Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.06.2022
Share:

By Village Missionary Movement

Friday, 17-Jun-2022

ಧೈನಂದಿನ ಧ್ಯಾನ(Kannada) – 17.06.2022

 

ಶಾಶ್ವತ ಬಹುಮಾನ

 

“ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ" - ಕೊಲೊಸ್ಸೆ 3:2

 

ನೊಬೆಲ್ ಪ್ರಶಸ್ತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಏಬೆಲ್ ಪ್ರಶಸ್ತಿಯ (Abel prize) ಬಗ್ಗೆ ನಿಮಗೆ ಗೊತ್ತಾ? ನಿರ್ದಿಷ್ಟವಾಗಿ ಹೇಳುವುದಾದರೆ, ಏಬೆಲ್ ಪ್ರಶಸ್ತಿಯು ಗಣಿತ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಇದುವರೆಗೆ 25 ಜನರಿಗೆ ನೀಡಲಾಗಿದೆ. ಬಹುಮಾನವನ್ನು ಸ್ವೀಕರಿಸುವವರಿಗೆ 7.5 ಮಿಲಿಯನ್ Norwegian Kroner ನೀಡಿ ಗೌರವಿಸಲಾಗುತ್ತದೆ. ಇಂತಹ ಹಲವಾರು ಹೊಸ ಪ್ರಶಸ್ತಿಗಳು ಬಂದಿವೆ.

 

ದೇವರು ಕೊಡುವ ಬಹುಮಾನದ ಬಗ್ಗೆಯೂ ನಾವು ಸತ್ಯವೇದದಲ್ಲಿ ಓದಬಹುದು. ಅದು ಜೀವ ಕಿರೀಟ, ಜೀವವೃಕ್ಷ ಫಲ, ಹೀಗೆ ಅನೇಕ! ಎಫೆಸ ಸಭೆಯ ದೂತನಿಗೆ ಹೇಳುವಾಗ, ಅವರ ಬಳಿಯಿರುವ ಅನೇಕ ಸದ್ಗುಣಗಳನ್ನು ಪಟ್ಟಿಮಾಡುವ ದೇವರು, ಅದೇ ಸಮಯದಲ್ಲಿ ಅವರಲ್ಲಿರುವ ಕೊರತೆಯನ್ನು ಎತ್ತಿ ತೋರಿಸುತ್ತಾರೆ, ಆ ಕೊರತೆಯನ್ನು ಪರಿಹರಿಸದಿದ್ದರೆ, ಬರುವ ಹಾನಿಯನ್ನು ಸೂಚಿಸುತ್ತಾರೆ. ಎಲ್ಲವನ್ನೂ ಜಯಿಸುವವನಿಗೆ ಜೀವವೃಕ್ಷದ ಫಲವನ್ನು ತಿನ್ನಲು ಕೊಡುತ್ತೇನೆ ಎಂದು ವಾಗ್ದಾನ ಮಾಡುತ್ತಿದ್ದಾರೆ.

 

ಸಿಮಿರ್ನಾ ಸಭೆಯ ದೂತನಿಗೆ ಬರೆಯುವಾಗ, ವರ್ತಮಾನದ ಬಗ್ಗೆ ಮಾತ್ರವೇ ಮಾತನಾಡದೇ ಅವರಿಗೆ ಮುಂದೆ ಬರುವ ಶೋಧನೆಗಳ ಬಗ್ಗೆಯೂ ಎಚ್ಚರಿಸುತ್ತಾರೆ. ಅದು ಮಾತ್ರವಲ್ಲದೇ ಮರಣದ ವರೆಗೂ ನಂಬಿಗಸ್ತನಾಗಿರುವವನಿಗೆ ಜೀವ ಕಿರೀಟವನ್ನು ಕೊಡುತ್ತೇನೆ ಎಂದೂ ಭರವಸೆ ನೀಡುತ್ತಿದ್ದಾರೆ.

 

ಕ್ರಿಸ್ತನಲ್ಲಿ ಪ್ರಿಯರೇ, ಜಗತ್ತು ನಮಗೆ ನೀಡುವ ಉಡುಗೊರೆಯು ಒಂದು ಹಂತದಲ್ಲಿ ಮಾತ್ರ, ನಾವು ಮಾಡುವ ಅತ್ಯುತ್ತಮವಾದ ಕೆಲಸಕ್ಕೆ ಮಾತ್ರವೇ ಆಗಿರುತ್ತದೆ. ಆದರೆ ನಮ್ಮ ದೇವರು ನಮ್ಮ ಎಲ್ಲಾ ಅಪರಿಪೂರ್ಣತೆಗಳನ್ನು ಸರಿಪಡಿಸಿ, ಎಲ್ಲಾ ರೀತಿಯಲ್ಲೂ ನಮ್ಮನ್ನು ಅರ್ಹತೆಗೊಳಿಸಿ, ನಂತರ ಯಾರೂ ಕೊಡಲಾಗದ, ಅಳಿದು ಹೋಗದ ನಿತ್ಯಜೀವವನ್ನು ಕೊಡಲು ಸಿದ್ಧವಾಗಿದ್ದಾರೆ. ಅದಕ್ಕಾಗಿ ನಾವು ಆತನನ್ನು ನಮ್ಮ ಪೂರ್ಣ ಹೃದಯದಿಂದಲೂ, ನಮ್ಮ ಪೂರ್ಣ ಆತ್ಮದಿಂದಲೂ, ನಮ್ಮ ಎಲ್ಲಾ ಶಕ್ತಿಯಿಂದಲೂ, ನಮ್ಮ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕೆಂದು ಅವರು ನಿರೀಕ್ಷಿಸುತ್ತಿದ್ದಾರೆ. ನಮ್ಮನ್ನು ನಾವು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿಕೊಳ್ಳೋಣ. ಕಲ್ಮಶವಿಲ್ಲದವರಿಂದ ನಾವು ಪರಿಪೂರ್ಣವಾದ ಆಶೀರ್ವಾದಗಳನ್ನು ಪಡೆದುಕೊಳ್ಳೋಣ.

- Sis. ಐಡಾ

 

ಪ್ರಾರ್ಥನಾ ಅಂಶ:

ಪ್ರತಿದಿನ ಬೆಳಗ್ಗೆ 5:00 ಗಂಟೆಗೆ ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗುವ ಹೀಲಿಂಗ್ ಸೇವೆಯಲ್ಲಿ ಭಾಗವಹಿಸುವ ವ್ಯಕ್ತಿಗಳ, ಪ್ರಾಣ, ಆತ್ಮ, ಶರೀರದಲ್ಲಿ ಬಿಡುಗಡೆ ಹೊಂದಿ ಸ್ವಸ್ಥತೆಹೊಂದಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet