Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.06.2022
Share:

By Village Missionary Movement

Tuesday, 14-Jun-2022

ಧೈನಂದಿನ ಧ್ಯಾನ(Kannada) – 15.06.2022

 

ಪರದೈಸಿನ ಜೀವನ

 

"... ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ..." - ಲೂಕ 23:43

 

ಯೇಸುವನ್ನು ಶಿಲುಬೆಗೇರಿಸಿದಾಗ, ಅವರೊಂದಿಗೆ ಇಬ್ಬರು ಅಪರಾಧಿಗಳನ್ನೂ ಶಿಲುಬೆಗೇರಿಸಲಾಯಿತು. ಅವರಲ್ಲಿ ಒಬ್ಬನು ಯೇಸುವಿಗೆ,

“ನೀನು ಕ್ರಿಸ್ತನಲ್ಲವೇ, ನಿನ್ನನ್ನು ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು” ಎಂದು ಹೇಳಿದನು. ಇನ್ನೊಬ್ಬನು ನಾವು ಮಾಡಿದ ಅಪರಾಧಕ್ಕೆ ಸರಿಯಾಗಿ ಶಿಕ್ಷೆ ಅನುಭವಿಸುತ್ತಿದ್ದೇವೆ. ಆದರೆ ಇವರೋ ಒಂದು ಅಪರಾಧವನ್ನೂ ಮಾಡಿಲ್ಲವೇ ಎಂದು ಹೇಳಿದನು. ನಂತರ ಯೇಸುವನ್ನು ನೋಡಿ, “ಕರ್ತನೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ" ಎಂದು ಹೇಳಿದ ಕೂಡಲೇ ಯೇಸು, ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದರು.

 

ಈ ಪರದೈಸಿನ ಜೀವನ ಅಥವಾ ಪರಲೋಕ ಜೀವನ ಸಾಯುವ ಅಂಚಿನಲ್ಲಿದ್ದ ಈ ಅಪರಾಧಿಗೆ ದೊರೆತದ್ದಕ್ಕೆ ಎರಡು ಕಾರಣಗಳಿವೆ. ಒಂದು, ಅವನು ತನ್ನ ತಪ್ಪನ್ನು ಒಪ್ಪಿಕೊಂಡನು. ಎರಡನೆಯದು ಯೇಸುವೇ ನೀನು ಹೋಗುವ ರಾಜ್ಯಕ್ಕೆ ನಾನು ಅರ್ಹನಲ್ಲ, ಆದರೆ ನೆನೆಸಿಕೋ ಎಂದನು. ಶಿಲುಬೆಯಲ್ಲಿ ನೇತಾಡುತ್ತಿದ್ದರೂ ತನ್ನ ನೋವಿನ ಮಧ್ಯದಲ್ಲೂ ತನ್ನ ತಪ್ಪನ್ನು ಒಪ್ಪಿಕೊಂಡದ್ದರಿಂದ ಮತ್ತು ಯೇಸುವನ್ನು ರಾಜನಾಗಿ ಸ್ವೀಕರಿಸಿದ ಕಾರಣ ಅವನು ಪರದೈಸಿನ ಜೀವನವನ್ನು ಪಡೆದನು.

 

ಇದನ್ನು ಓದುತ್ತಿರುವ ಪ್ರಿಯರೇ! ನಿಮಗೂ ಈ ಅಪರಾಧಿಯಂತೆ, ಪರದೈಸಿನ ಜೀವನವನ್ನು ಸ್ವತಂತ್ರಿಸಿಕೊಳ್ಳುವ ಬಯಕೆ ಇದೆಯೇ? ಇವನು ತನಗೆ ದೊರೆತ ಕೊನೆಯ ನಿಮಿಷವನ್ನು ಬಳಸಿಕೊಂಡಂತೆ ನೀವು ಕೂಡ ಈ ಕೆಲವು ನಿಮಿಷಗಳನ್ನು ಉಪಯೋಗಿಸಿಕೊಳ್ಳಿರಿ. ಇಂದೇ ನಿಮ್ಮನ್ನು ವಿಚಾರಿಸಿ ತಿಳಿದುಕೊಂಡು ದೇವರ ಬಳಿ ನಿಮ್ಮ ಅಪರಾಧಗಳನ್ನು ಒಪ್ಪಿಕೊಳ್ಳಿರಿ. "ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ" (1 ಕೊರಿಂಥ. 11:31) ಎಂದು ಸತ್ಯವೇದವು ಹೇಳುತ್ತಿದೆ. ಎರಡನೆಯದಾಗಿ ನಿಮ್ಮನ್ನು ಆಳ್ವಿಕೆ ಮಾಡುವ ರಾಜನಾಗಿ ಅವರನ್ನು ಅಂಗೀಕರಿಸಿ ನಿಮ್ಮ ಹೃದಯದ ಸಿಂಹಾಸನವನ್ನು ಅವರಿಗೆ ಬಿಟ್ಟುಕೊಡಿರಿ. ಅದೇ ರೀತಿ ಯೇಸುವಿನ ವಾಕ್ಯಕ್ಕೆ ವಿಧೇಯರಾಗಲು ನಿಮ್ಮನ್ನೂ ಸಮರ್ಪಿಸಿಕೊಳ್ಳುವಾಗ ನಿಮಗೂ ಪರದೈಸು ಅಥವಾ ಪರಲೋಕ ಜೀವನವು ಖಚಿತ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಗೆತ್ಸೆಮನೆ ಆವರಣದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವ ಪ್ರತಿಯೊಬ್ಬರನ್ನೂ ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet grandpashabet radissonbet palacebet sonbahis cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet