ಮರಕಡಿಯುವವನ ಮಗ ಬರಲಿಲ್ಲ! ಮರದ ವ್ಯಾಪಾರಿ ತನ್ನ ಮಗ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾದನು. ನನ್ನ ಮಗ ಎಲ್ಲಿದ್ದಾನೆ ಎಂದು ಕಬ್ಬಿಣದ ವ್ಯಾಪಾರಿಯನ್ನು ಕೇಳಿದರೆ, ಅವನು ನಿನ್ನ ಮಗನನ್ನು ಹದ್ದು ತೆಗೆದುಕೊಂಡು ಹೋಯಿತು ಎಂದು ಹೇಳಿದನು. ಕೂಡಲೇ ಮರದ ವ್ಯಾಪಾರಿ 10 ವರ್ಷದ ಬಾಲಕನನ್ನು ಹದ್ದು ಹೇಗೆ ಎತ್ತಿಕೊಂಡು ಹೋಗುತ್ತದೆ ಎಂದು ಹೇಳಿ ಅತ್ತರು. ಪ್ರಕರಣ ಅದೇ ರಾಜನ ಬಳಿಗೆ ಹೋಯಿತು. ರಾಜನು, "ಕಬ್ಬಿಣವನ್ನು ಇಲಿ ತಿನ್ನುತ್ತದೆ ಎಂದರೆ, ಹುಡುಗನನ್ನು ಸಹ ಹದ್ದು ಎತ್ತಿಕೊಂಡು ಹೋಗಲು ಸಾಧ್ಯ" ಎಂದು ರಾಜ ತೀರ್ಪು ನೀಡಿದರು. ಮರದ ವ್ಯಾಪಾರಿಗೆ ತನ್ನ ತಪ್ಪಿನ ಅರಿವಾಗಿ ಅಳುತ್ತಾ ರಾಜನ ಕಾಲಿಗೆ ಬಿದ್ದು, "ನಾನು ತಪ್ಪು ಮಾಡಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿ ತಾನು ಕಬ್ಬಿಣವನ್ನು ಮಾರಿದ ಹಣವನ್ನು ತಂದು ರಾಜನಿಗೆ ಕೊಟ್ಟನು. ಕಬ್ಬಿಣದ ವ್ಯಾಪಾರಿಯು ಸಹ ಅವರ ಮಗನನ್ನು ರಾಜನ ಬಳಿಗೆ ಕರೆದುಕೊಂಡು ಬಂದರು. ಮರದ ವ್ಯಾಪಾರಿ ತನ್ನ ಮಗನನ್ನು ಸಂತೋಷದಿಂದ ಕರೆದುಕೊಂಡು, ಕಬ್ಬಿಣದ ವ್ಯಾಪಾರಿಗೆ ಕ್ಷಮೆಯಾಚಿಸಿ ತನ್ನ ಮನೆಗೆ ಹೊರಟು ಹೋದನು.

 

ತಮ್ಮ-ತಂಗಿ ನೀವು ಇತರರಿಗೆ ಏನು ಮಾಡುತ್ತೀರೋ ಅದೇ ಹಿಂತಿರುಗಿ ನಿಮ್ಮ ಬಳಿಗೆ ಬರುತ್ತದೆ ಎಂಬುದನ್ನು ಮರೆಯಬೇಡಿರಿ. ಯಾವಾಗಲೂ ಇತರರಿಗೆ ಒಳ್ಳೆಯದನ್ನೇ ಮಾಡಲು ಅಭ್ಯಾಸ ಮಾಡಿಕೊಳ್ಳಿರಿ.

- Mrs. ಅನಿತಾ ಅಲಗರಸಾಮಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet