Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.08.2022
Share:

By Village Missionary Movement

Friday, 05-Aug-2022

ಧೈನಂದಿನ ಧ್ಯಾನ(Kannada) – 06.08.2022

 

ಒಂದೇ ದಾರಿ

 

"ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ;..." - ಜ್ಞಾನೋಕ್ತಿ 16:5

 

ಸತ್ಯವೇದದಲ್ಲಿ ನಾವು ಎಸ್ತೇರ್ ಪುಸ್ತಕದಲ್ಲಿ ಹಾಮಾನ್ ಎಂಬ ವ್ಯಕ್ತಿಯ ಬಗ್ಗೆ ಓದುತ್ತೇವೆ. ಅವನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಸ್ವಲ್ಪ ಹಿಂತಿರುಗಿ ನೋಡೋಣವಾ?

 

ಹಿಂದುಸ್ಥಾನ ಮೊದಲುಗೊಂಡು ಕೂಷಿನವರೆಗೂ ಇರುವ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅಹಷ್ವೇರೋಷನು ಎಂಬ ಅರಸನು ಆಳುತ್ತಿದ್ದರು. ಅವರು ತನ್ನ ಬಳಿ ಇದ್ದ ಎಲ್ಲಾ ಪ್ರಭುಗಳಿಗಿಂತ ಈ ಹಾಮಾನನ್ನು ಉನ್ನತವಾಗಿ ಹೆಚ್ಚಿಸಿದ್ದರು. ಅರಮನೆಯಲ್ಲಿದ್ದವರೆಲ್ಲರೂ ಅವನಿಗೆ ನಮಸ್ಕರಿಸಿದರು. ರಾಣಿಯಾದ ಎಸ್ತೇರಳ ಹತ್ತಿರದ ಸಂಬಂಧಿಯಾದ ಮೊರ್ದೆಕೈ, ಅರಮನೆಯ ದ್ವಾರದಲ್ಲಿ ಕುಳಿತುಕೊಳ್ಳುತ್ತಿದ್ದರು. ಅವನು ಯೆಹೂದ್ಯನಾಗಿದ್ದದರಿಂದ ಅವನು ಮಾತ್ರ ಹಾಮಾನನನ್ನು ಸಾಷ್ಟಾಂಗನಮಸ್ಕಾರ ಮಾಡಲಿಲ್ಲ. ಇದರಿಂದ ಹಾಮಾನನು ಅವನ ಮೇಲೆ ಕೋಪಗೊಂಡನು ಮತ್ತು ದೇಶದಲ್ಲಿರುವ ಎಲ್ಲಾ ಯೆಹೂದ್ಯರನ್ನು ಕೊಲ್ಲಲು ಯೋಜಿಸಿದನು.

 

ಒಂದು ದಿನ ಎಸ್ತೇರ್ ರಾಣಿಯು ತಾನು ಸಿದ್ಧಮಾಡಿಸಿದ ಔತಣಕ್ಕೆ ಅರಸನು ಮತ್ತು ಹಾಮಾನನನ್ನು ಆಹ್ವಾನಿಸಿದ್ದರು. ಔತನದ ನಂತರ ಹಾಮಾನನು ಮನೆಗೆ ಹಿಂದಿರುಗಿದನು, ಮೊರ್ದೆಕೈ ತನ್ನನ್ನು ಅಗೌರವದಿಂದ ನೋಡಿದನೆಂದು ತುಂಬಾ ಕೋಪಗೊಂಡು, ತನ್ನ ಹೆಂಡತಿ ಮತ್ತು ಸ್ನೇಹಿತರ ಸಲಹೆಯ ಮೇರೆಗೆ ಅವನು ಮೊರ್ದೆಕೈಯನ್ನು ನೇಣುಗಂಬಕ್ಕೆ ನೇಣು ಹಾಕಲು ಸಿದ್ಧನಾದನು, ಕೊನೆಗೆ ಅವನನ್ನೇ ಅದರಲ್ಲಿ ನೇಣು ಹಾಕಲ್ಪಟ್ಟು ಸತ್ತನು.

 

ಹಾಮಾನನು ತನ್ನ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ಹೊಂದಿದ್ದನು. ಅರಮನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಸಣ್ಣ ವಿಷಯಕ್ಕೆ ಕೋಪಗೊಂಡು ಪ್ರಾಣ ಕಳೆದುಕೊಂಡನು. ಹಾಮಾನನಂತೆ ನಾವೂ ಕೂಡ "ಎಲ್ಲರೂ ನನ್ನನ್ನು ಗೌರವಿಸಬೇಕು, ನನಗೆ ಮರ್ಯಾದೆ ಕೊಡಬೇಕು ಮತ್ತು ನನ್ನನ್ನು ಘನಪಡಿಸಬೇಕು" ಎಂದು ಒಳಮನಸ್ಸಿನಲ್ಲಿ ನಿರೀಕ್ಷಿಸುತ್ತೇವಲ್ಲಾ? ಹಾಗೆ ನಮ್ಮನ್ನು ಗೌರವಿಸದವರಿಗೆ ಅನೇಕ ಅಡೆತಡೆಗಳನ್ನುಂಟು ಮಾಡುತ್ತಾ ಅವರಿಗೆ ಸಿಗಬೇಕಾದ ಪ್ರಯೋಜನಗಳನ್ನು ನಾವು ತಡೆಯುತ್ತಿದ್ದೇವೆಯೇ? "ನಾನು ಯಾರು? ನಾನು ಎಷ್ಟು ದೊಡ್ಡ ಪದವಿಯಲ್ಲಿದ್ದೇನೆ, ನನ್ನ ಬಳಿ ಎಷ್ಟು ಆಸ್ತಿ ಇದೆ," ಎಂದು ನಿಮ್ಮನ್ನು ನೀವೇ ಹೆಚ್ಚಿಸಿಕೊಂಡು, ಇತರರು ನನ್ನನ್ನು ಗೌರವಿಸಬೇಕೆಂದು ನಿರೀಕ್ಷಿಸುವುದು ಪಾಪ ಸ್ವಭಾವದ ಅಭಿವ್ಯಕ್ತಿಯಾಗಿದೆ.

 

ಪ್ರಿಯರೇ! ನಾವು ಬದುಕುತ್ತಿರುವ ಸಮಾಜದಲ್ಲಿ ಇತರರ ಶ್ರೇಷ್ಠತೆಯನ್ನು ಸಹಿಸಲಾಗದ ಮನೋಭಾವ, ಅಸೂಯೆ, ಇತರರನ್ನು ನಾಶಮಾಡುವ ದುಷ್ಟ ಉದ್ದೇಶ, ಮಾನ ಮರ್ಯಾದೆಗಾಗಿ ಮಾಡುವ ಕಾರ್ಯಗಳು ಸಮಾಜವನ್ನು ಕದಡುತ್ತವೆ. ಇಂತಹ ಮನಸ್ಥಿತಿಯಿಂದ ಒಂದು ವ್ಯಕ್ತಿಯ ಮನಸ್ಸನ್ನು ಬದಲಾಯಿಸುವುದು ಸಮಾಜವನ್ನು ಸುಧಾರಿಸುವ ಏಕೈಕ ಮಾರ್ಗವಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರು ಮಾತ್ರವೇ ಪಾಪದಿಂದ ಮುಕ್ತಿ ನೀಡಬಲ್ಲನು. ಆದ್ದರಿಂದ ಈ ಸಮಾಜವು ದೇವರನ್ನು ನೋಡಬೇಕೆಂದು ಪ್ರಾರ್ಥಿಸೋಣ.

- Mrs. ಜಮೀಲಾ ಪಾರ್ತಿಬನ್.

 

ಪ್ರಾರ್ಥನಾ ಅಂಶ:

ದಿಂಡುಕಲ್‌ನಲ್ಲಿ ನಡೆಯಲಿರುವ “ಉಜ್ಜೀವನವನ್ನು ಬಯಸುವವರ ಶಿಬಿರ” – ದಲ್ಲಿ ಉಜ್ಜೀವನವನ್ನು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ಉಜ್ಜೀವನವನಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet