Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.08.2022
Share:

By Village Missionary Movement

Wednesday, 10-Aug-2022

ಧೈನಂದಿನ ಧ್ಯಾನ(Kannada) – 10.08.2022

 

ಕ್ಷಮೆಯ ಮಹತ್ವ

 

“ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ..." – ಮತ್ತಾಯ 18:33

 

ನಾವು ಅತ್ಯಾಧುನಿಕ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು ವಿಶೇಷವಾಗಿ ರೈಲ್ವೆ ನಿಲ್ದಾಣಗಳು, ಕಚೇರಿಗಳು, ಹೆದ್ದಾರಿಗಳು ಮತ್ತು ಈಗ ಮನೆಗಳಲ್ಲಿಯೂ ಸಹ ಅಳವಡಿಸಲಾಗಿದೆ. ಅದರಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ನಾವು ಅದರ ದಾಖಲೆಗಳನ್ನು ಹಿಂತಿರುಗಿ ನೋಡಬಹುದು ಮತ್ತು ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಬಹುದು. ನಾವು ಅದರ ದಾಖಲೆಯನ್ನು ನಿರಾಕರಿಸಲೂ ಸಾಧ್ಯವಿಲ್ಲ - ಮರೆಮಾಡಲು ಸಾಧ್ಯವಿಲ್ಲ ಅಲ್ವಾ?

 

ಸತ್ಯವೇದದಲ್ಲಿ ಮತ್ತಾಯ 18-ನೇ ಅಧ್ಯಾಯದಲ್ಲಿ ಒಂದು ಸಾಮ್ಯವನ್ನು ಹೇಳಲಾಗಿದೆ. ಒಬ್ಬ ಸೇವಕನು ತನ್ನ ಯಜಮಾನನ ಬಳಿ 10,000 ರೂಪಾಯಿಗಳನ್ನು ಸಾಲ ಮಾಡಿದ್ದನು. ಅದನ್ನು ಮರುಪಾವತಿಸಲು ಆತನಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಅವನು ತನ್ನ ಯಜಮಾನನ ಬಳಿಗೆ ಹೋಗಿ ತನ್ನ ಸಾಲವನ್ನು ಮನ್ನಾ ಮಾಡುವಂತೆ ಬೇಡಿಕೊಂಡಾಗ, ಅವರು ಅವನನ್ನು ಕ್ಷಮಿಸಿದರು. ಎಷ್ಟು ಒಳ್ಳೆಯ ಯಜಮಾನ! ಕ್ಷಮಿಸಲ್ಪಟ್ಟ ಸೇವಕನು ತನಗೆ 100 ಬೆಳ್ಳಿಯ ನಾಣ್ಯಗಳನ್ನು ನೀಡಬೇಕಾಗಿದ್ದ ತನ್ನ ಸಹ ಸೇವಕನೊಂದಿಗೆ ತುಂಬಾ ಕಠಿಣವಾಗಿ ನಡೆದುಕೊಂಡದ್ದು ದುಃಖಕರವಾಗಿದೆ. ಸ್ವಲ್ಪ ಹಣವನ್ನು ಸಾಲ ಮಾಡಿದ್ದ ತನ್ನ ಸಹ ಸೇವಕನ ಕತ್ತು ಹಿಡಿದು ಹಿಸುಕಿ, ಅವನನ್ನು ಸೆರೆಮನೆಗೆ ಹಾಕಿಸಿದನು. ಎಂತಹ ದೊಡ್ಡ ಅನ್ಯಾಯ. ಮತ್ತೊಬ್ಬ ಸೇವಕನು ಇದನ್ನು ನೋಡಿ ತನ್ನ ಯಜಮಾನನಿಗೆ ತಿಳಿಸಿದನು, ಅವರು ಅವನನ್ನು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಪೀಡಿಸುವವರ ಕೈಗೆ ಒಪ್ಪಿಸಿದರು ಎಂದು ಮತ್ತಾಯ 18: 23-25 ರಲ್ಲಿ ನೋಡುತ್ತೇವೆ.

 

ಪ್ರಿಯರೇ, ನಮ್ಮ ಕರ್ತನು ಕ್ಷಮಿಸುವ ಮನಸ್ಸುಳ್ಳವರಾಗಿದ್ದಾರೆ. ನಾವು ಸಹ ಅವರಂತೆಯೇ ಇರಬೇಕೆಂದು ಅವರು ಬಯಸುತ್ತಿದ್ದಾರೆ. ಅದು ನ್ಯಾಯವೇ ತಾನೇ. ಮತ್ತಾಯ 18:33 ರಲ್ಲಿ - ಕರ್ತನು, "ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ?" ಎಂದು ಹೇಳುತ್ತಾರೆ. ನಾವು ಸಮಾಜದಲ್ಲಿ ಶಾಂತಿಯುತವಾಗಿ ಬದುಕಬೇಕಾದರೆ ಕ್ಷಮೆಯ ಸ್ವಭಾವ ಬಹಳ ಮುಖ್ಯ. ಯಾರು ಯಾರನ್ನು ಕ್ಷಮಿಸುತ್ತಾರೆ ಎಂಬುದು ಗಮನಾರ್ಹವಾಗಿದೆ. ನಮ್ಮನ್ನು ಕ್ಷಮಿಸಿದವರನ್ನು ಪ್ರೀತಿಸುವಂತೆ ನಟಿಸಿ, ನಮ್ಮ ಬಳಿ ಸಾಲಮಾಡಿದವರನ್ನು ಕ್ಷಮಿಸದೆ ಅವರ ಮೇಲೆ ಉರಿಗೊಳ್ಳುವಾಗ ನಮ್ಮನ್ನು ಕ್ಷಮಿಸಿ ಸ್ವೀಕರಿಸಿದ ಕರ್ತನನ್ನು ಮರೆತುಬಿಡುತ್ತೇವೆ. ನಾವು ಮರೆತು ಬಿಟ್ಟರೂ, ಬಚ್ಚಿಟ್ಟರೂ ಕರ್ತನು ಅರಿತಿದ್ದಾರೆ. ನಾವು ಇತರರನ್ನು ಕ್ಷಮಿಸುವವರಾಗಿ ಮತ್ತು ಅವರು ನಮಗೆ ನೀಡಬೇಕಾದ ಸಾಲವನ್ನು ಮರೆತುಬಿಡುವ ಸ್ವಭಾವವುಳ್ಳವರಾಗಿ ಮಾರ್ಪಡುವಾಗ, ನಾವು ವಾಸಿಸುವ ಸಮಾಜದಲ್ಲಿ ಸಣ್ಣ ಬದಲಾವಣೆ ಉಂಟಾಗುತ್ತದೆ.

- Mrs. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಅನ್ನ ನೀಡುವ ಯೋಜನೆಯ ಮೂಲಕ ಅನೇಕರು ಪೋಷಿಸಲ್ಪಡಲು ಮತ್ತು ದೇವರನ್ನು ತಿಳಿದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş holiganbet giriş matbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet jojobet jojobet jojobet jojobet jojobet holiganbet holiganbet grandpashabet grandpashabet grandpashabet cratosroyalbet