Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.07.2022
Share:

By Village Missionary Movement

Wednesday, 27-Jul-2022

ಧೈನಂದಿನ ಧ್ಯಾನ(Kannada) – 28.07.2022

 

ಅದ್ಭುತ ದೇವರು

 

“ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು; ಆಗ ನನ್ನನ್ನು ಕೊಂಡಾಡುವಿರಿ" – ಕೀರ್ತನೆ 50:15

 

ಎರಡನೇ ಪ್ರಪಂಚಯುದ್ಧ ನಡೆಯುತ್ತಿದ್ದ ಸಮಯವದು. ಒಬ್ಬ ಅಮೇರಿಕನ್ ಸೈನಿಕನು ಹೇಗೋ ಉಳಿದ ಸೈನಿಕರಿಂದ ಬೇರ್ಪಟ್ಟನು. ಅಲ್ಲಿ ಯುದ್ಧ ಬಹುಘೋರವಾಗಿ ನಡೆಯುತ್ತಿತ್ತು. ತನ್ನ ದೇಶದ ಯೋಧರು ಕಾಣದಂತೆ ಎಲ್ಲೆಡೆ ಹೊಗೆಯ ಮೋಡ ಕಾಣಿಸಿಕೊಂಡಿತು. ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಒಬ್ಬನೇ ಅರಣ್ಯವನ್ನು ಪ್ರವೇಶಿಸಿದನು. ಅವನ ಹೆಜ್ಜೆ ಶಬ್ದವನ್ನು ಕೇಳಿ ಶತ್ರುಗಳ ಸೈನಿಕರು ಅವನನ್ನು ಹಿಂಬಾಲಿಸುತ್ತಿದ್ದರು. ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಯಾವುದಾದರೂ ಅಡಗುತಾಣಕ್ಕಾಗಿ ಸುತ್ತಲೂ ನೋಡಿದನು. ಅಲ್ಲಿ ಸಣ್ಣ ಗುಹೆಗಳಿರುವುದನ್ನು ನೋಡಿದನು. ಆದರೆ ಇದು ಸುರಕ್ಷಿತವಾಗಿಲ್ಲ ಎಂದು ತೋರುತ್ತದೆ. ಆದರೆ ಬೇರೆ ದಾರಿಯಿಲ್ಲದೆ ಗುಹೆಯೊಂದರಲ್ಲಿ ತಲೆಮರೆಸಿಕೊಂಡನು. ಆ ಗುಹೆಯಲ್ಲಿ ಮೌನವಾಗಿ ಅವನು ಹೀಗೆ ಪ್ರಾರ್ಥಿಸಿದನು, “ದೇವರೇ, ನನ್ನ ಸುತ್ತಲೂ ಶತ್ರುಗಳಿದ್ದಾರೆ. ನಿಮ್ಮ ಚಿತ್ತವಿದ್ದರೆ ನನ್ನನ್ನು ಬಿಡಿಸಿ" ಎಂದು ಪ್ರಾರ್ಥಿಸಿದನು. ನಾನು ಕೂಡ ಆ ಗುಹೆಯಲ್ಲೇ ಇದ್ದೆ. ನಾನು ಯಾರೆಂದು ತಾನೇ ಯೋಚಿಸುತ್ತಾ ಇದ್ದೀರ? ಸ್ವಲ್ಪ ಇರಿ, ಹೇಳುತ್ತೇನೆ. ಥಟ್ಟನೆ "ಆ ಗುಹೆಯ ದ್ವಾರವನ್ನು ಮುಚ್ಚು" ಎಂದು ಹೇಳಿದರು. ಅದನ್ನು ಹೇಳಿದ್ದು ನನ್ನ ಸೃಷ್ಟಿಕರ್ತನಲ್ಲವೇ? ತಕ್ಷಣ ಗಡಗಡ ಎಂದು ನನ್ನ ಬಲೆಯನ್ನು ದೇವರು ನನಗೆ ಹೇಳಿದಂತೆಯೇ ಕಟ್ಟಿ ಆ ದ್ವಾರವನ್ನು ಮುಚ್ಚಿ ಕುಳಿತೆ. ಆ ಯೋಧನು ಆಶ್ಚರ್ಯವಾಗಿ ನನ್ನನ್ನೇ ನೋಡುತ್ತಿದ್ದರು. ಹೆಜ್ಜೆ ಸಪ್ಪಳ ಕೇಳಿಸಿತು. ಯೋಧರು ಪ್ರತಿ ಗುಹೆಯನ್ನು ಪ್ರವೇಶಿಸಿ ವೀಕ್ಷಿಸಿದರು. ಯೋಧನು ಗುಹೆಯನ್ನು ಸಮೀಪಿಸುತ್ತಿದ್ದಂತೆ, ಅದರಲ್ಲಿ ನೇಯ್ದ ಬಲೆಯನ್ನು ನೋಡಿ ಇದು ಹಳೆಯದು. ಇದರೊಳಗೆ ಯಾರೂ ಇರಲು ಸಾಧ್ಯವಿಲ್ಲ ಎಂದುಕೊಂಡು ಒಳಗೆ ಬರದೇ ಹೊರಟುಹೋದನು. ಆ ಯೋಧನು ಬಹಳ ಸಂತೋಷದಿಂದ ದೇವರಿಗೆ ಕೃತಜ್ಞತೆ ಹೇಳುತ್ತಾ ತನ್ನ ದಾರಿಯಲ್ಲಿ ಹೋದನು. ನೀವು ಆ ಬಲೆ ನೇಯ್ದದ್ದು ಯಾರೆಂದು ಯೋಚಿಸುತ್ತಿರಬಹುದು. ಆ ಬಲೆ ನೇಯ್ದದ್ದು ಪುಟ್ಟ ಜೇಡ ನಾನೇ!

 

ಪ್ರೀತಿಯ ಜನರೇ, ನಾನೊಂದನ್ನು ಯೋಚಿಸಿದೆ. ಮನುಷ್ಯರಾದ ನಿಮ್ಮನ್ನು ಕರ್ತನು ಎಷ್ಟು ಪ್ರೀತಿಸುತ್ತಾರೆ ಎಂದು. ಮತ್ತಾ. 6:26 ರಲ್ಲಿ ಯೇಸುಕ್ರಿಸ್ತನು ಹೇಳಿದರು "ನಮಗಿಂತಲೂ ನೀವು ಹೆಚ್ಚು ವಿಶೇಷವಾದವರು." ನನಗೆ ಸಹಾಯ ಮಾಡಲು ಯಾರೂ ಇಲ್ಲ, ನನ್ನನ್ನು ಪ್ರೀತಿಸಲು ಯಾರೂ ಇಲ್ಲ ಎಂದು ನೀವು ಹೇಳುವುದಾದರೆ, ನಿಮಗೆ ಸಹಾಯ ಮಾಡಲು ದೇವರು ಯಾವಾಗಲೂ ಸಿದ್ಧವಾಗಿದ್ದಾರೆ. ಆದ್ದರಿಂದ ಯಾವಾಗಲೂ ಸಂತೋಷವಾಗಿರಿ!

- Bro.ಆಲ್ವಿನ್ ಜೇಕಬ್

 

ಪ್ರಾರ್ಥನಾ ಅಂಶ:

ಇಂದು ತಂಜಾವೂರು ಕಾರ್ಯಕ್ಷೇತ್ರ ಕುಂಭಕೋಣಂನಲ್ಲಿ ನಡೆಯಲಿರುವ ಉಜ್ಜೀವನವನ್ನು ಬಯಸುವವರ ಕೂಟಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet