Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.07.2022
Share:

By Village Missionary Movement

Thursday, 28-Jul-2022

ಧೈನಂದಿನ ಧ್ಯಾನ(Kannada) – 29.07.2022

 

ಕೃತಜ್ಞತೆಯುಳ್ಳವರಾಗಿರ್ರಿ

 

“...ಒಂದೇ ದೇಹವಾಗಿರುವಂತೆ ಕರೆಯಲ್ಪಟ್ಟಿದ್ದೀರಿ; ಇದಲ್ಲದೆ ನೀವು ಕೃತಜ್ಞತೆಯುಳ್ಳವರಾಗಿರ್ರಿ” - ಕೊಲೊಸ್ಸೆ 3:15

 

ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿ ಅರ್ಜೆಂಟೀನಾವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ಎರಡೂ ತಂಡಗಳು ಉತ್ತಮವಾಗಿ ಆಡಿದವು. ಆದರೆ ಹೆಚ್ಚುವರಿ ಸಮಯದಲ್ಲಿ ಜರ್ಮನಿಯ ಮರಿಯೋ ಗೋಲ್ ಹೊಡೆದು ತನ್ನ ದೇಶಕ್ಕೆ ಜಯ ತಂದುಕೊಟ್ಟರು. ಇವರು ದೇವರಿಗೆ ಕೃತಜ್ಞತೆ ಸಲ್ಲಿಸಿ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. “ದೇವರೇ! ನಾನು ನಿಮ್ಮ ಬಳಿ ಏನನ್ನೂ ಕೇಳಲಿಲ್ಲ. ಆದರೆ ನೀವು ನನಗೆ ನೀಡಿದ ಎಲ್ಲದಕ್ಕೂ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಹೇಳಿರುವುದು ಆಶ್ಚರ್ಯಕರವಾಗಿದೆ!

 

ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು. ಆಗ ಯೆಹೋಷಾಫಾಟನ ಸಂಗಡ ಇದ್ದ ಯೆಹೂದ್ಯರೆಲ್ಲರೂ ಒಟ್ಟುಗೂಡಿ ದೇವರನ್ನು ಹುಡುಕಿದರು. ಅವರೆಲ್ಲರೂ ಏಕಮನಸ್ಸಿನಿಂದ ದೇವರನ್ನು ಸ್ತುತಿಸತೊಡಗಿದರು. ಆಗ ಮೋವಾಬಿನ ಮಕ್ಕಳು ತಮ್ಮ ತಮ್ಮೊಳಗೆ ಒಬ್ಬರನ್ನೊಬ್ಬರು ತಿವಿದುಕೊಂಡು ಬಿದ್ದರು (2 ಪೂರ್ವಕಾಲವೃತ್ತಾಂತ 20:1-20). ಅರಸನಾದ ಯೆಹೋಷಾಫಾಟನೂ ಯೆಹೂದದ ಜನರೂ ಯೆಹೋವನಿಗೆ ಕೃತಜ್ಞತೆ ಸಲ್ಲಿಸಿದರು. ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, 10 ಕುಷ್ಠರೋಗಿಗಳು ಅವರ ಮುಂದೆ ಬಂದು, "ಕರ್ತನಾದ ಯೇಸುವೇ, ನಮ್ಮನ್ನು ಕರುಣಿಸು" ಎಂದು ಪ್ರಾರ್ಥಿಸಿದರು. ತಕ್ಷಣವೇ ಯೇಸು ಆ 10 ಮಂದಿಯನ್ನೂ ವಾಸಿಮಾಡಿದರು. ಅವರಲ್ಲಿ ಒಬ್ಬನು ಮಾತ್ರ ಹಿಂತಿರುಗಿ ಬಂದು ಯೇಸುವಿಗೆ ಕೃತಜ್ಞತೆ ಸಲ್ಲಿಸಿದನು. ಆಗ ಯೇಸು, "ಹತ್ತು ಮಂದಿ ಶುದ್ಧರಾದರಲ್ಲವೇ, ಉಳಿದ ಒಂಬತ್ತು ಮಂದಿ ಎಲ್ಲಿ?" ಎಂದು ಕೇಳುತ್ತಾರೆ. ಹಾಗಾದರೆ ಯೇಸು ಸಹ ಕೃತಜ್ಞತೆಯನ್ನು ಎದುರುನೋಡುತ್ತಿದ್ದಾರೆಂದು ನಾವು ತಿಳಿದುಕೊಳ್ಳಬಹುದು.

 

ಯೇಸು ತನ್ನನ್ನು ಹಿಡಿದುಕೊಡುವಂತಹ ಆ ಸಮಯದಲ್ಲೂ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ, ಕೃತಜ್ಞತೆ ಸಲ್ಲಿಸಿ, ತನ್ನ ಶಿಷ್ಯರಿಗೆ ಕೊಟ್ಟರು ಎಂದು ನಾವು ಓದುತ್ತೇವೆ. ಯೇಸು ಎಲ್ಲಾದಕ್ಕೂ ಸ್ತೋತ್ರ ಸಲ್ಲಿಸುತ್ತಾ, ನಮ್ಮ ಮುಂದೆ ಜೀವಿಸಿ ತೋರಿಸಿದ್ದಾರೆ. ನಾವು ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕು. ಅದನ್ನೇ ಸತ್ಯವೇದವು ನಮಗೆ ಕಲಿಸುತ್ತಿದೆ. ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ (ಕೀರ್ತನೆ 50:23) ಎಂಬ ವಾಕ್ಯವು ನಮಗೆ ತಿಳಿದಿದೆ ಆದ್ದರಿಂದ ನಾವು ಎಲ್ಲಾ ವಿಷಯಗಳಲ್ಲಿ ಮತ್ತು ಎಲ್ಲಾ ಸಮಯದಲ್ಲೂ ಕರ್ತನನ್ನು ಸ್ತುತಿಸುವುದನ್ನು ಕಲಿಯೋಣ. ಸಮೃದ್ಧಿಯ ಸಮಯದಲ್ಲಿ ಮಾತ್ರವಲ್ಲ, ಕೊರತೆಯ ಸಮಯದಲ್ಲೂ, ಜೀವನದ ಎಲ್ಲಾ ಅಗತ್ಯದ ಸಮಯದಲ್ಲೂ, ಆಶೀರ್ವಾದಗಳು ಇದೆಯೋ ಇಲ್ಲವೋ, ನಾವು ಮೊದಲು ಕೃತಜ್ಞತೆ ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಳ್ಳೋಣ. ಅದು ನಮಗೆ ಸರಿಯಾದದ್ದು.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ: ತಮಿಳುನಾಡಿನ ಹಳ್ಳಿಗಳಲ್ಲಿ ಸಭೆಗಳಿಲ್ಲದ ಸ್ಥಳಗಳಲ್ಲಿ 1000 ದೇವಾಲಯಗಳನ್ನು ನಿರ್ಮಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino