Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.06.2022 (Kids Special)
Share:

By Village Missionary Movement

Sunday, 12-Jun-2022

ಧೈನಂದಿನ ಧ್ಯಾನ(Kannada) – 12.06.2022 (Kids Special)

 

ಪ್ರಯತ್ನಿಸು

 

“ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು." - ಕೀರ್ತನೆ 18:29

 

ಪುಟಾಣಿಗಳೇ! ಬಹಳ ದಿನಗಳ ರಜೆಯ ನಂತರ ಶಾಲೆಗೆ ಹೋಗೋದು ತುಂಬಾ ಕಷ್ಟವಾಗಿ ಇದೆಯೇ? ಎರಡೇ ದಿನಗಳಲ್ಲಿ ಅಭ್ಯಾಸ ಆಗಿಬಿಡುತ್ತದೆ. ಬೇಗ ಎದ್ದು ಕರೆಕ್ಟ್ ಟೈಮಿಗೆ, ಸ್ಕೂಲ್ ಬಸ್ಸಿನಲ್ಲಿ, ಆಟೋದಲ್ಲಿ ನಿಮ್ಮನ್ನು ಕಳುಹಿಸುವವರೆಗೆ ಅಮ್ಮ ವಿಶ್ರಾಂತಿ ತೆಗೆದುಕೊಳ್ಳೋದಿಲ್ಲ. ಬೆಳಿಗ್ಗೆ ಬೇಗ ಎದ್ದು ಅಡುಗೆ ಮಾಡಿ ಮನೆಗೆ ಬೇಕಾದ್ದನ್ನೆಲ್ಲ ದಣಿವರಿಯದೆ ಮಾಡುವ ಪೋಷಕರ ಮಾತನ್ನು ನಿರ್ಲಕ್ಷಿಸಬಾರದು. 6:00 ಗಂಟೆ ಆಗೋಯ್ತು, 7:00 ಗಂಟೆ... ಎದ್ದೇಳು, ಎದ್ದೇಳು ಎಂದು ಹೇಳುವ ಮೊದಲೇ, ನೀನೆದ್ದು Prayer ಮಾಡಿ Bible ಓದಿ School- ಗೆ ಹೋಗಬೇಕು. ಈ ಹೊಸ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಧ್ಯಯನ ಮಾಡಲು ಪ್ರಯತ್ನಿಸುವುದು ಬಹಳ ಮುಖ್ಯ.

ಇಂದು ನಾವು ಅದರ ಬಗ್ಗೆಯೇ ಕಥೆಯನ್ನು ಕೇಳಲಿದ್ದೇವೆ. ಕೇಳೋಣವಾ? ಒಬ್ಬ ರಾಜನು ತನ್ನ ಊರಿನ ಜನರ ಬಳಿ,

 

"ನಿಮ್ಮಲ್ಲಿ ಯಾರು ಬಲಶಾಲಿ ಎಂದು ಕಂಡುಹಿಡಿಯಲು ನಾನು ಸ್ಪರ್ಧೆಯನ್ನು ನಡೆಸಲಿದ್ದೇನೆ, ಸ್ಪರ್ಧಿಗಳು ಒಂದು ವಾರದ ನಂತರ ಅರಮನೆಗೆ ಬರಬೇಕು" ಎಂದು ಘೋಷಿಸಿದರು. "ವಿಜೇತರಿಗೆ 1000 ಚಿನ್ನದ ನಾಣ್ಯಗಳು ಸಿಗುತ್ತವೆ" ಎಂದು ಹೇಳಿದಾಗ ಗ್ರಾಮಸ್ಥರು ಹೆಚ್ಚಿನ ಖುಷಿಯಿಂದ ಪಂದ್ಯಕ್ಕೆ ಸಿದ್ಧರಾದರು. ವ್ಯಾಯಾಮ ಮಾಡಿದರು, ಕೆಲವು ಆರೋಗ್ಯಕರ ಆಹಾರ ತಿಂದರು, ಜಿಮ್ ಗೆ ಹೋದರು. ಇನ್ನು ಕೆಲವರು ತಿಂದು, ತಿಂದು ಮಲಗಿದರು... ರಾಜ ಹೇಳಿದ ದಿನ ಬಂದಿತು. ಜನಸಮೂಹವು ಅರಮನೆಯಲ್ಲಿ ಘರ್ಜಿಸಿತು. 100 ಅಡಿ ಎತ್ತರದ ಬಹು ದೊಡ್ಡ ಬಾಗಿಲು ಮುಚ್ಚಿತ್ತು. ನೋಡಲು ಕಬ್ಬಿಣದ ಬಾಗಿಲಿನಂತಿತ್ತು. ರಾಜನು ಆ ಬಾಗಿಲನ್ನು ತಳ್ಳಿ ತೆರೆಯಬೇಕೆಂದು ಹೇಳಿದನು.

 

ಅಷ್ಟು ದೊಡ್ಡ ಬಾಗಿಲನ್ನು ಯಾರೂ ಕೈಯಿಂದ ತಳ್ಳಿ ತೆರೆಯಲಾರರು! ರಾಜನು ಈ ರೀತಿ ಹೇಳಿಬಿಟ್ಟನೇ! ಎಂದು ಅವರು ಅದರ ಬಗ್ಗೆ ಪರ್ಯಾಯವಾಗಿ ಮಾತನಾಡಿಕೊಂಡರು. ಚೆನ್ನಾಗಿ ಬಲಿಷ್ಠವಾಗಿ ಇದ್ದವರು ಸಹ ಪ್ರಯತ್ನ ಮಾಡಲೇ ಇಲ್ಲ "ನಾವು ಹೋಗಿ ತೆರೆಯಲಿಲ್ಲ ಎಂದರೆ ನಾಚಿಕೆ ಆಗಿಬಿಡುತ್ತದೆ" ಎಂದು ನೆನೆಸಿ ಬಾಗಿಲ ಬಳಿ ಹೋಗಲು ಯಾರೂ ಮುಂದೆ ಬರಲಿಲ್ಲ. ಒಬ್ಬ ಚಿಕ್ಕ ಹುಡುಗ ಬಾಗಿಲಿನ ಬದಿಗೆ ಹೋದನು. ತನ್ನ ಎರಡೂ ಕೈಗಳಿಂದ ಅದನ್ನು ತಳ್ಳಿ ನೋಡಿದನು. ತಕ್ಷಣವೇ ಅದು Magic ಮಾಡುವಂತೆ ಸುಂದರವಾಗಿ ತೆರೆದುಕೊಂಡಿತು. ಏನು ಆಶ್ಚರ್ಯವಾಗಿದೆಯಾ! ಆ ಬಾಗಿಲು ಕೇವಲ ರಟ್ಟಿನಿಂದ ಮಾಡಲಾಗಿತ್ತು. ಆ ಹುಡುಗನ ಪ್ರಯತ್ನವನ್ನು ಎಲ್ಲರೂ ಮೆಚ್ಚಿಕೊಂಡರು. ರಾಜನೂ ಹೇಳಿದ ಹಾಗೆ ಉಡುಗೊರೆ ಕೊಟ್ಟನು. ಏನು ಮುದ್ದು ಪುಟಾಣಿಗಳೇ! “ನೀವು ಪ್ರಯತ್ನಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ! ಪ್ರಯತ್ನ ಜ್ಞಾನಿಯನ್ನಾಗಿ ಮಾಡುತ್ತದೆ" ಹೀಗೆ ಓದಿರುತ್ತೀರಿ. ನೀವೂ ಅದನ್ನು ಮಾಡಿ ತೋರಿಸಬೇಕು. "ನನಗೆ ಈ ಪಾಠ ಇಷ್ಟವಿಲ್ಲ" ಎಂದೆಲ್ಲಾ ಹೇಳದೆ ದೇವರ ಸಹಾಯದಿಂದ ಈ ಹೊಸ ಶಾಲಾ ವರ್ಷದಲ್ಲಿ ಪ್ರಯತ್ನಿಸಿ ನೋಡಿ. ಯಶಸ್ಸಿನ ಉತ್ತುಂಗವನ್ನು ತಲುಪುತ್ತೀರಿ. All the best ಪುಟಾಣಿಗಳೇ...Bye.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +9193455404

82



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet