By Village Missionary Movement
Saturday, 06-Aug-2022ಧೈನಂದಿನ ಧ್ಯಾನ(Kannada) – 07.08.2022 (Kids Special)
Jesus ಹತ್ತಿರ ಸಲಹೆ ಕೇಳು
"ಭಯಪಡಿರಿ, ಪಾಪಮಾಡಬೇಡಿರಿ, ಮೌನವಾಗಿರಿ;..." - ಕೀರ್ತನೆ 4:4
Children's Special ಮೂಲಕ ನಿಮ್ಮನ್ನು ಮತ್ತೆ ಭೇಟಿಯಾಗಲು ತುಂಬಾ ತುಂಬಾ ಸಂತೋಷವಾಗ್ತಿದೆ. ನಿಮಗೂ ಸಂತೋಷವಾಗುತ್ತಿದೆಯಾ? ತುಂಬಾ Happy - ನಾ? Very good, Very good. ನಾನು ಚಿಕ್ಕ ಮಗುವಾಗಿದ್ದಾಗ ನಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಏನು ಪುಟಾಣಿಗಳೇ! ಕೇಳಲು ರೆಡೀನಾ!
ನಾನು ಚಿಕ್ಕವನಿದ್ದಾಗ ಅಳಿ ಗುಳಿ ಮಣೆ, Cup-Ice, ಗೋಲಿ ಹೀಗೆ ಹಲವು ಆಟಗಳನ್ನು ಆಡುತ್ತಿದ್ದೆನು. ಏಕೆಂದ್ರೆ, ಈ ಆಟ ಎಲ್ಲಾ ನಿಮಗೆ ಗೊತ್ತಿಲ್ಲ ಅಲ್ವಾ. ಹೌದು ತಾನೇ? ನಿಮಗೆಲ್ಲಾ Video Games, Tv, Lap Top, Computer, Cell phone ಇದರಲ್ಲೇ ತಾನೆ ಆಟ ಆಡೋಕೆ ಗೊತ್ತು? ತುಂಬಾ ಹೊತ್ತು ಆಟವಾಡಿ ಕಣ್ಣು ಹಾಳು ಮಾಡಿಕೊಳ್ಳಬೇಡಿ, ಸರೀನಾ? ಓಡುವುದು ಮತ್ತು ಜಿಗಿಯುವುದು Health - ಗೆ ತುಂಬಾ ಒಳ್ಳೆಯದು. ಸರಿ, ನೀವು ಹೇಳೋಕೆ ಬಂದಿದ್ದನ್ನು ಹೇಳಿ ಅಂತಿದೀರ? Ok ... Ok .... ನಾನು ಹೇಳುತ್ತೇನೆ ... ನಾವು 7 ಜನ ಸೇರಿ ಆಟ ಆಡುತ್ತಿದ್ದೆವು. ಕಣ್ಣಾಮುಚ್ಚಾಲೆ ಆಟ (ಕಪ್-ಐಸ್) ತುಂಬಾ ಜಾಲಿಯಾಗಿ ಮುಂದುವರೆಯುತ್ತಿತ್ತು. ದಿಢೀರನೆ ಸೆಲ್ವಿ ಎಂಬ ಒಂದು ಹುಡುಗಿ ಗ್ಲೋರಿ ಎಂಬ ಹುಡುಗಿಯ ಮುಖವನ್ನು ಚೆನ್ನಾಗಿ ಗಿಲ್ಲಿ ಬಿಟ್ಟಳು. "ಏನೇ, ನಾನು ನೋಡ್ತಲೇ ಇದೀನಿ. ನನ್ನ ಮಾತ್ರ One Ice ಹೇಳ್ತಾನೇ ಇದಾಳೆ. ಅದೇನೆ ಬೇಗ ಬಂತು” ಎಂದು ಹೇಳಿ ಮನೆಗೆ ಓಡಿ ಹೋದಳು. ಕೆನ್ನೆಯ ಮೇಲೆ ಉಗುರಿನ ಗಾಯದಿಂದ ಗ್ಲೋರಿ ಅಳುತ್ತಲೇ ಮನೆಗೆ ಹೋದಳು. ನಾವು ಸಹ 5 ಜನ ಭದ್ರತಾ ಪಡೆಯಂತೆ ಹಿಂದೆಯೇ ಹಿಂಬಾಲಿಸಿದೆವು.
ಗ್ಲೋರಿಯ ಅಮ್ಮನಿಗೆ ಬಂತು ನೋಡಿ ಕೋಪ! ನೆಟ್ಟಗೆ ಸೆಲ್ವಿ ಮನೆಗೆ ಹೋದರು, ಇಬ್ಬರು ತಾಯಂದಿರ ನಡುವೆ ಜಗಳ ಪ್ರಾರಂಭವಾಯಿತು. ಸ್ವಲ್ಪ ಸಮಯದಲ್ಲೇ ಇಬ್ಬರ ಸಂಬಂಧಿಕರ ನಡುವೆ ಘರ್ಷಣೆ ನಡೆದು ಬೀದಿ ಜಗಳವಾಗಿ ಮಾರ್ಪಟ್ಟಿತು. ದೂರದಿಂದ ನೋಡುತ್ತಿದ್ದ ನಾವು ಐವರು ಒಟ್ಟಿಗೆ ಮನೆಗೆ ಓಡಿದೆವು. ಎಷ್ಟು ಚಿಕ್ಕ ಕೋಪ ದೊಡ್ಡ ಹಾನಿಯನ್ನು ಉಂಟುಮಾಡುತ್ತದೆ. ಮರುದಿನವೇ ಸೆಲ್ವಿ ಮತ್ತು ಗ್ಲೋರಿ ಒಟ್ಟಿಗೆ ಆಟವಾಡಲು ಪ್ರಾರಂಭಿಸಿದರು. ಆದರೆ ಅವರ ಕುಟುಂಬವು ಮಾತ್ರ ಹಲವು ದಿನಗಳವರೆಗೆ ಸೇಡಿನಿಂದಲೇ ಇದ್ದರು. ಕೋಪ ಎಲ್ಲರಿಗೂ ಸಹಜ. ಆದರೆ ನಿಮ್ಮ ಸಹನೆಯನ್ನು ಕಳೆದುಕೊಳ್ಳಬಾರದು. ಆಗ ಕೋಪದಿಂದ ಸಂಭವಿಸುವ ಪರಿಣಾಮಗಳನ್ನು ನೋಡದಂತೆ, ಕೋಪವು ತಣ್ಣಗಾಗಿ ಸಂತೋಷದಿಂದ ಬದುಕಲು ದೇವರು ಸಹಾಯ ಮಾಡುತ್ತಾರೆ.
ಏನು ಮುದ್ದು ಪುಟಾಣಿಗಳೇ, ನಿಮಗೂ ಕೋಪ ಬರುತ್ತದೆಯೇ? ನಿಮ್ಮನ್ನು ನೋಡುದ್ರೆ ಒಳ್ಳೆಯ ಮಕ್ಕಳಂತೆ ಕಾಣ್ತಾ ಇದೀರಲ್ಲಾ. ಕೋಪ ಬಂದರೂ ಪಾಪ ಮಾಡಬಾರದು. ಅಂದರೆ ಕೋಪದಲ್ಲಿ, ವಸ್ತುಗಳನ್ನು ಬಿಸಾಡುವುದು, ಒಡೆಯುವುದು ಇದನ್ನೆಲ್ಲಾ ಮಾಡಬಾರದು. ಎಲ್ಲಕ್ಕಿಂತ ಹೆಚ್ಚಾಗಿ, ಕೋಪವನ್ನು ನಿಯಂತ್ರಿಸಲು Jesus ಹತ್ತಿರ ಅನೇಕ ಸಲಹೆಗಳಿವೆ. Daily ಅವರ ಹತ್ತಿರ ಕೇಳಿ ಪಡೆಯಲು ಮರೆತು ಹೋಗಬೇಡಿರಿ! Bye ಪುಟಾಣಿಗಳೇ.
- Mrs. ಮಣಿ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482