Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.06.2022
Share:

By Village Missionary Movement

Wednesday, 01-Jun-2022

ಧೈನಂದಿನ ಧ್ಯಾನ(Kannada) – 01.06.2022

 

ಆತ್ಮದ ಖಡ್ಗ

 

"ಹಾಲು ಕುಡಿಯುವವನು ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ." - ಇಬ್ರಿಯ 5:13

 

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಾವು ನಮ್ಮ ನೆರೆಯ ಪಾಕಿಸ್ತಾನದೊಂದಿಗೆ ಕೆಲವು ಯುದ್ಧಗಳನ್ನು ಎದುರಿಸಬೇಕಾಯಿತು. ನಮ್ಮ ಭಾರತ ದೇಶವು ಎಲ್ಲಾ ಯುದ್ಧಗಳಲ್ಲಿ ಪಾಕಿಸ್ತಾನವನ್ನು ಜಯಿಸಿದೆ. ಪಾಕಿಸ್ತಾನದ ಸೇನೆಯು ತಮ್ಮ ಸೇನೆಯ ದೌರ್ಬಲ್ಯಗಳೇನು ಎಂಬುದನ್ನು ಪರಿಶೋಧಿಸಿತು. ಅವರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಹೇಗೆ ಎಂದು ತಿಳಿದಿರದ ಕಾರಣ ಅವರು ಯುದ್ಧದಲ್ಲಿ ಸುಲಭವಾಗಿ ಸೋಲಿಸಲ್ಪಟ್ಟರು ಎಂದು ಅವರು ಕಂಡುಕೊಂಡರು, ಅಂದರೆ ಅವರು ಕಡಿಮೆ ತರಬೇತಿ ಪಡೆದಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರೂ ಅದರ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಯುದ್ಧದಲ್ಲಿ ಬೆನ್ನುತೋರಿಸಬೇಕಾಯಿತು. ಇದರಿಂದ ನಾವು ಕಲಿಯಬೇಕಾದ ಒಂದು ಸಂದೇಶವಿದೆ.

 

ಆಧ್ಯಾತ್ಮಿಕ ಜಗತ್ತಿನಲ್ಲಿ ನಮ್ಮ ವಿರುದ್ಧ ಯುದ್ಧವಿದೆ. ಅದರಲ್ಲಿ ನಮಗೆ ಸೈತಾನನ ವಿರುದ್ಧ ಯುದ್ಧವಿದೆ. ಅದರಲ್ಲಿ ಸೈತಾನನನ್ನು ಎದುರಿಸಿ ನಾವು ಯುದ್ಧ ಮಾಡಬೇಕಾದದ್ದು ಅಗತ್ಯ. ಸೈತಾನನ ಬಳಿ ದುರ್ಬಲ ಆಯುಧಗಳು ಮಾತ್ರವೇ ಇದೆ. ಆದರೆ ಅದರಿಂದಲೇ ಕುತಂತ್ರವಾಗಿ ಹಲವರ ಮೇಲೆ ದಾಳಿ ಮಾಡುತ್ತಾನೆ. ಅದೇ ಸಮಯದಲ್ಲಿ ದೇವರ ಮಕ್ಕಳಾದ ನಮ್ಮ ಬಳಿ ಬಲವಾದ ಅಸ್ತ್ರಗಳು ಇವೆ. ಪೌಲನು ಎಫೆಸದವರಿಗೆ 6 ನೇ ಅಧ್ಯಾಯದಲ್ಲಿ ನಮ್ಮ ಬಳಿ ಯಾವ ಯಾವ ಆಯುಧಗಳು ಇವೆ ಎಂದು ಪಟ್ಟಿಮಾಡುತ್ತಾರೆ. ಹೀಗೆ ಸರ್ವಾಯುಧಗಳನ್ನು ಧರಿಸಿಕೊಂಡು ಕ್ರಿಸ್ತನಲ್ಲಿ ಪುರುಷರಾಗಿ ಕಾಣಲ್ಪಡಬೇಕಾದ ನಾವು ಇನ್ನೂ ಮಕ್ಕಳಂತೆ ತೆವಳುತ್ತಿರುವುದು ದುಃಖದ ಸಂಗತಿಯಾಗಿದೆ. ಅದರಲ್ಲೂ ವಿಶೇಷವಾಗಿ ದೇವರ ವಾಕ್ಯವೆಂಬ ಆತ್ಮದ ಖಡ್ಗವನ್ನು ಉಪಯೋಗಿಸಲು ಅಭ್ಯಾಸವಿಲ್ಲದವರು, ಸೈತಾನನಿಗೆ ಸುಲಭವಾಗಿ ಆಹಾರವಾಗಿಬಿಡುತ್ತಾರೆ. ಯೇಸು ಕ್ರಿಸ್ತನನ್ನು ಶೋಧಿಸಲು ಸೈತಾನನು ತಂದ ಮೂರು ಶೋಧನೆಗಳನ್ನು ದೇವರ ವಾಕ್ಯದಿಂದ ಯೇಸು ಜಯಿಸಿದರು. ಸತ್ಯವೇದದಲ್ಲಿ ಹೀಗೆ ಬರೆಯಲ್ಪಟ್ಟಿದೆಯಲ್ಲಾ ಎಂದು ಪದೇ ಪದೇ ಯೇಸುಕ್ರಿಸ್ತನು ತೋರಿಸಿದರು.   

 

ಇದನ್ನು ಓದುತ್ತಿರುವ ನನ್ನ ಪ್ರೀತಿಯ ಕ್ರೈಸ್ತ ಬಾಂಧವರೇ! ನಿಮ್ಮೊಳಗೆ ಕ್ರಿಸ್ತನ ವಾಕ್ಯಗಳು ತುಂಬಿರಬೇಕೆಂದು ದೇವರು ಬಯಸುತ್ತಿದ್ದಾರೆ. ನಿಮಗೆ ಎದುರಾಗುವ ಎಲ್ಲಾ ತೊಂದರೆಗಳನ್ನು ಮತ್ತು ಶತ್ರುಗಳ ತಂತ್ರಗಳನ್ನು ಮತ್ತು ಮಾಯಾಜಾಲವನ್ನು ಜಯಿಸಲು ದೇವರ ವಾಕ್ಯಕ್ಕಿಂತ ಬೇರೆ ದೊಡ್ಡ ಆಯುಧವಿಲ್ಲ. ಆದ್ದರಿಂದ ಪರಿಶುದ್ಧ ಗ್ರಂಥವನ್ನು ಕೈಯಲ್ಲಿ ತೆಗೆದುಕೊಂಡು ಅದನ್ನು ಗಂಟೆಗಟ್ಟಲೆ ಓದಿ, ಧ್ಯಾನ ಮಾಡಿ ಮತ್ತು ವಾಕ್ಯದಿಂದ ತುಂಬಿಸಲ್ಪಡಿರಿ ಆಗ ನೀವು ವಿಜಯಶಾಲಿಯಾಗಿ ಕಾಣುವಿರಿ. ಆಮೆನ್!

- P.ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರು ತನ್ನ ಶಕ್ತಿಯನ್ನು ಪ್ರಕಟಗೊಳಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet güncel holiganbet giriş holiganbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet cashwin tambet grandpashabet bahiscasino amgbahis betbey amgbahis radissonbet betpuan cashwin matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet