Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.07.2022
Share:

By Village Missionary Movement

Saturday, 30-Jul-2022

ಧೈನಂದಿನ ಧ್ಯಾನ(Kannada) – 30.07.2022

 

ಕೃತಜ್ಞತೆಯನ್ನು ನಿರೀಕ್ಷಿಸಬೇಡಿ

 

"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ..." - ಗಲಾತ್ಯ 6:9

 

ನಾವು ವಾಸಿಸುವ ಈ ಮುರಿದ ಜಗತ್ತಿನಲ್ಲಿ ಅನೇಕ ವಿಧವಾದ ನಕಾರಾತ್ಮಕ ಗುಣಗಳನ್ನು ಹೊಂದಿರುವ ಜನರಿದ್ದಾರೆ. ನಾವು ಅವರ ನಡುವೆ ದೇವರ ಕೃಪೆಯನ್ನು ಅವಲಂಬಿಸಿದವರಾಗಿ ಮತ್ತು ಸಾಕ್ಷಿಯುಳ್ಳವರಾಗಿ ಬದುಕಬೇಕು.

 

ಸತ್ಯವೇದದಲ್ಲಿ ನ್ಯಾಯಸ್ಥಾಪಕರ ಪುಸ್ತಕದಲ್ಲಿ ಕೃತಜ್ಞತೆಯಿಲ್ಲದವರನ್ನು ನೋಡುತ್ತೇವೆ. ನ್ಯಾಯ. 6:1,2 ರಲ್ಲಿ, ಇಸ್ರಾಯೇಲ್ಯರು ಮಿದ್ಯಾನ್ಯರಿಂದ ಬಹಳ ಬಾಧೆಯನ್ನನುಭವಿಸಿ ಆಶ್ರಯ ಮತ್ತು ಆಹಾರಕ್ಕಾಗಿ 7 ವರ್ಷಗಳ ಕಾಲ ಕಷ್ಟಪಟ್ಟರು. ಇವರನ್ನು ಮಿದ್ಯಾನ್ಯರ ಕೈಯಿಂದ ರಕ್ಷಿಸಿದ ಗಿದ್ಯೋನನಿಗೆ ಇಸ್ರಾಯೇಲ್ ಜನರು ಸರಿಯಾದ ಕೃತಜ್ಞತೆಯನ್ನು ಸಲ್ಲಿಸದೇ ಬದಲಾಗಿ ಗಿದ್ಯೋನನ 70 ಮಕ್ಕಳನ್ನು ಸಾಯಿಸಲು ಸಹಾಯವಾಗಿ ನಿಂತರು. (ನ್ಯಾಯ. 8:34,35)

 

ಮೋಶೆಯು ತಾನು ಫರೋಹನ ಮಗಳ ಮಗನಾಗಿ ಇರುವುದನ್ನು ತ್ಯಜಿಸಿ ದೇವ ಜನರೊಂದಿಗೆ ಕಷ್ಟವನ್ನು ಅನುಭವಿಸುವುದನ್ನೇ ಆರಿಸಿಕೊಂಡು ತನ್ನ ಸಹೋದರನನ್ನು ನೋಡಲು ಭೇಟಿ ಮಾಡಲು ಬಂದಾಗ ಇಸ್ರಾಯೇಲ್ ಜನರು ಅವನಿಗೆ ಸರಿಯಾದ ಮನ್ನಣೆಯನ್ನು ನೀಡಲಿಲ್ಲ ಮತ್ತು ಅವನಿಗೆ ಕೃತಜ್ಞರಾಗಿರಲಿಲ್ಲ.

 

ಪ್ರಿಯರೇ! ನಿಮ್ಮ ಜೀವನದಲ್ಲೂ ನಿಮ್ಮಿಂದ ಲಾಭ ಪಡೆದವರು ನಿಮ್ಮನ್ನು ವಿರೋಧಿಸುತ್ತಾರೆ. ನಿಮ್ಮ ಮೂಲಕ ದೇವರು ಒಬ್ಬ ವ್ಯಕ್ತಿಯನ್ನೋ ಅಥವಾ ಒಂದು ಕುಟುಂಬವನ್ನೋ ಧೂಳಿನಿಂದ ಸಿಂಹಾಸನದಂತಹ ಉನ್ನತಿಗೆ ಏರಿಸಿರಬಹುದು. ಅವರು ದೇವರನ್ನು ಮರೆತು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅವಮಾನಿಸುವವರಾಗಿ ಬದಲಾಗಿರಬಹುದು.

 

ಇಷ್ಟೆಲ್ಲ ಇದ್ದರೂ ನಾವು, ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ( ಗಲಾ. 6:9 ) ಏಕೆಂದರೆ ಇತರರು ನಮ್ಮನ್ನು ನೋಯಿಸುವಾಗ ನಾವು ದುಃಖಿತರಾಗಿದ್ದರೆ ಮತ್ತು ಮೂಲೆಯಲ್ಲಿದ್ದರೆ, ನಾವು ದುರ್ಬಲರಾಗಿದ್ದೇವೆ ಎಂದರ್ಥ. ಆದರೆ ಸತ್ಯವೇದವು, ನಾವು ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು ಎಂದು ಹೇಳುತ್ತದೆ.

 

ಆದ್ದರಿಂದ, ನಾವು ಜನರಿಂದ ಕೃತಜ್ಞತೆಯನ್ನು ಅಥವಾ ಹೊಗಳಿಕೆಯನ್ನು ನಿರೀಕ್ಷಿಸಬಾರದು. ನೀವು ವಿಶ್ರಾಂತಿಯಲ್ಲಿರುವಂತೆ ನಿಮ್ಮ ಆತ್ಮಗಳಲ್ಲಿ ದಣಿಯದಂತೆ, ತನಗೆ ವಿರೋಧವಾಗಿ ಪಾಪಿಗಳಿಂದ ಮಾಡಲ್ಪಟ್ಟ ಇಂತಹ ವಿಕೃತತೆಯನ್ನು ಸಹಿಸಿಕೊಂಡ ಕರ್ತನನ್ನೇ ನೆನಪಿಸಿಕೊಳ್ಳಿರಿ.

- K. ಬೆಂಜಮಿನ್

 

ಪ್ರಾರ್ಥನಾ ಅಂಶ:

ಇಂದು ಶಿವಕಾಶಿಯಲ್ಲಿ ನಡೆಯಲಿರುವ ಉಜ್ಜೀವನವನ್ನು ಬಯಸುವವರ ಕೂಟಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino