Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.08.2022
Share:

By Village Missionary Movement

Friday, 19-Aug-2022

ಧೈನಂದಿನ ಧ್ಯಾನ(Kannada) – 20.08.2022

 

ನಿಮ್ಮ ಸಂಪ್ರದಾಯಗಳು

 

"ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ..." - ಮತ್ತಾಯ 15:9

 

ಒಂದು ಸಭೆಯ ರೇಡಿಯೊ ಜಾಹೀರಾತು ನನ್ನ ಗಮನ ಸೆಳೆಯಿತು. “ನೀವು ಕ್ರೈಸ್ತವ್ಯದ ಬಗ್ಗೆ ಕೇಳಿದ್ದರಿಂದ ಧರ್ಮದ ಮೇಲೆ ಆಸಕ್ತಿ ತೋರದೆ ಇದ್ದಿರಬಹುದು. ಕರ್ತನಾದ ಯೇಸುವಿಗೂ ಧರ್ಮದ ಮೇಲೆ ಆಸಕ್ತಿ ಇರಲಿಲ್ಲ ಎಂಬುದು ನಿಮಗೆ ಆಶ್ಚರ್ಯವಾಗಬಹುದು! ಆದರೆ ಒಬ್ಬರಿಗೊಬ್ಬರು ಒಂದಾಗಿರಬೇಕು. ನಾವು ಒಬ್ಬರನ್ನೊಬ್ಬರು ಹೆಚ್ಚಾಗಿ ಪ್ರೀತಿಸಬೇಕು ಎಂಬುದನ್ನು ಹೆಚ್ಚಾಗಿ ಕಲಿಸಿಕೊಟ್ಟರು. ಅಲ್ಲದೆ, ನಮ್ಮ ಸಭೆಯು ಮಾಡುವ ಎಲ್ಲವನ್ನೂ ನೀವು ಇಷ್ಟಪಡದಿರಬಹುದು. ಆದರೆ ನಾವು ದೃಢವಾದ ಪ್ರಾರಂಭವನ್ನು ನೀಡುತ್ತೇವೆ. ಕರ್ತನನ್ನು ಪ್ರೀತಿಸಲು ಮತ್ತು ಒಬ್ಬರನ್ನೊಬ್ಬರು ಪ್ರೀತಿಸಲು ನಾವು ಕಲಿಯುತ್ತಿದ್ದೇವೆ. ನಿಮಗೂ ಸ್ವಾಗತ” ಎಂದು ಆ ಜಾಹೀರಾತಿನಲ್ಲಿ ಹೇಳಲಾಗಿತ್ತು.

 

2000 ವರ್ಷಗಳ ಹಿಂದೆ ಈ ಲೋಕಕ್ಕೆ ಬಂದ ಕರ್ತನಾದ ಯೇಸುಕ್ರಿಸ್ತನು ಕ್ರೈಸ್ತ ಧರ್ಮವನ್ನು ಸ್ಥಾಪಿಸುವ ಮತ್ತು ಧಾರ್ಮಿಕ ನಾಯಕನಾಗುವ ಉದ್ದೇಶದಿಂದ ಬರಲಿಲ್ಲ. ಪ್ರಪಂಚದ ಅನೇಕ ಜನರು ಕೆಲವು ತತ್ವಗಳನ್ನು ಹಾಕುವ ಮೂಲಕ ಧರ್ಮವನ್ನು ಸ್ಥಾಪಿಸಲು ಮತ್ತು ಅಭಿವೃದ್ಧಿಪಡಿಸಲು ಬಯಸುತ್ತಾರೆ. ಈ ರೀತಿ ಮಾಡುವುದರಿಂದ ಜನರಿಗೆ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂದು ನೋಡಿದರೆ ಪಾಪದ ಹೆಚ್ಚಳವೇ ಧರ್ಮದ ಹೆಸರಿನಲ್ಲಿ ಜನರಿಗೆ ದೊರೆಯಿತು. ಕರ್ತನಾದ ಯೇಸು ತನ್ನ ಸೇವೆಯ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಉತ್ಸಾಹ ತೋರುತ್ತಿದ್ದ ಫರಿಸಾಯರ ಮತ್ತು ಸದ್ದುಕಾಯರ ವಿರುದ್ಧ ಕಟುವಾಗಿ ಮಾತಾಡಿದರು. ಸಂಪ್ರದಾಯಗಳನ್ನು ಒತ್ತಿಹೇಳಲು ಬಯಸಿದ ಧಾರ್ಮಿಕ ಮುಖಂಡರು, ಕರುಣೆ, ನ್ಯಾಯ ಮತ್ತು ದೇವರ ಜ್ಞಾನವನ್ನು ತೊರೆದರು ಎಂಬುದನ್ನು ಯೇಸು ತಮ್ಮ ಸೇವೆಯ ದಿನಗಳಲ್ಲಿ, ಸರಿಯಾಗಿ ಬೋಧಿಸಿದ್ದರು.

 

ಇಂದು ಪ್ರಪಂಚದ ಲಕ್ಷಾಂತರ ಜನರು ತಮ್ಮದೇ ಆದ ಧರ್ಮವನ್ನು ಅನುಸರಿಸುತ್ತಾರೆ ಮತ್ತು ಅದರ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸುತ್ತಾರೆ. ಆದರೆ ಕ್ರೈಸ್ತವ್ಯವು ಸಂಪ್ರದಾಯಗಳಲ್ಲ, ನಿಜವಾದ ಜೀವವುಳ್ಳ ದೇವರಾದ ಯೇಸುಕ್ರಿಸ್ತನನ್ನು ಅವರ ಮಾತುಗಳನ್ನು ಕೇಳಿ ಅದನ್ನು ಹಿಂಬಾಲಿಸುವುದೇ ಒಂದು ಮನುಷ್ಯನಿಗೆ ನೀಡಲಾದ ಮುಖ್ಯ ಆಜ್ಞೆಯಾಗಿದೆ ಎಂದು ಸ್ಪಷ್ಟಪಡಿಸುತ್ತಿದೆ. ಇದನ್ನು ಓದುತ್ತಿರುವ ನೀವು ಧರ್ಮದ ಹೆಸರಿನಲ್ಲಿ ಭಿನ್ನವಾಗಿರಬಹುದು. ಮನುಷ್ಯನಿಗೆ ಧರ್ಮ ಮುಖ್ಯವಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಮಾನವೀಯತೆಯಿಂದ ದೇವರನ್ನು ಆರಾಧಿಸುವುದೇ ಸರಿಯಾದ ಗುಣಲಕ್ಷಣವಾಗಿದೆ. ದೇವರು ನಿಮಗೆ ಸಹಾಯ ಮಾಡಲಿ.

- P. ಜೇಕಬ್ ಶಂಕರ್.

 

ಪ್ರಾರ್ಥನಾ ಅಂಶ:

ನಾಮಕ್ಕಲ್‌ನಲ್ಲಿ ನಡೆಯಲಿರುವ “ಉಜ್ಜೀವನವನ್ನು ಬಯಸುವವರ ಕೂಟ” - ದಲ್ಲಿ ಉಜ್ಜೀವನವನ್ನು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ಉಜ್ಜೀವನವನ್ನು ಹೊಂದುವಂತೆ ಪ್ರಾರ್ಥಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet