Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.07.2022 (Youth Special)
Share:

By Village Missionary Movement

Monday, 18-Jul-2022

ಧೈನಂದಿನ ಧ್ಯಾನ(Kannada) – 18.07.2022 (Youth Special)

 

ಬೇಲಿ ಹಾಕಿ ಕಾಪಾಡಿಕೋ

 

"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು" - ಜ್ಞಾನೋಕ್ತಿ 4:23

 

ಇಬ್ಬರು ರೈತ ಮಿತ್ರರಿದ್ದರು. ಆ ಸ್ನೇಹಿತರು ಪಾಳು ಭೂಮಿಯಲ್ಲಿ ಟೊಮೇಟೊ ನೆಡಲು ಯೋಚಿಸಿದರು ಮತ್ತು ಮರುದಿನ ಅವರು ಕೆಲಸವನ್ನೂ ಪ್ರಾರಂಭಿಸಿದರು ಮತ್ತು ಬೀಜಗಳನ್ನು ಬಿತ್ತಿದರು. ಗಿಡಗಳು ಸ್ವಲ್ಪ ಬೆಳೆದವು. ಮೊದಲ ರೈತ ತನ್ನ ತೋಟದ ಸುತ್ತಲೂ ಬೇಲಿಯನ್ನು ನಿರ್ಮಿಸಿದನು. ಕಾಲಕಾಲಕ್ಕೆ ಗಿಡಗಳ ನಡುವೆ ಬೆಳೆಯುತ್ತಿದ್ದ ಕಳೆಗಳನ್ನು ಕೀಳುತ್ತಿದ್ದರು. ಎರಡನೇ ರೈತ ಹೇಳಿದ, “ನಿನಗೆ ಕೆಲಸವಿಲ್ಲ. ಇದಕ್ಕೆಲ್ಲ ಬೇಲಿ ಬೇಕಾ? ನೀರು ಕೊಟ್ಟರೆ ಸಾಕಲ್ಲವೇ?” ಎಂದು ಗೇಲಿಯಾಗಿ ಮೊದಲ ರೈತನ ಬಳಿ ಹೇಳಿದನು. ಫಲಕೊಡುವ ಅವಧಿಯಲ್ಲಿ, ಎರಡೂ ತೋಟಗಳು ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದವು. ಪ್ರತಿದಿನ ಸಂಜೆ ಅವರಿಬ್ಬರು ತೋಟಕ್ಕೆ ಭೇಟಿ ನೀಡುವಾಗ, ಎರಡನೇ ರೈತ ಹೇಳಿದನು, “ನಾನು ಬೇಲಿ ಹಾಕಿಲ್ಲ, ಕಳೆ ಕಿತ್ತಿಲ್ಲ, ಆದರೂ ನನ್ನ ತೋಟ ಚೆನ್ನಾಗಿ ಫಲ ಕೊಟ್ಟಿದಯಲ್ಲಾ! "ನೀನು ಬೇಲಿಹಾಕಿ ನಿನ್ನ ಹಣವನ್ನು, ಕಳೆಗಳನ್ನು ಕಿತ್ತು ನಿನ್ನ ಸಮಯವನ್ನೂ ವ್ಯರ್ಥ ಮಾಡಿಕೊಂಡಿದ್ದೀಯ" ಎಂದು ಹೀಯಾಳಿಸಿ ಮಾತಾಡಿದನು. ಎಲ್ಲಾ ಟೊಮೆಟೊಗಳು ಚೆನ್ನಾಗಿ ಬೆಳೆದವು. ನಾಳೆ ಕಿತ್ತುಕೊಂಡರೆ ಸರಿ ಹೋಗುತ್ತೆ ಅಂದುಕೊಂಡರು. ಮರುದಿನ ಎಲ್ಲಾ ಸಿದ್ಧತೆಯೊಂದಿಗೆ ಬೇಗ ತೋಟಕ್ಕೆ ಬಂದರು. ಬೇಲಿ ಇಲ್ಲದ ತೋಟದಲ್ಲಿದ್ದ ಹಣ್ಣುಗಳೆಲ್ಲ ಕಿತ್ತು ತೋಟವೇ ಅಸ್ತವ್ಯಸ್ತವಾಗಿತ್ತು.

 

ನನ್ನ ಪ್ರೀತಿಯ ಯೌವ್ವನ ಕಣ್ಮಣಿಗಳೇ! ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು ಎಂದು ಸತ್ಯವೇದವು ಹೇಳುತ್ತಿದೆ. ನಾವು ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ? ಶೋಧನೆಗಳು ಮತ್ತು ತೊಂದರೆಗಳು ಬರುವಾಗ ದೇವರ ವಾಕ್ಯಗಳನ್ನು ಉಪಯೋಗಿಸಿ ನಮ್ಮ ಹೃದಯದಲ್ಲಿ ಇಟ್ಟುಕೊಂಡು ನಮ್ಮನ್ನು ಕಾಪಾಡಿಕೊಳ್ಳಬೇಕು. ನಾವು ದೇವರಿಗೆ ಭಯಪಟ್ಟು ದುಷ್ಟತನದಿಂದ ದೂರವಿದ್ದರೂ, ಕರ್ತನನ್ನು ಹೆಚ್ಚು ಪ್ರೀತಿಸುವವರಾಗಿದ್ದರೂ ನಮ್ಮನ್ನು ಅಪಹಾಸ್ಯ ಮಾಡುವವರು ಇದ್ದೇ ಇರುತ್ತಾರೆ. ಇಂತಹ ಅಪಹಾಸ್ಯ ಮಾಡುವವರ ಜೀವನವನ್ನು ಬಹಿರಂಗವಾಗಿ ನೋಡಿದರೆ ಎಲ್ಲವೂ ಸರಿ ಇರುವಂತೆಯೇ ಕಾಣುತ್ತದೆ. ಆದರೆ ಅದು ಬೇಲಿಯಿಲ್ಲದ ಜೀವನ!

 

ಸತ್ಯವೇದದಲ್ಲಿ ನಾವು ಯೋಸೇಫ ಮತ್ತು ಸಂಸೋನನೆಂಬ ಇಬ್ಬರು ವ್ಯಕ್ತಿಗಳನ್ನು ನೋಡುತ್ತೇವೆ. ಇವರಲ್ಲಿ ಯೋಸೇಫನು ದೇವರ ಭಯದಿಂದ ತನ್ನ ಪರಿಶುದ್ಧತೆಯನ್ನು ಬೇಲಿ ಹಾಕಿ ಕಾಪಾಡಿಕೊಂಡರು. ಆತನು ದೇವರ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ಮುಂದೆಯೂ ಉನ್ನತನಾದನು. ಆದರೆ ಸಂಸೋನನು ತನ್ನ ಪರಿಶುದ್ಧತೆಯನ್ನು ಬೇಲಿ ಹಾಕಿ ಕಾಪಾಡಿಕೊಳ್ಳುವುದನ್ನು ಮರೆತು ಹೋದದ್ದರಿಂದ ಇತರರ ಮುಂದೆ ಅಪಹಾಸ್ಯಕ್ಕೆ ಗುರಿಯಾದನು. ನಾವು ಪ್ರಪಂಚದ ವೇಷದಲ್ಲಿ ಬದುಕುತ್ತಿರುವಾಗ, ಏನೇ ಆಶೀರ್ವಾದಕರವಾದ ಜೀವನವಾಗಿ ಕಾಣಲ್ಪಟ್ಟರೂ, ಅದು ಅಂತಿಮವಾಗಿ ವಿನಾಶಕ್ಕೆ ಕಾರಣವಾಗುತ್ತದೆ. ಆ ಟೊಮೇಟೊ ತೋಟದಂತೆ ನಮಗೂ ಹಣ್ಣಾಗುವ ಸೀಸನ್ ಇದೆ. ನಾವು ನಮ್ಮ ಮನಸ್ಸನ್ನು ದೇವರ ವಾಕ್ಯಗಳಿಂದ ಬೇಲಿ ಹಾಕಿದಾಗ ಮಾತ್ರವೇ ಅದು ಸಂತೋಷವಾಗಿರುತ್ತದೆ. ಇಲ್ಲವಾದರೆ ಕೊನೆಗೆ ವಿನಾಶವೇ ಮೇಲುಗೈ ಸಾಧಿಸುತ್ತದೆ. ಆದ್ದರಿಂದ ಇತರರ ದೂಷಣೆಯನ್ನು ಬದಿಗಿರಿಸಿ ಮತ್ತು ನಿಮ್ಮ ಆತ್ಮಗಳಿಗೆ ಬೇಲಿ ಹಾಕಿ ಕಾಪಾಡಿಕೊಳ್ಳಿರಿ. ಒಳ್ಳೆಯ ಫಲ ಕೊಡುವ ಮರಗಳಾಗಿ ಜೀವಿಸಿರಿ! ಆಮೆನ್.

- C.ಪಾಲ್ ಜೆಬಸ್ಟಿನ್ ರಾಜ್

 

ಪ್ರಾರ್ಥನಾ ಅಂಶ:

ಕಣ್ಮಣಿಯೇ ಕೇಳ್ - ಯೌವ್ವನಸ್ಥರಿಗಾಗಿ ಪ್ರತ್ಯೇಕವಾಗಿ ಹೊರಬಿಡುವ ಈ ಪತ್ರಿಕೆಯ ಮೂಲಕ ಪ್ರಾಯೋಗಿಕ ಸಲಹೆಯನ್ನು ಪಡೆದು ಮಕ್ಕಳು ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş