Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.06.2022 (Kids Special)
Share:

By Village Missionary Movement

Sunday, 26-Jun-2022

ಧೈನಂದಿನ ಧ್ಯಾನ(Kannada) – 26.06.2022 (Kids Special)

 

ಮಾನಸಾಂತರ ಹೊಂದಿದ ಹೃದಯ

 

"ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವದು; ಆತನಿಂದಾದ ರಕ್ಷಣೆಯ ನಿವಿುತ್ತ ಆನಂದಪಡುವೆನು." - ಕೀರ್ತನೆ 35:9

 

Hello ಪುಟಾಣಿಗಳೇ, How are you? ಪ್ರತಿದಿನ ಬೆಳಿಗ್ಗೆಯೇ ಎದ್ದು, ಚುರು-ಚುರುಕಾಗಿ ಬೇಗ ಹೊರಟು, School-ಗೆ ಹೋಗುವುದು ಮತ್ತು Home work ಮಾಡೋದು ಹೀಗೆ ತುಂಬಾ busy-ಆಗಿ ಇರುತ್ತೀರ ಅಲ್ವಾ? Very Good. ಒಳ್ಳೆಯ ಸ್ನೇಹಿತರೊಂದಿಗೆ ಸೇರಿ ಆಟವಾಡಿ, ಚೆನ್ನಾಗಿ ಓದಿ, ಒಳ್ಳೆಯ ಮಗು ಎಂಬ ಹೆಸರು ತಗೋಬೇಕು. ಅದೇ ದೇವರ ಆಸೆ ಕೂಡ! Ok ಪುಟಾಣಿಗಳೇ, ಕಥೆ ಕೇಳೋಣವಾ?

 

ರಾಣಿ ಅಮ್ಮನಿಗೆ, ಮಣಿ ಎಂಬ ಮಗನಿದ್ದನು. ಇವನು ಕೆಟ್ಟ ಸ್ನೇಹಿತರೊಂದಿಗೆ ಸೇರಿ ಕದಿಯುವುದು, ಸುಳ್ಳು ಹೇಳುವುದು ಇಂತಹ ಕೆಟ್ಟ ಅಭ್ಯಾಸಗಳನ್ನು ಧೈರ್ಯದಿಂದ ಮಾಡಿದನು. ತುಂಬಾ ನೊಂದ ತಾಯಿ, ಸತ್ಯವೇದದಿಂದ ಕೆಲವು ಆಲೋಚನೆಗಳನ್ನು ತಿಳುವಳಿಕೆಯನ್ನು ಹೇಳಿದರೂ ಮಣಿ ಸ್ವಲ್ಪವೂ ಕಿವಿಗೊಟ್ಟು ಕೇಳಲೇ ಇಲ್ಲ. ಹಣ ನಮ್ಮ ಕೈಯಲ್ಲಿ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ. ತಪ್ಪು ಮಾಡಿದರೆ ಶಿಕ್ಷೆ ಖಂಡಿತ ಅಲ್ವಾ! ಮಣಿ ಮತ್ತ-ಮತ್ತೆ ಮಾಡಿದ ಕಳ್ಳತನದ ನಿಮಿತ್ತವಾಗಿ ಜೈಲು ಪಾಲಾದನು. ಅಲ್ಲಿ ಹೋಗಿಯೂ ಮಣಿ ಮಾನಸಾಂತರ ಹೊಂದುವಂತೆ ಕಾಣುತ್ತಿಲ್ಲ. ಅಮ್ಮನಿಗೆ ಪತ್ರ ಬರೆದನು. "ನನಗೆ 500 ರೂಪಾಯಿ ಬೇಕು, ಕಳುಹಿಸಿ" ಎಂದು. ಜೈಲಿನಲ್ಲಿ ಹಣ ಯಾವುದಕ್ಕೆ ಎಂದು ತಾಯಿ ಯೋಚಿಸಿದರೂ ಮಗನ ಮೇಲಿದ್ದ ಪ್ರೀತಿಯ ನಿಮಿತ್ತವಾಗಿ, ಒಂದು ಬೈಬಲ್ ಅನ್ನು ತೆಗೆದುಕೊಂಡು 5 ಕಡೆ 100 ರೂಪಾಯಿಯಂತೆ 500 ರೂಪಾಯಿಗಳನ್ನು ಇಟ್ಟು, ಒಂದು ಪತ್ರವನ್ನು ಬರೆದು ಪಾರ್ಸೆಲ್ ಮಾಡಿ ಕಳುಹಿಸಿದರು. ಜೈಲು ಅಧಿಕಾರಿ ಆ ಪಾರ್ಸಲ್ ಅನ್ನು ಬಿಚ್ಚಿ ನೋಡಿದ ನಂತರ, ಮಣಿ ಕೈಗೆ ಸಿಕ್ಕಿತು. ಮೊದಲು ತಾಯಿಯ ಪತ್ರವನ್ನು ಓದಿದನು. “ಮಗನೇ ನಾನು ನಿನಗಾಗಿ ಪ್ರಾರ್ಥಿಸುತ್ತೇನೆ. ನೀನು ಕೂಡ ಪ್ರತಿದಿನ ಈ ಸತ್ಯವೇದವನ್ನು ಓದಿ ಪ್ರಾರ್ಥಿಸಲು ಮರೆಯಬೇಡ” ಎಂದು ಬರೆದಿದ್ದರು. ನಾನು 500 ರೂಪಾಯಿ ಕಳಿಸಿದ್ದೇನೆ ಎಂದು ಬರೆದು ಕಳುಹಿಸಿರುತ್ತಾರೇನೋ ಎಂದುಕೊಂಡ ಆತನಿಗೆ ನಿರಾಸೆಯಾಯಿತು. ಅವನು ಕೋಪದಿಂದ ಬೈಬಲನ್ನು ಪಕ್ಕಕ್ಕೆ ಇಟ್ಟನು. 6 ತಿಂಗಳ ನಂತರ ಮಣಿಯನ್ನು ಬಿಡುಗಡೆ ಮಾಡುವ ದಿನ ಬಂದಾಗ, ತಾಯಿ ಕೂಡ ಮಗನನ್ನು ಕರೆದುಕೊಂಡು ಹೋಗಲು ಉತ್ಸಾಹದಿಂದ ಬಂದರು. “ಮಣಿ ಸತ್ಯವೇದವನ್ನು ಓದಿದೆಯಾ? ನೀನು ಓದಿದ್ದರೆ, ದೇವರು ನಿನ್ನ ಹೃದಯದಲ್ಲಿ ಮಾತನಾಡಿರುತ್ತಿದ್ದರೇ? ನಿನಗೆ ಬೇಕಾದ 500 ರೂಪಾಯಿ ಸಿಗುತ್ತಿತ್ತೇ” ಎಂದರು. ಅಮ್ಮನನ್ನು ಅಲಕ್ಷ್ಯವಾಗಿ ದೃಷ್ಟಿಸಿ ನೋಡಿದನು! "ಮಗನೇ, ನೀನು ಕೇಳಿದ 500 ರೂಪಾಯಿಯನ್ನು ನಾನು ಬೈಬಲ್ ನಲ್ಲೇ ಇಟ್ಟಿದ್ದೆ, ನೋಡಲಿಲ್ಲವೇ?" ಎಂದರು. "ಸತ್ಯವೇದವೇ ನಿನ್ನ ಜೀವನವನ್ನು ಬದಲಾಯಿಸುತ್ತದೆ, ಸತ್ಯವೇದದಲ್ಲೇ ನಿನಗೆ ಆಶೀರ್ವಾದ ಉಂಟು ಮಗನೇ" ಎಂದು ಅವರು ಕಣ್ಣೀರು ಹಾಕಿದರು ... ಮಣಿಯ ಹೃದಯದಲ್ಲಿ ಬದಲಾವಣೆಯ ಬೀಜವು ಬಿದ್ದದ್ದನ್ನು ಅವನ ಮುಖದಲ್ಲಿ ನೋಡಲು ಸಾಧ್ಯವಾಯಿತು. ಅವನು ತನ್ನ ಪಾಪವನ್ನು ಒಪ್ಪಿಕೊಂಡನು ಮತ್ತು ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದಿದನು. ನೀವು ಕೂಡ ನಿಮ್ಮ ಪಾಪವನ್ನು ಯೇಸಪ್ಪನ ಬಳಿ ಹೇಳಿ ರಕ್ಷಣೆಯ ಆನಂದವನ್ನು ಪಡೆಯಲು ರೆಡೀನಾ?

- Mrs. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey cratosroyalbet grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet