Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.09.2022
Share:

By Village Missionary Movement

Thursday, 01-Sep-2022

ಧೈನಂದಿನ ಧ್ಯಾನ(Kannada) – 01.09.2022

 

ಪ್ರೀತಿಯೇ ದೊಡ್ಡದು

 

"..ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ." - 1 ಕೊರಿಂಥ. 13:13

 

ಬೆಲ್ಜಿಯಂ ಮೂಲದ ಜೋಸೆಫ್ ಡ್ಯಾನ್ಯನ್ ಅವರು ಹವಾಯಿಯನ್ ದ್ವೀಪದಲ್ಲಿ ಕುಷ್ಠರೋಗಿಗಳ ನಡುವೆ ಸೇವೆ ಮಾಡಲು ಹೋದರು. ಕುಷ್ಠರೋಗಿಗಳೊಂದಿಗೆ ಸ್ನೇಹ ಬೆಳೆಸುವ ಉದ್ದೇಶ ಹೊಂದಿದ್ದರು. ಆದರೆ ಆ ಜನರು ದೂರ ಹೊರಟು ಹೋದರು. ಅವರು ಒಂದು ಆಲಯವನ್ನು ನಿರ್ಮಿಸಿ ಆರಾಧನೆಯನ್ನು ನಡೆಸಿದರು ಯಾರೊಬ್ಬರೂ ದೇವರನ್ನು ಅಂಗೀಕರಿಸಲಿಲ್ಲ. ತನ್ನ ಪೂರ್ಣ ಶಕ್ತಿಯಿಂದ ಅವರಿಗೆ ಸಹಾಯ ಮಾಡಿದರು. 12 ವರ್ಷಗಳ ಕಾಲ ಅವನು ತನ್ನೆಲ್ಲಾ ಪ್ರೀತಿಯನ್ನು ಕುಷ್ಠರೋಗಿಗಳ ಮೇಲೆ ಸುರಿದರೂ ಪ್ರಯೋಜನವಾಗಲಿಲ್ಲ; ಎಲ್ಲಾ ವ್ಯರ್ಥವಾಯಿತು. ಅವರು ಅಂತಿಮವಾಗಿ ದ್ವೀಪವನ್ನು ಬಿಟ್ಟು ಹೊರಟು ಹೋಗಲು ತೀರ್ಮಾನಿಸಿ ಹಡಗಿಗೆ ಬಂದಾಗ, ಅವರು ತನ್ನ ಅಂಗೈಯನ್ನು ದೃಷ್ಟಿಸಿ ನೋಡಿದಾಗ ಬಿಳೀ ಕಲೆಗಳು ಕಂಡವು.

 

ತನಗೂ ಕುಷ್ಠರೋಗ ಬಂದಿದೆಯೆಂದು ತಿಳಿದು ಪುನಃ ಅವರ ಬಳಿಗೆ ಹೋಗಿ ಉಪಚರಿಸಿದರು. ಆದರೆ ಪ್ರೀತಿ ಮತ್ತು ಕಾಳಜಿ ಕಡಿಮೆಯಾಗಲಿಲ್ಲ. ಜೋಸೆಫ್ ಡ್ಯಾನ್ಯನ್ ಅವರ ಕುಷ್ಠರೋಗದ ಸುದ್ದಿ ಹವಾಯಿಯ ಜನರಿಗೆ ಹರಡಿತು. ಆ ವಾರ ಆರಾಧನೆಗೆ ಚರ್ಚ್ ತುಂಬಿತ್ತು. ಕಾರಣವೇನೆಂದರೆ ತಮ್ಮ ರೋಗ ಅವರಿಗೆ ಸೋಕಿದರೂ ಪ್ರೀತಿ ಮತ್ತು ವಾತ್ಸಲ್ಯವನ್ನು ಯಾವುದೇ ವ್ಯತ್ಯಾಸವಿಲ್ಲದೆ ಹೆಚ್ಚಾಗಿ ತೋರುವುದನ್ನು ಕಂಡು ಅಷ್ಟು ಜನರು ಬಂದಿದ್ದರು. ಆಲಯಕ್ಕೆ ಬಂದವರೆಲ್ಲಾ ದೇವರನ್ನು ಅಂಗೀಕರಿಸಿದರು.

 

ಇದೇ ಪ್ರೀತಿಯನ್ನು ಕ್ರಿಸ್ತನು ಸಹ ನಮ್ಮಿಂದ ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದಲೇ ಆಜ್ಞೆಗಳನ್ನು ಮತ್ತು ಧರ್ಮಶಾಸ್ತ್ರವನ್ನು ಪ್ರೀತಿಯಲ್ಲಿ ಸುತ್ತಿ ತೆಗೆದುಕೊಂಡು ಬರುತ್ತಿದ್ದಾರೆ. “ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು "(ಮತ್ತಾಯ 22:37-39) ಎನ್ನುತ್ತಾರೆ. ದೇವರು ಮತ್ತು ಜನರನ್ನು ಪ್ರೀತಿಸಲು, ನಮ್ಮ ಆತ್ಮವನ್ನು ಕೊಂದರೆ ಮಾತ್ರ ಸಾಧ್ಯ, ಸ್ವಾರ್ಥವು ಮೇಲುಗೈ ಸಾಧಿಸಿದಾಗ, ಅಹಂಕಾರ ಮತ್ತು ಅಸೂಯೆಯೇ ಬರುತ್ತದೆ, ಪ್ರೀತಿ ಬರುವುದಿಲ್ಲ. ನೀವು ದೇವರನ್ನು ಪ್ರೀತಿಸುವಾಗ, ಅವರ ಮೇಲೆ ನಂಬಿಕೆ ಮತ್ತು ಭರವಸೆ ಸ್ವಯಂಚಾಲಿತವಾಗಿ ಬರುತ್ತದೆ. ಕ್ರಿಸ್ತನು ನಮ್ಮ ಜೀವನದಲ್ಲಿ ತುಂಬಿರುತ್ತಾರೆ. ನಾವು ಜನರನ್ನು ಪ್ರೀತಿಸಿದಾಗ ಪ್ರೀತಿ ನಮ್ಮ ಬಾಯಿಂದ ಮತ್ತು ನಮ್ಮ ಕ್ರಿಯೆಗಳಲ್ಲಿ ಬರುತ್ತದೆ. ಕೊರತೆಯುಳ್ಳ ನಾವು ಕ್ರಿಸ್ತನ ಪೂರ್ಣತೆಯಿಂದ ತುಂಬಿದಾಗ ಪ್ರೀತಿಯು ನಮ್ಮ ಜೀವನವಾಗಿ ಮಾರ್ಪಡುತ್ತದೆ.

 

“ಪ್ರೀತಿ ಇಲ್ಲದೆ ನೀಡಬಹುದು; ಆದರೆ ಕೊಡದೆ ಪ್ರೀತಿಸಲು ಸಾಧ್ಯವಿಲ್ಲ, ”ಎಂದು ಹೇಳಿದರು ತಾಯಿ ಅಮಿಕಾರ್ಮೈಕಲ್ ಅವರು, ಪ್ರಿಯರೇ! ನಮ್ಮ ಜೀವನದಲ್ಲಿ ಯಾವುದು ದೊಡ್ಡದಾಗಿದೆ? "ಪ್ರೀತಿಯೇ ದೊಡ್ಡದು" ಎಂದು ಪವಿತ್ರಾತ್ಮನು ಹೇಳುತ್ತಿದ್ದಾರೆ. ಜೋಸೆಫ್ ಡ್ಯಾನ್ಯನ್ ಎಂಬ ಮಿಷನರಿಯ ಜೀವನವನ್ನು ನೋಡುವಾಗ, "ಪ್ರೀತಿಯೇ ದೊಡ್ಡದು" ಎಂದು ನಾವು ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಪ್ರೀತಿ ಬೆಳಗಿದಾಗ ನಾವು ಪ್ರಕಾಶಮಾನವಾಗಿ ಬೆಳಗುತ್ತೇವೆ. ರಾಜರು ನಮ್ಮ ಬೆಳಕಿಗೆ ಬರುತ್ತಾರೆ ಮತ್ತು ನಮ್ಮ ಬೆಳಕಿಗೆ ಕಾರಣವಾದ ಕ್ರಿಸ್ತನನ್ನು ತಿಳಿದುಕೊಳ್ಳುತ್ತಾರೆ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಎಲ್ಲಾ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet