Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.07.2022
Share:

By Village Missionary Movement

Thursday, 30-Jun-2022

ಧೈನಂದಿನ ಧ್ಯಾನ(Kannada) – 01.07.2022

 

VOTE OF THANKS

 

 "...ಕೃತಜ್ಞತೆಯುಳ್ಳವರಾಗಿರ್ರಿ" - ಕೊಲೊಸ್ಸೆ 3:15

 

ಶಾಲೆ, ಕಾಲೇಜು, ಕಛೇರಿಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಕೊನೆಯಲ್ಲಿ ವೋಟ್ ಆಫ್ ಥ್ಯಾಂಕ್ಸ್ ಎಂಬುದನ್ನು ನೋಡಿರುತ್ತೀರಿ. ಆ VOTE OF THANK - ನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲು ಕಾರಣವಾದವರು, ಜವಾಬ್ದಾರಿತರು ಹೀಗೆ ಅನೇಕರಿಗೆ ಕೃತಜ್ಞತೆ ಹೇಳಲಾಗುತ್ತದೆ. ಇದೇ Vote of thanks.

 

ಪರಿಶುದ್ಧ ಗ್ರಂಥದಲ್ಲಿ ದಾವೀದನು ಎಂಬ ಭಕ್ತನು ಅನೇಕ ಕೀರ್ತನೆಗಳನ್ನು ಹಾಡುಗಳಾಗಿ ಹಾಡಿದ್ದಾರೆ. ಅವುಗಳಲ್ಲೊಂದು ಕೃತಜ್ಞತೆ ಹೇಳುವ ಹಾಗೆ ಹಾಡಿದ 103 ನೇ ಕೀರ್ತನೆ, “ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ" ಎಂದು ಹಾಡುತ್ತಾರೆ. ದಾವೀದನ ಜೀವನದಲ್ಲಿ ಅನೇಕ ಸಮಸ್ಯೆಗಳು, ಹೋರಾಟಗಳು ಮತ್ತು ಶತ್ರುಗಳ ಅನ್ವೇಷಣೆಗಳು ಇದ್ದವು. ಇದರ ಮಧ್ಯೆಯೇ ದಾವೀದನು ಕೃತಜ್ಞತೆ ಸಲ್ಲಿಸಿ ಹಾಡುತ್ತಿದ್ದಾರೆ, "ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ" ಎಂದು. ದಾವೀದನು ದೇವರು ಮಾಡಿದ ಎಲ್ಲಾ ಉಪಕಾರಗಳಿಗಾಗಿ ಕೃತಜ್ಞತೆ ಹೇಳುತ್ತಿದ್ದಾರೆ.

 

ಇದನ್ನು ಓದುತ್ತಿರುವ ಪ್ರಿಯರೇ! ಈ ವರ್ಷದ 6 ತಿಂಗಳ ಕಾಲ ನಮ್ಮನ್ನು ಕಾಪಾಡಿದ ದೇವರಿಗೆ ಕೃತಜ್ಞತೆಯ ಹೃದಯದಿಂದ ಕೃತಜ್ಞತೆ ಹೇಳೋಣ! ವರ್ಷದ ಆರಂಭದಿಂದ ಇಂದಿನವರೆಗೆ, ಅವರು ನಮ್ಮ ಆತ್ಮಕ್ಕಾಗಿ ಮತ್ತು ನಮ್ಮ ಶಾರೀರಿಕ ಅಗತ್ಯಗಳಿಗಾಗಿ ಎಷ್ಟೊಂದು ಉಪಕಾರವನ್ನು ಮಾಡಿದ್ದಾರೆ! ನಮ್ಮನ್ನು ಮತ್ತು ನಮ್ಮ ಕುಟುಂಬಗಳನ್ನು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಿದರಲ್ಲಾ. ಎಷ್ಟೋ ಸಲ ನಾವು ಅಂದುಕೊಂಡೆವು "ಅಷ್ಟೆ, ಮುಗಿಯಿತು" ಅಂತ, ಅಂಥಹಾ ಸಮಯದಲ್ಲೂ ಪ್ರಾರಂಭವನ್ನು ಕೊಟ್ಟರೇ! ನಾವು ಕೃತಜ್ಞತೆಯ ಹೃದಯದಿಂದ ಅವರ ಪಾದಗಳ ಬಳಿ ಕುಳಿತು ಅಂತಹ ಬಹುವಿಧವಾದ ಆಶೀರ್ವಾದಗಳಿಗಾಗಿ ಅವರಿಗೆ ಕೃತಜ್ಞತೆ ಹೇಳೋಣ. ಅವರು ಮಾಡಿದ ಎಲ್ಲಾ ಉಪಕಾರಗಳಿಗೆ ನಾವು ಕೃತಜ್ಞತೆ ಹೇಳಲು ಬದ್ಧರಾಗಿದ್ದೇವೆ. ಸಾಮಾನ್ಯ ಜನರು ನಮಗೆ ಸಹಾಯ ಮಾಡುವಾಗ ಕೃತಜ್ಞತೆ ಹೇಳುವ ನಾವು, ತನ್ನ ಮಾತಿನಿಂದ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಬೇಕು ಎಂಬುದನ್ನು ಯೋಚಿಸೋಣ! ಕೃತಜ್ಞರಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳೋಣ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ,:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಎಲ್ಲಾ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş