Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.06.2022
Share:

By Village Missionary Movement

Friday, 17-Jun-2022

ಧೈನಂದಿನ ಧ್ಯಾನ(Kannada) – 18.06.2022

 

ನೋಡಿಬಿಟ್ಟು ಸುಮ್ಮನಿರು

 

"...ನನಗೆ ಉಂಟುಮಾಡಿದ ವ್ಯಥೆಯನ್ನು ನೀವು ನೋಡಿ ಇಂಥಾ ವ್ಯಥೆಯು ಇನ್ನೆಲ್ಲಾದರೂ ಉಂಟೋ ಯೋಚಿಸಿರಿ" - ಪ್ರಲಾಪಗಳು 1:12

 

ಯೇಸು ಕ್ರಿಸ್ತನು ಶಿಲುಬೆಯಲ್ಲಿ ತೋರಿಸಿದ ಪ್ರೀತಿಗಿಂತ ಬೇರೆ ಪ್ರೀತಿ ಇದೆಯೇ? ಭಾರವಾದ ಶಿಲುಬೆಯನ್ನು, ಅವರ ರಕ್ತವನ್ನು, ಮೊಳೆ ಹೊಡೆಯಲ್ಪಟ್ಟ ಕೈಕಾಲುಗಳನ್ನು, ತಲೆಯ ಮೇಲೆ ಮುಳ್ಳಿನ ಕಿರೀಟವನ್ನು, ಅವರ ಸಂಕಟವನ್ನು ನೋಡುವಾಗ, ನಮ್ಮ ಜೀವನದಲ್ಲಿ ಬರುವ ಯಾವುದೊಂದು ಕಷ್ಟ, ಸಂಕಟವು ಅದಕ್ಕೆ ಸಮಾನವಾಗಿರಲು ಸಾಧ್ಯವೇ ಇಲ್ಲ! ಗೀತರಚನೆಕಾರ ರೂಬೆನ್ ಅವರ "ಅವರನ್ನು ದೃಷ್ಟಿಸಿ ನೋಡು" ಎಂಬ ಹಾಡು ಯೇಸು ಶಿಲುಬೆಯಲ್ಲಿ ಅನುಭವಿಸಿದ ಸಂಕಟಗಳನ್ನು ಚಿತ್ರಿಸಿ ನಮ್ಮ ಸಂಕಟಗಳಲ್ಲಿ ಅವರನ್ನು ದೃಷ್ಟಿಸಿ ನೋಡಿ, ಸುಮ್ಮನಿರಬೇಕು ಎಂಬದಾಗಿ ಕೊನೆಗೊಳ್ಳುತ್ತದೆ.

 

ಹೊರ ದೇಶಗಳಲ್ಲಿ ಜನಿಸಿ ತುಂಬಾ ಸೌಕರ್ಯವಾಗಿ ಜೀವಿಸಿ, ವಿದ್ಯಾವಂತರಾಗಿದ್ದ ರಿಚರ್ಡ್ ವಿಲಿಯಂ, ಡೇವಿಡ್ ಲಿವಿಂಗ್‌ಸ್ಟನ್, ಗ್ರಹಾಂ ಸ್ಟೇನ್ಸ್, ಹಡ್ಸನ್ ಟೇಲರ್, ರಾಕ್‌ಲ್ಯಾಂಡ್, ವಿಲಿಯಂ ಕೇರಿ... ಮುಂತಾದ ಅನೇಕ ಮಿಷನರಿಗಳು ತಮ್ಮ ಸ್ವಂತ ದೇಶವನ್ನು ಆರಾಮದಾಯಕವಾದ ಜೀವನ ವಿಧಾನವನ್ನು ಬಿಟ್ಟು ಬಂದರು. ಅಷ್ಟು ಮಾತ್ರವಲ್ಲದೇ, ಅವರು ವಿಪರೀತ ಶಾಖವನ್ನು ಅನುಭವಿಸಿದರು, ತಮ್ಮ ಹೆಂಡತಿ ಮಕ್ಕಳನ್ನು ತ್ಯಜಿಸಿದರು, ಗೃಹ ಜೀವನವನ್ನು ತ್ಯಜಿಸಿದರು, ದಿನಕ್ಕೆ 4 ಗಂಟೆಯಾದರೂ ಸರಿಯಾದ ನಿದ್ದೆಯಿಲ್ಲದೆ, ಸರಿಯಾದ ಆಹಾರ ಸಿಗದೇ, ತಮ್ಮ ಕೊನೆಯ ಉಸಿರು ಇರುವವರೆಗೂ ಸುವಾರ್ತೆಗಾಗಿಯೇ ತಮ್ಮ ಜೀವನವನ್ನು ಸಮರ್ಪಿಸಿದರು.

 

ಸತ್ಯವೇದದಲ್ಲಿ ನಾವು ಯೋಸೇಫನ ಬಗ್ಗೆ ನೋಡುವಾಗ, ಅವರು ಹಾದು ಬಂದ ಮಾರ್ಗದಲ್ಲಿ ಎಷ್ಟು ಶಾಂತವಾಗಿದ್ದರು ಎಂಬುದನ್ನು ಅರಿತಿದ್ದೇವೆ. ತನ್ನ ಸ್ವಂತ ಸಹೋದರರಿಂದ ದ್ವೇಷಿಸಲ್ಪಟ್ಟು, ಹಳ್ಳಕ್ಕೆ ಎಸೆಯಲ್ಪಟ್ಟು, ಮಾರಲ್ಪಟ್ಟು, ಅನ್ಯಾಯವಾಗಿ ಆರೋಪಿಸಲ್ಪಟ್ಟರೂ ಎಲ್ಲಾ ಸಂದರ್ಭಗಳಲ್ಲಿ, ಅವರು ಮನರಮ್ಯವಾಗಿದ್ದರು. ಪೌಲನೂ ಸಹ, "ಎಲ್ಲಾ ಸಂದರ್ಭಗಳಲ್ಲಿ ಮನರಮ್ಯವಾಗಿರಲು ನಾನು ಕಲಿತುಕೊಂಡಿದ್ದೇನೆ." ಎಂದು ಹೇಳಿದರು. 

 

ಆದರೆ ನಾವು ಎಷ್ಟೋ ಸಲ ನಮಗೆ ಬರುವ ಸಂಕಟದಲ್ಲಿ ವ್ಯಥೆ ಪಡುತ್ತಾ, "ನನಗೆ ಮಾತ್ರ ಯಾಕೆ ಹೀಗೆ" ಎಂದು ಗೊಣಗುತ್ತಿರುತ್ತೇವೆ. ನಮ್ಮ ಜೀವನದಲ್ಲಿ ನಡೆಯುವ ಎಲ್ಲವೂ ದೇವರಿಗೆ ತಿಳಿದಿದೆ. ಆತನ ಅನುಮತಿಯಿಲ್ಲದೆ ಯಾವುದೂ ನಮ್ಮನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಇದನ್ನು ಅರಿತು ನಾವು ಸಂಕಟದ ನಡುವೆಯೂ ಶಾಂತಚಿತ್ತರಾಗಿ ಆತನನ್ನು ನೋಡುವಾಗ ಆತನು ಖಂಡಿತವಾಗಿಯೂ ಅದ್ಭುತಗಳನ್ನು ಮಾಡುತ್ತಾರೆ. ಅವರ ಸಂಕಟಗಳೊಂದಿಗೆ ನಮ್ಮ ಕಾರ್ಯಗಳನ್ನು ಹೋಲಿಸಿ ನೋಡುವಾಗ ಇದು ಏನೂ ಅಲ್ಲ ಎಂದು ನಾವು ಭಾವಿಸುತ್ತೇವೆ. ಇವುಗಳನ್ನು ಸಹಿಸಲು, ಪಾರಾಗಲು ದಾರಿಯಿದೆ ಎಂಬುದನ್ನು ತಿಳಿದು ದೇವರನ್ನು ಸ್ತುತಿಸಬಹುದು. ಅಷ್ಟೇ ಅಲ್ಲ, ಬಾಡಿಹೋಗದ ನಿತ್ಯಜೀವ ಕಿರೀಟವನ್ನೂ ಪಡೆಯಬಹುದು ಎಂಬುದರಲ್ಲಿ ಸಂದೇಹವೇ ಇಲ್ಲ.

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ಮಿಷನರಿಗಳನ್ನು ಬೆಂಬಲಿಸುವ ಪಾಲುದಾರರನ್ನು ಹೊಸದಾಗಿ ದೇವರು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet