By Village Missionary Movement
Saturday, 28-May-2022ಧೈನಂದಿನ ಧ್ಯಾನ(Kannada) – 28.05.2022
ಧೂಳು ತುಂಬಿದ ಮನೆ
"ಧರ್ಮಶಾಸ್ತ್ರವು...ಯಾವ ಕೆಲಸವನ್ನು ಮಾಡಲಾರದೆ ಇತ್ತೋ ಅದನ್ನು ದೇವರೇ ಮಾಡಿದನು...ತನ್ನ ಮಗನನ್ನು... ಕಳುಹಿಸಿಕೊಟ್ಟು... ಮರಣದಂಡನೆಯನ್ನು ವಿಧಿಸಿದನು" - ರೋಮಾ 8:3
ಧರ್ಮಶಾಸ್ತ್ರ (ಕಾನೂನುಗಳು) ಮಾಡಿದ್ದೇನು? ಧರ್ಮಶಾಸ್ತ್ರದಿಂದ ಮಾಡಲಾಗದೇ ಹೋದದ್ದೇನು? ಎಂದು, ಇಂದು ಯೋಚಿಸೋಣ? ಧರ್ಮಶಾಸ್ತ್ರದ ಮೂಲಕ ಪಾಪ ಏನೆಂದು ತಿಳಿಯಲು ಸಾಧ್ಯವಾಯಿತು. ಮೋಶೆಗೆ ಧರ್ಮಶಾಸ್ತ್ರವನ್ನು ಕೊಡುವ ಮುಂಚೆಯೇ ಪಾಪವು ಜಗತ್ತಿನಲ್ಲಿ ಅಸ್ತಿತ್ವದಲ್ಲಿತ್ತು. ಆದಾಗ್ಯೂ, ಧರ್ಮಶಾಸ್ತ್ರ ನೀಡಿದ ನಂತರವೇ, ಪಾಪವು ಪಾಪವೆಂದು ಅರಿತುಕೊಳ್ಳಲಾಯಿತು. ಧರ್ಮಶಾಸ್ತ್ರವು ಪರಿಶುದ್ಧವಾದದ್ದು. ಧರ್ಮಶಾಸ್ತ್ರವು ಮರಣವನ್ನು ತರಲಿಲ್ಲ, ಆದರೆ ಪಾಪವೇ ಮರಣವನ್ನು ತಂದಿತು. ಇದನ್ನು ವಿವರಿಸುವ ಒಂದು ದೃಶ್ಯವನ್ನು ಚಿತ್ರಿಸುವ '' ಮೋಕ್ಷ ಪ್ರಯಾಣ '' ಪುಸ್ತಕದ ಲೇಖಕರು ಚಿತ್ರಿಸುವುದನ್ನು ನೋಡೋಣವಾ?
ಜಾನ್ ಬನಿಯನ್ ಅವರ "ಮೋಕ್ಷ ಪ್ರಯಾಣ" ಪುಸ್ತಕದ ಕಥಾನಾಯಕನಾದ ಕ್ರಿಸ್ಟಿಯಾನೋ ಒಂದು ದಿನ ಒಬ್ಬ ಸುವಾರ್ತಾ ಬೋಧಕನನ್ನು ಭೇಟಿಯಾಗಿ, ಬರಲಿರುವ ಕೋಪದಿಂದ ತಪ್ಪಿಸಿಕೊಳ್ಳಲು ಬಹು ದೂರದಲ್ಲಿರುವ ಒಂದು ಕಿರಿದಾದ ಬಾಗಿಲನ್ನು ತೋರಿಸಿ ಅವನನ್ನು ಪ್ರೀತಿಯಿಂದ ಕಳುಹಿಸಿ ಕೊಟ್ಟರು. ಅವನು ಈ ಕಿರಿದಾದ ಹಾದಿಯಲ್ಲಿ ಸಾಗಿ ಅರ್ಥಹೇಳುವವರ ಮನೆಯನ್ನು ತಲುಪಿದನು.
ಇದುವರೆಗೂ ಸ್ವಚ್ಛಗೊಳಿಸದ ಒಂದು ದೊಡ್ಡ ಕೋಣೆಯೊಳಕ್ಕೆ ಕರೆದೊಯ್ದರು ಆ ಅರ್ಥಹೇಳುವವರು. ಕೋಣೆಯಲ್ಲಿ ಧೂಳು ತುಂಬಿತ್ತು. ಅರ್ಥ ಹೇಳುವವರು ಕ್ಲೀನರ್ ಅನ್ನು ಕರೆದು ಕೊಠಡಿಯನ್ನು ಗುಡಿಸಿ ಸ್ವಚ್ಛ ಮಾಡುವಂತೆ ಆದೇಶಿಸಿದರು. ಅವನು ಪೊರಕೆಯಿಂದ ಕೋಣೆಯನ್ನು ಗುಡಿಸಿದನು, ಧೂಳು ಹೊಗೆಯಂತೆ ತುಂಬಿ ಕೊಂಡಿತು. ಉಸಿರಾಡಲು ಬಹು ಕಷ್ಪಪಟ್ಟರು ಕ್ರಿಸ್ಟಿಯಾನೋ! ಅರ್ಥ ಹೇಳುವವರು ಹತ್ತಿರದಲ್ಲಿದ್ದ ಮಹಿಳೆಗೆ, “ಸ್ವಲ್ಪ ನೀರು ತಂದು ಕೋಣೆಯಲ್ಲೆಲ್ಲಾ ಚಿಮುಕಿಸು” ಎಂದು ಹೇಳಿದರು. ನೀರು ಚಿಮುಕಿಸಿದ ನಂತರ ಕೊಠಡಿಯನ್ನು ಸ್ವಚ್ಛಗೊಳಿಸಲು ಸುಲಭವಾಯಿತು. "ಅಯ್ಯಾ, ಇದರ ಅರ್ಥವೇನು?" ಎಂದು ಕ್ರಿಸ್ಟಿಯಾನೋ ಕೇಳಿದರು.
"ಈ ಕೋಣೆಯೇ ಮನುಷ್ಯನ ಹೃದಯ. ಆ ಧೂಳು ಅವನನ್ನು ಕಲುಷಿತಗೊಳಿಸಿದ ಪಾಪಗಳು, ಮೊದಲು ಹಾಗೆಯೇ ಕೋಣೆಯನ್ನು ಗುಡಿಸಿದವನೇ ಧರ್ಮಶಾಸ್ತ್ರ, ನೀರನ್ನು ತಂದು ಚಿಮುಕಿಸಿದ ಮಹಿಳೆಯೇ ಯೇಸುವಿನ ಸುವಾರ್ತೆ. ಧರ್ಮಶಾಸ್ತ್ರವೆಂಬ ಕಾನೂನುಗಳು ನಮ್ಮ ಪಾಪಗಳನ್ನು ಎತ್ತಿ ತೋರಿಸುವುದರಿಂದ ಅವು ಹೆಚ್ಚಾಗುತ್ತವೆ. ನಾವು ಯೇಸುವಿನ ಸುವಾರ್ತೆಯನ್ನು ನಾವು ಸ್ವೀಕರಿಸಿದಾಗ, ನಮ್ಮ ಪಾಪಗಳು ನೀಗಿ, ನಮ್ಮ ಹೃದಯಗಳು ಶುದ್ಧವಾಗುತ್ತವೆ. ಆಗ ಮಾತ್ರವೇ ಮಹಿಮೆಯ ಅರಸನು ಅದರಲ್ಲಿ ವಾಸಿಸಲು ಸಾಧ್ಯ." ಎಂದು ಕ್ರಿಸ್ಟಿಯಾನೋ ಅವರಿಗೆ ಅರ್ಥವಾಗುವಂತೆ ವಿವರಿಸಿದರು. ಹೌದು, ಯಾವ ಮನುಷ್ಯನೂ ಧರ್ಮಶಾಸ್ತ್ರದ ಕಾರ್ಯಗಳಿಂದ ನೀತಿವಂತನಾಗುವುದಿಲ್ಲ. ಯೇಸು ಕ್ರಿಸ್ತನಲ್ಲಿರುವ ನಂಬಿಕೆಯಿಂದಲೇ ನೀತಿವಂತನಾಗುತ್ತಾನೆ. ಹೌದು, ನಮ್ಮ ಪಾಪಗಳು ಧರ್ಮಶಾಸ್ತ್ರದಿಂದಲ್ಲ, ಯೇಸುಕ್ರಿಸ್ತನ ರಕ್ತದಿಂದಲೇ ತೊಳೆಯಲ್ಪಡಲು ಸಾಧ್ಯ. ಯೇಸುಕ್ರಿಸ್ತನ ರಕ್ತದ ಶ್ರೇಷ್ಠತೆಯನ್ನು ತಿಳಿದುಕೊಳ್ಳೋಣ. ಜಯಕರವಾಗಿ, ಬಿಡುಗಡೆಯೊಂದಿಗೆ ಜೀವಿಸೋಣ.
- Mrs. ಬ್ಯೂಲಾ ಸೆಲ್ವರಾಜ್
ಪ್ರಾರ್ಥನಾ ಅಂಶ:
7000 ಸೇವಕರ ಮೂಲಕ ಒಂದು ಲಕ್ಷ ಹಳ್ಳಿಗಳನ್ನು ತಲುಪಲು ಮಾಡುವ ಎಲ್ಲಾ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482