Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.07.2022 (Kids Special)
Share:

By Village Missionary Movement

Sunday, 03-Jul-2022

ಧೈನಂದಿನ ಧ್ಯಾನ(Kannada) – 03.07.2022 (Kids Special)

 

Good friend

 

"ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು..." - ಜ್ಞಾನೋಕ್ತಿ 18:24

 

Hello Friends! ಹೊಸ Class, ಹೊಸ Teacher, ಹೊಸ ಸ್ನೇಹಿತರು, School life Super-ಆಗಿ ಮುಂದುವರೆಯುತ್ತಿದೆಯಾ? Jesus-ಗೆ ಧನ್ಯವಾದ ಹೇಳಬೇಕು! ನೀವು School ಗೆ ಹೋಗುವಾಗ, ಯೇಸಪ್ಪನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಬೇಕು. ಆಗ ನಿನಗೆ ಆಶೀರ್ವಾದಕರವಾಗಿರುತ್ತದೆ. ನೀನು ಬೆಳಿಗ್ಗೆಯಿಂದ Evening ವರೆಗೂ ಶಾಲೆಯಲ್ಲೇ ತಾನೆ ಇರುತ್ತೀಯ... ಅದರ ನಂತರ Tuition ಗೆ ಹೋದರೂ ಅಲ್ಲಿಯೂ ಸ್ನೇಹಿತರ ಬಳಗವೇ. ಆದರೆ ಒಳ್ಳೆಯ ಸ್ನೇಹಿತರು ಸಿಗಬೇಕು ಅಲ್ವಾ? Friend ಇಲ್ಲದಿದ್ದರೆ ಜೀವನವೇ ಬೋರ್ ಆಗಿರುತ್ತೆ ಅಲ್ವಾ. So, ಒಳ್ಳೆಯ ಸ್ನೇಹಿತರನ್ನು ಸೆಲೆಕ್ಟ್ ಮಾಡಿಕೋ... Ok.

 

Bible ನಲ್ಲಿ, ಯೋಸೇಫ ಎಂಬ ಅಣ್ಣನು, ಮಾಡದ ತಪ್ಪಿಗಾಗಿ ಸೆರೆಮನೆಯಲ್ಲಿದ್ದರು. ಅದೇ ಸೆರೆಮನೆಯಲ್ಲಿ ರಾಜನ ಪಾನದಾಯಕನೂ ರೊಟ್ಟಿಗಾರನೂ ಇದ್ದರು. ಇವರು ತಾವು ಕಂಡ ಕನಸಿನ ಅರ್ಥವೇನೆಂದು ತಿಳಿಯದೆ ಚಿಂತಾಕ್ರಾಂತರಾಗಿದ್ದರು. ಯೋಸೇಫನು ಅವರನ್ನು ವಿಚಾರಿಸಿ ದೇವರ ಕೃಪೆಯಿಂದ ಕನಸಿಗೆ ಅರ್ಥವನ್ನು ತಿಳಿಸಿ, ಉತ್ತಮ ಸ್ನೇಹಿತರಾಗಿದ್ದರು. ಜೈಲಿನಲ್ಲಿದ್ದರೂ ಯೋಸೇಫ್ ಅಣ್ಣ Happy-ಆಗಿ ಇದ್ದರು. ಯಾಕೆ ಗೊತ್ತಾ? ಯೇಸಪ್ಪ ಅವರ ಜೊತೆಯಲ್ಲೇ ಇದ್ದರು. ನಂತರ ಅಣ್ಣ ತಮ್ಮ ಸ್ನೇಹಿತರನ್ನು ವಿಚಾರಿಸಿ ಅವರಿಗೆ ಸಹಾಯ ಮಾಡಿದರು. ಯೋಸೇಫ್‌ ಅಣ್ಣ ಹೇಳಿದಂತೆಯೇ, ಅವರ Friend ಅರಸನಿಗೆ ಆಹಾರ ಕೊಡುವಂತಹ ಅದೇ ಕೆಲಸಕ್ಕೆ ಹಿಂದಿರುಗಿ ಬಂದರು. ಒಂದು ದಿನ ಅರಸನು ಸಹ ತಾನು ಕಂಡ ಕನಸಿನಿಂದ ತುಂಬಾ ಚಿಂತಿತರಾಗಿದ್ದರು. ಮಾಂತ್ರಿಕರು, ಶಾಸ್ತ್ರಿಗಳು, ಯಾರೂ ಅರ್ಥವನ್ನು ಹೇಳಲು ಸಾಧ್ಯವಾಗಲಿಲ್ಲ. ತಕ್ಷಣ ಆ Friend-ಗೆ ಯೋಸೇಫನ ನೆನಪಾಯಿತು. ಅರಸನ ಕನಸಿಗೆ ಅರ್ಥವನ್ನು ಹೇಳಿ, ನನಗಿಂತ ದೊಡ್ಡ ಹುದ್ದೆಗೆ ಬಂದು ಬಿಡುತ್ತಾನೇನೋ ಎಂದು ಅಸೂಯೆಪಡದೇ, ಯೋಸೇಫನ ಬಗ್ಗೆ ಅರಸನ ಬಳಿ ಹೇಳಿದನು. ಒಳ್ಳೆಯ ಸ್ನೇಹಿತನು ಯಾವಾಗಲೂ ನಿಜವಾಗಿ ಪ್ರೀತಿಸುತ್ತಾನೆ. ಈ ಮೂಲಕ ಯೋಸೇಫನು, ಅರಸನ ನಂತರದ ನಾಯಕನ ಸ್ಥಾನಕ್ಕೆ ಹೆಚ್ಚಿಸಲ್ಪಟ್ಟರು. ಯೋಸೇಫನು ಉನ್ನತ ಸ್ಥಾನಕ್ಕೇರಲು ಆ ಸ್ನೇಹಿತನು ಕಾರಣವಾಗಿದ್ದರು ನೋಡುದ್ರಾ?

 

ಮುದ್ದು ಪುಟಾಣಿಗಳೇ! ಯೇಸಪ್ಪ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿರುವ ಹಾಗೆಯೇ ನೀವು ಸಹ ನಿಮ್ಮ Friends-ಅನ್ನು ನಿಜವಾಗಿ ಪ್ರೀತಿಸಬೇಕು. ಅಂತಹ ಒಳ್ಳೆಯ ಸ್ನೇಹಿತರು ಸಿಗಬೇಕೆಂದು ಯೇಸಪ್ಪನ ಬಳಿ ಕೇಳಬೇಕು. ಅಗತ್ಯವಿದ್ದಾಗ ಮಾತ್ರ Use ಮಾಡಿಬಿಟ್ಟು, ಸ್ನೇಹಿತರಿಗೆ ದ್ರೋಹ ಬಗೆಯಬಾರದು. ಏನು ಪುಟಾಣಿಗಳೇ, Ok ತಾನೇ!

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet grandpashabet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet