By Village Missionary Movement
Tuesday, 30-Aug-2022ಧೈನಂದಿನ ಧ್ಯಾನ(Kannada) – 30.08.2022
ಲೈಂಗಿಕ ಹಿಂಸೆಗಳು
"ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವ ದಕ್ಕಾಗಿ ಹೊರಗೆ ಹೋದಳು." - ಆದಿಕಾಂಡ 34:1
ದೇವ ಮನುಷ್ಯನಾದ ಯಾಕೋಬನ ಕುಟುಂಬದಲ್ಲಿ ಸಂಭವಿಸಿದ ಅಹಿತಕರ ಘಟನೆಯೊಂದನ್ನು ಇಂದಿನ ಸತ್ಯವೇದ ಭಾಗದಲ್ಲಿ ಓದುತ್ತೇವೆ. ಯಾಕೋಬನಿಗೆ ಇದ್ದ ಒಬ್ಬಳೇ ಮಗಳು ದೀನಾ. ಶೆಕೆಮ್‌ನ ಪಟ್ಟಣದಲ್ಲಿದ್ದ ಹೆಣ್ಣು ಮಕ್ಕಳನ್ನು ನೋಡಲು ಹೋದ ಸ್ಥಳದಲ್ಲಿ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದದ್ದನ್ನು ಓದುತ್ತೇವೆ. ಅನಾದಿ ಕಾಲದಿಂದಲೂ ಮಹಿಳೆಯರ ಮೇಲಿನ ಈ ರೀತಿಯ ಅಪರಾಧಗಳು ಎಲ್ಲೆಡೆ ನಡೆಯುತ್ತಲೇ ಇವೆ. ಭಾರತದ ಪೊಲೀಸ್ ಠಾಣೆಗಳಲ್ಲಿ ಪ್ರತಿದಿನ 88 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಾಸರಿ 20,000 ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ.
2012ರಲ್ಲಿ ದೆಹಲಿಯಲ್ಲಿ ಹೋಗುತ್ತಿದ್ದ ಬಸ್ಸಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಲೈಂಗಿಕ ಅಪರಾಧಿಗಳು ಯುವತಿಗೆ ಘೋರ ಕೃತ್ಯ ಎಸಗಿದ್ದಾರೆ. ಆ ಹುಡುಗಿ, "ತನ್ನ ಗೆಳೆಯರೊಂದಿಗೆ ಏಕೆ ಹೊರಗೆ ಹೋಗಿದ್ದಳು?" ಎಂಬುದು ಜನರ ಪ್ರಶ್ನೆ. ಆ ಹುಡುಗಿಯೇ ಲೈಂಗಿಕ ದೌರ್ಜನ್ಯವನ್ನು ಆಹ್ವಾನಿಸಿದಳಾ? ಎಂಬ ಪ್ರಶ್ನೆಗಳು ನಮ್ಮ ದೇಶದಾದ್ಯಂತ ಪ್ರತಿಧ್ವನಿಸಿದವು. "ಸುಮ್ಮನೆ, ಒಂದು ವಾಕಿಂಗ್ ಹೋಗಿ ಬರೋಣ" ಎಂದು ಯೋಚಿಸುವುದೂ ಸಹ ಅನೇಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಾರ್ಥವಾಗಿ ಮಾರ್ಪಡಿಸುತ್ತಿದೆ. ಮಹಿಳೆಯರು ಅಭದ್ರತೆಯ ವಿಕೃತ ಜಗತ್ತಿನಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಕ್ರಿಸ್ತನಲ್ಲಿ ಪ್ರಿಯರೇ, ಕರ್ತನೇ ನಮ್ಮನ್ನು ಕಾಯುವಾತನು. ಅದು ಆತನು ನಿಗದಿಪಡಿಸಿದ ಗಡಿಯೊಳಗೆ ನಾವು ಇರುವಾಗ, ನಿಶ್ಚಯವಾಗಿಯೂ ಭದ್ರತೆ ಇರುತ್ತದೆ. ಇಂದಿನ ಪೀಳಿಗೆ ಮೊಬೈಲ್ ಫೋನ್ ಮೂಲಕ ಈ ಸೈತಾನನ ಬಲೆಗೆ ಬಿದ್ದು ನಾಶವಾಗುತ್ತಿದೆ. ಯಾವ ಸ್ಥಳಕ್ಕೆ ಹೋಗುವುದು ನಮಗೆ ಸುರಕ್ಷಿತವಲ್ಲ ಎಂಬುದನ್ನು ತಿಳಿದುಕೊಳ್ಳುವಂಥಹ ಒಂದು ಉತ್ತಮವಾದ ಖಚಿತತೆಯನ್ನು ದೇವರು ಪ್ರತಿಯೊಬ್ಬರಿಗೂ ಕೊಟ್ಟಿದ್ದಾರೆ. ಆದ್ದರಿಂದ ಬುದ್ಧಿವಂತಿಕೆಯಿಂದ ಬದುಕೋಣ. ಇದನ್ನು ನಿರ್ಲಕ್ಷಿಸುವುದರಿಂದ ನಮಗೆ ಅನಗತ್ಯ ದುಃಖ ಉಂಟಾಗುತ್ತದೆ. ನಮ್ಮ ದೇಶದಲ್ಲಿ ಇಂತಹ ಅಪರಾಧಗಳು ಹೆಚ್ಚಾಗದಿರಲಿ ಎಂದು ನಾವು ಆಸಕ್ತಿಯಿಂದ ಪ್ರಾರ್ಥಿಸೋಣ.
- P.ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
ಪ್ರಾರ್ಥನೆ ಮತ್ತು ಕಾಣಿಕೆಗಳೊಂದಿಗೆ ಸೇವೆಯನ್ನು ಬೆಂಬಲಿಸುತ್ತಿರುವ ಪಾಲುದಾರರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482