Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.08.2022 (Youth Special)
Share:

By Village Missionary Movement

Monday, 22-Aug-2022

ಧೈನಂದಿನ ಧ್ಯಾನ(Kannada) – 22.08.2022 (Youth Special)

 

ಬೇಡ

 

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ." - 1 ಯೋಹಾನ 2:15

 

ಕೆಲವು ವರ್ಷಗಳ ಹಿಂದೆ Home Life Magazine ಒಂದು ವಿಷಯವನ್ನು ವಿವರಿಸುವ ರೀತಿಯಲ್ಲಿ ಒಂದು ಸಂದೇಶವನ್ನು ಪ್ರಕಟಿಸಿತು. ಒಂದು ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ತರಕಾರಿಗಳನ್ನು ಸ್ವಚ್ಛಗೊಳಿಸಿ ಕತ್ತರಿಸಿ, ಹಣ್ಣುಗಳನ್ನು ಸಿಪ್ಪೆ ತೆಗೆದು ಕತ್ತರಿಸಿ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಒಂದು ಆಹಾರ ಪದಾರ್ಥವನ್ನು (Salad) ತಯಾರಿಸುತ್ತಿದ್ದರು. ಕತ್ತರಿಸಿದ ತರಕಾರಿಗಳು ಮತ್ತು ಹಣ್ಣಿನ ಸಿಪ್ಪೆಗಳ ಅನಗತ್ಯ ಭಾಗಗಳನ್ನು ಕಸದ ಬುಟ್ಟಿಗೆ ಎಸೆಯಲು ಒಂದು ಬದಿಯಲ್ಲಿ ಇಟ್ಟಿದ್ದರು.

 

ಆಗ ಮಗಳು ಬಂದು "ಅಮ್ಮಾ ನಾನು ವರ್ಲ್ಡ್ ಎಂಟರ್ಟೈನ್ಮೆಂಟ್ ಸೆಂಟರ್ನಲ್ಲಿ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ" ಎಂದು ಅನುಮತಿ ಕೇಳಿದಳು. ಆ ಮನರಂಜನಾ ಕೇಂದ್ರವು ಸೂಕ್ತವಲ್ಲ ಎಂದು ಅನೇಕರು ಬಹಿರಂಗವಾಗಿ

 

ಮಾತನಾಡಿಕೊಳ್ಳುವ ಒಂದು ಸ್ಥಳವಾಗಿದೆ ಎಂಬುದನ್ನೇ ಮನಸ್ಸಿನಲ್ಲಿಟ್ಟುಕೊಂಡು ಅಮ್ಮ ಆ ಜಾಗಕ್ಕೆ ಹೋಗುವುದೇ ಅಸಹ್ಯವೆಂಬಂತೆ ಮಗಳ ಮುಖ ನೋಡಿದರು. “ಅಮ್ಮಾ, ನಾನು ಇಷ್ಟಪಟ್ಟು ಹೋಗುತ್ತಿಲ್ಲ. ನಾನು ಬರದಿದ್ದರೆ ನನ್ನ ಸ್ನೇಹಿತರು ನನ್ನನ್ನು ಗೇಲಿ ಮಾಡುತ್ತಾರೆ. ಹಾಗಾಗಿ ಹೋಗಲೇ ಬೇಕು,’’ ಎಂದಳು.

ಕೂಡಲೇ ತಾಯಿ ಕಸಕ್ಕೆ ಹಾಕಿದ್ದ ತ್ಯಾಜ್ಯ ವಸ್ತುವನ್ನು ಒಂದು ಹಿಡಿ ಎತ್ತಿ ಒಳ್ಳೆ ಆಹಾರದ ಪಾತ್ರೆಯಲ್ಲಿ ಹಾಕಿದಳು. ಗೊತ್ತಿಲ್ಲದೇ ಮರೆತು ಅಮ್ಮ ಏನೋ ಮಾಡುತ್ತಿದ್ದಾಳೆ ಎಂದುಕೊಳ್ಳುತ್ತಾ, "ಅಮ್ಮಾ, ಬಿಸಾಡಬೇಕಾದ್ದನ್ನು ಕಸಕ್ಕೆ ಹಾಕುತ್ತಿದ್ದೀಯಾ" ಎಂದಳು ಅಮ್ಮ "ಹೌದು, ಗೊತ್ತಿದ್ದೂ ಹಾಕುತ್ತಿದ್ದೇನೆ" ಎಂದಳು. ಮಗಳಿಗೆ ತಕ್ಷಣ ಅರ್ಥವಾಯಿತು. "ನಾನು ಈಗಲೇ ನನ್ನ ಸ್ನೇಹಿತೆಯರಿಗೆ ಕರೆ ಮಾಡಿ ನಾನು ಬರುವುದಿಲ್ಲ ಎಂದು ಹೇಳಿ ಬಿಡುತ್ತೇನೆ" ಎಂದು ಹೇಳಿದಳು.

 

ಇದನ್ನು ಓದುತ್ತಿರುವ ಯುವ ಕಣ್ಮಣಿಯೇ, ನೀವು ಶಾಲೆಯನ್ನು ಮುಗಿಸಿ ಕಾಲೇಜಿಗೆ ಅಥವಾ ಉನ್ನತ ಶಿಕ್ಷಣಕ್ಕೆ ಹೋಗುವಾಗ, ಬೇರೆ ಎಲ್ಲಾ ಸ್ನೇಹಿತರೊಂದಿಗೆ ಎಲ್ಲಾ ವಿಷಯದಲ್ಲೂ ನೀವು ಹೊಂದಿಕೊಳ್ಳಲು ಸಾಧ್ಯವಿಲ್ಲ. ಕೆಲವು ಪಾಪದ ವಿಷಯಗಳಿಗೆ ನೀವು 'No' ಎಂದು ಹೇಳಲೇಬೇಕು. ಇಂದೇ ನಿರ್ಧರಿಸಿ. ಧೈರ್ಯವಾಗಿರಿ ಮತ್ತು ನಿಮ್ಮ ಸ್ನೇಹಿತರು ನಿಮ್ಮನ್ನು ಕೆಟ್ಟ ಕೆಲಸಗಳನ್ನು ಮಾಡುವಂತೆ ಮಾಡಿದರೂ "No" ಎಂದು ಹೇಳಿ. ನೀವು ಪ್ರಪಂಚದ ಏಕತೆಯಿಂದ ನಿಮ್ಮನ್ನು ಬೇರ್ಪಡಿಸದಿದ್ದರೆ, ಈ ಲೋಕವು ನಿಮ್ಮನ್ನು ದೇವರಿಂದ ಬೇರ್ಪಡಿಸುತ್ತದೆ ಎಂಬುದನ್ನು ನೆನಪಿಡಿ. ದಾನಿಯೇಲನ ಹಾಗೆ, ಯೋಸೇಫನ ಹಾಗೆ. ಜೀವಂತ ಮೀನಿನಂತೆ ವಿರುದ್ಧವಾಗಿ ಈಜಿರಿ. ತಪ್ಪಿಸಿಕೊಳ್ಳುವಿರಿ

- Mrs. ಜೆಬಾ ಡೇವಿಡ್ ಗಣೇಶನ್.

 

ಪ್ರಾರ್ಥನಾ ಅಂಶ:

ಸರಪಳಿ ಪ್ರಾರ್ಥನೆಯಲ್ಲಿ ಸೇರಿರುವ ಪ್ರತಿಯೊಬ್ಬರನ್ನು ಪ್ರಾರ್ಥನಾ ಆತ್ಮದಿಂದಲೂ ಮತ್ತು ಆತ್ಮ ಭಾರದಿಂದಲೂ ಕರ್ತನು ತುಂಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz jojobet jojobet giriş jojobet güncel giriş meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş Meritking Perabet Holiganbet jojobet jojobet giriş jojobet güncel giriş bahsegel bahsegel bahsegel bahsegel bahsegel perabet perabet giriş perabet perabet giriş holiganbet holiganbet giriş holiganbet holiganbet giriş belugabahis matbet romabet