Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.07.2022
Share:

By Village Missionary Movement

Tuesday, 19-Jul-2022

ಧೈನಂದಿನ ಧ್ಯಾನ(Kannada) – 20.07.2022

 

ಕಾದಿದ್ದರೆ ಮುಕ್ತಾಯವಿರುತ್ತದೆ.

 

“ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು" - ಜ್ಞಾನೋಕ್ತಿ 13:12

 

ಇರಾನ್ ಮತ್ತು ಇರಾಕ್ ನಡುವಿನ ಯುದ್ಧದಲ್ಲಿ ಕೈದಿಗಳಾಗಿ ಕೆಲವರನ್ನು ಇರಾಕ್‌ಗೆ ಕರೆದೊಯ್ಯಲಾಯಿತು. ಅದರಲ್ಲಿ, ಹಲವು ತಿಂಗಳ ಗರ್ಭಿಣಿಯಾಗಿದ್ದ ಯುದ್ಧ ಯೋಧನ ಪತ್ನಿ ತನ್ನ ಪತಿ ಸೆರೆಯಾಳಾಗಿದ್ದಾನೆ ಎಂದು ತಿಳಿದು ಎದೆಗುಂದಿದಳು. ಅಳುತ್ತಾ ಗಂಡನಿಗಾಗಿ ಕಾಯುತ್ತಾ ದುಃಖದಲ್ಲಿದ್ದಾಗ ಪ್ರಸವವೇದನೆ ಉಂಟಾಗಿ ಮಗುವಿಗೆ ಜನ್ಮ ನೀಡಿದಳು. ಅವಳು ತನ್ನ ಮಗುವಿಗೆ "ಎನ್ಸಿಲಿಟಾ" ಎಂದು ಹೆಸರಿಟ್ಟಳು. ಇದರ ಅರ್ಥ "ನನ್ನ ಕಾಯುವಿಕೆ ಕೊನೆಗೊಳ್ಳುತ್ತದೆ" ಎಂದು. ಪ್ರತಿ ಬಾರಿಯೂ ಆ ಹೆಸರಿಟ್ಟು ಕರೆದಾಗಲೆಲ್ಲ ತನ್ನ ಗಂಡನಿಗಾಗಿ ಕಾಯುವುದು ವ್ಯರ್ಥವಾಗುವುದಿಲ್ಲ ಮತ್ತು ಅವರು ಬೇಗ ಬರುತ್ತಾರೆ ಎಂಬ ಖಚಿತತೆ ಅವಳಿಗೆ ಬೆಳೆಯುತ್ತಿತ್ತು. ಹಲವು ವರ್ಷಗಳ ಕಾಯುವಿಕೆಯ ನಂತರ, ಒಂದು ದಿನ ಯುದ್ಧ ಕೈದಿಗಳು ಬಿಡುಗಡೆಯಾದರು ಮತ್ತು ಹಡಗಿನಲ್ಲಿ ಬರುತ್ತಿದ್ದಾರೆ ಎಂಬ ಸುದ್ದಿಯನ್ನು ಕೇಳಿ ತಾಯಿ ಮತ್ತು ಮಗಳು ಓಡಿಹೋದರು. ತನ್ನ ಪತಿಯನ್ನು ನೋಡಿದ ಅವಳು "ನನ್ನ ಕಾಯುವಿಕೆ ಮುಗಿಯಿತು" ಎಂದು ಹೇಳಿ ಬಹು ಸಂತೋಷಪಟ್ಟಳು.

 

ಗಬ್ರಿಯೇಲನೆಂಬ ದೂತನು ಕನ್ಯೆಯಾದ ಮರಿಯಳ ಬಳಿಗೆ ಬಂದು, "ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು ನಿನ್ನ ಸಂಗಡ ಇದ್ದಾನೆ!" ಎಂದು ಹೇಳಿ "ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ ಎಂದು, ಆತನಿಗೆ ಯೇಸುವೆಂದು ಹೆಸರಿಡಬೇಕು ಎಂದು ಹೇಳಿದಾಗ ಮೊದಲು ದುಃಖದಲ್ಲಿ ತತ್ತರಿಸಿ ಇದು ಹೇಗಾದೀತು? ಎಂದು ಆಘಾತಕ್ಕೊಳಗಾದಳು, ನಂತರ ದೇವರ ಮಾತಿಗೆ ತನ್ನನ್ನು ಅರ್ಪಿಸಿಕೊಂಡಳು ಹೇಳಲ್ಪಟ್ಟ ದೇವರ ವಾಕ್ಯವನ್ನು ತನ್ನಲ್ಲಿ ಹಾಗೆಯೇ ಸ್ವೀಕರಿಸಿಕೊಂಡದ್ದರ ಪರಿಣಾಮವೇ - ನಮ್ಮ ರಕ್ಷಕನಾದ ಯೇಸು ಕ್ರಿಸ್ತನು ಈ ಭೂಮಿಯಲ್ಲಿ ಜನಿಸಿದರು. ಆ ದಿನಗಳಲ್ಲಿ ಅನೇಕ ಪವಿತ್ರ ಕನ್ಯೆಯರು ಯೇಸುಕ್ರಿಸ್ತನ ಜನನದ ಬಗ್ಗೆ ಪ್ರವಾದನೆಗಳನ್ನು ಕೇಳಿದಾಗ ತಮ್ಮ ಹೊಟ್ಟೆಯಲ್ಲಿ ಯೇಸು ಜನಿಸಬೇಕೆಂದು ಕಾತರದಿಂದ ಕಾಯುತ್ತಿದ್ದಾಗ, ಆ ಅವಕಾಶ ಮರಿಯಳಿಗೆ ದೊರೆಯಿತು. ಅವಳು ಮನಃಪೂರ್ವಕವಾಗಿ ವಾಕ್ಯವನ್ನು, ವಾಕ್ಯವಾಗಿದ್ದವರನ್ನೂ ಸ್ವೀಕರಿಸಿ ಆಶೀರ್ವದಿಸಲ್ಪಟ್ಟಳು. ಅವಳ ಕಾಯುವಿಕೆ ವ್ಯರ್ಥವಾಗಲಿಲ್ಲ, ರಕ್ಷಕನು ಜನಿಸಿದರು.

 

ನಮ್ಮ ಜೀವನದಲ್ಲಿಯೂ ಅನೇಕ ಬಾರಿ ನಾವು ಕೆಲವು ಪ್ರಯೋಜನಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ದಿನಗಟ್ಟಲೆ ಪ್ರಾರ್ಥನೆ ಮಾಡಿಯೂ, ವಾಕ್ಯಗಳನ್ನು ಮತ್ತು ವಾಗ್ದಾನಗಳನ್ನು ಸ್ವೀಕರಿಸಿಯೂ ಉತ್ತರ ತಡವಾದಾಗ ಸೋತುಹೋಗಿ ಕರ್ತನು ಕೊಟ್ಟ ವಾಕ್ಯವನ್ನು ಹಿಡಿದುಕೊಳ್ಳುವುದನ್ನೇ ಮರೆತುಬಿಡುತ್ತೇವೆ. ಕರ್ತನ ಮಾತಿನಂತೆ ಸಾರಾಳ ಮೂಲಕ ಸಂತಾನವಾಗಲು ಅಡ್ಡ ದಾರಿಯಲ್ಲಿ ಪ್ರಯತ್ನಿಸಿದ ಹಾಗೆ ನಾವು ಇರಬಾರದು. "ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು" ಎಂಬ ವಾಕ್ಯದಂತೆ ಸೂಚಿತವಾದ ಉಪಕಾರವನ್ನು ಪಡೆದುಕೊಳ್ಳುವವರೆಗೂ ಕರ್ತನು ನಮಗೆ ಕೊಟ್ಟ ಮಾತನ್ನು ಹೃದಯದಲ್ಲಿ ಇಟ್ಟುಕೊಂಡು, ಅದನ್ನು ಪಡೆಯಲು ಪ್ರಯತ್ನಿಸೋಣ, ಜಯವನ್ನು ಹೊಂದೋಣ.

- Mrs. ವಸಂತಿ ರಾಜಮೋಹನ್

 

ಪ್ರಾರ್ಥನಾ ಅಂಶ:

ಸೇವೆ ಮಾಡಲು ಬಯಸುವವರಿಗಾಗಿ ಹೊರಬಿಡುತ್ತಿರುವ "ಕತ್ತೆಗಳ ಮಾರ್ಗದರ್ಶಿ" ಎಂಬ ಪತ್ರಿಕೆಯ ಮೂಲಕವಾಗಿ ಅನೇಕ ಹೊಸ ಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş