By Village Missionary Movement
Saturday, 03-Sep-2022ಧೈನಂದಿನ ಧ್ಯಾನ(Kannada) – 03.09.2022
ಉಚಿತ
"...ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ" - ಮತ್ತಾಯ 10:8
ಅನೇಕ ಮಧ್ಯಮ ವರ್ಗದ ಜನರು ಉಚಿತಗಳನ್ನು ಇಷ್ಟಪಡುವುದಿಲ್ಲ. ಏಕೆಂದರೆ ಉಚಿತವು ತುಂಬಾ ಕಳಪೆ ಗುಣಮಟ್ಟವಾಗಿರುತ್ತದೆ ಅನ್ನುತ್ತಾರೆ. ಆದರೆ ಒಬ್ಬ ವ್ಯಕ್ತಿ ತಾನು ಕಂಡುಹಿಡಿದದ್ದನ್ನು ಈ ಲೋಕಕ್ಕೆ ಉಚಿತವಾಗಿ ನೀಡಿದರು. Jonas Edward Salk ಎಂಬ ಜೀವಶಾಸ್ತ್ರ ಸಂಶೋಧಕರು ವಿಶ್ವದ ಮೊದಲ ಪೋಲಿಯೊ ಲಸಿಕೆಯನ್ನು ಕಂಡುಹಿಡಿದರು. ಅವರು ಕಂಡುಹಿಡಿದ ಪೋಲಿಯೊ ಲಸಿಕೆಗೆ ಪೇಟೆಂಟ್ (ಸ್ವಂತ ಎಂಬ ಹಕ್ಕನ್ನು) ಪಡೆಯಲಿಲ್ಲ. ಹಾಗೆ ಮಾಡಿದ್ದರೆ ಇಂದು ಅದರ ಬೆಲೆ ಸಾವಿರಾರು ರೂಪಾಯಿಗೆ ಏರುತ್ತಿತ್ತು. ಆದರೆ ಅವರು ಪೋಲಿಯೊ ಲಸಿಕೆಯನ್ನು ವಿಶ್ವದಾದ್ಯಂತ ಬಡ ಜನರಿಗೆ ಲಭ್ಯವಾಗುವಂತೆ ಪೇಟೆಂಟ್ ಮಾಡದೆ ಬಿಟ್ಟರು. ಅದಕ್ಕಾಗಿಯೇ ಇಂದು ಪ್ರಪಂಚದಾದ್ಯಂತ ವಿಶೇಷವಾಗಿ ಎಲ್ಲಾ ರಾಷ್ಟ್ರೀಯ ಸರ್ಕಾರಗಳು ತಮ್ಮ ನಾಗರಿಕರಿಗೆ ಉಚಿತವಾಗಿ ವಿತರಿಸುತ್ತಿವೆ. ಈ ಬಗ್ಗೆ ಒಮ್ಮೆ ಅವರನ್ನು ಕೇಳಲಾಯಿತು, "ನೀವು ನಿಮ್ಮ ಆವಿಷ್ಕಾರಕ್ಕೆ ಏಕೆ ಪೇಟೆಂಟ್ ಮಾಡಲಿಲ್ಲ?" ಎಂದು ಕೇಳಿದ್ದಕ್ಕೆ, ಅವರು "ಸೂರ್ಯನಿಗೆ ಯಾರಾದರೂ ಪೇಟೆಂಟ್ ತೆಗೆದುಕೊಳ್ಳುತ್ತಾರಾ" ಅಲ್ಲದೇ "ಸೂರ್ಯ ಎಲ್ಲರಿಗೂ ಸ್ವಂತ. ಆದ್ದರಿಂದಲೇ ಈ ಪ್ರಪಂಚವು ಜೀವಂತವಾಗಿದೆ; ಹಾಗಾಗಿ ನಾನು ಕಂಡುಹಿಡಿದಿದ್ದನ್ನು ಈ ಲೋಕಕ್ಕೆ ಉಚಿತವಾಗಿ ನೀಡಿದ್ದೇನೆ,’’ ಎಂದು ಉತ್ತರಿಸಿದರು.
ಕರ್ತನಾದ ಯೇಸು ಕ್ರಿಸ್ತನು ಈ ಭೂಮಿಯ ಮೇಲೆ ವಾಸಿಸುತ್ತಿದ್ದ ದಿನಗಳಲ್ಲಿ ತನ್ನ ಶಿಷ್ಯರಿಗೆ ಅನೇಕ ಒಳ್ಳೆಯ ವಿಷಯಗಳನ್ನು ಕಲಿಸಿದರು. ಅವರು ಕಲಿಸಿದಂತೆ, ಅವರು ಕೆಲಸಗಳನ್ನು ಮಾಡುವ ಮೂಲಕ ಪ್ರದರ್ಶಿಸಿದರು. ಹಾಗೆ ಕರ್ತನಾದ ಯೇಸು ಕ್ರಿಸ್ತನು ಕಲಿಸಿದ ವಿಷಯಗಳಲ್ಲಿ ಒಂದು "ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ" - ಮತ್ತಾಯ 10:8 ಎಂಬ ಆಜ್ಞೆ.
ಹೌದು ಪ್ರಿಯರೇ! ಇಂದಿಗೂ ನಾವು ನಮ್ಮ ಜೀವನದಲ್ಲಿ ಪ್ರೀತಿ, ಸಂತೋಷ ಮತ್ತು ಶಾಂತಿಯಂತಹ ಅನೇಕ ಆಶೀರ್ವಾದಗಳನ್ನು ಪಡೆಯಲು ಸಂತೋಷಪಡುತ್ತೇವೆ. ಆದರೆ ನಾವು ಅವುಗಳಿಗೆ ಯಾವುದೇ ಹಣವನ್ನೂ ಕೊಡುವುದಿಲ್ಲ. ಇದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಸ್ವಂತ ರಕ್ತವನ್ನು ಶಿಲುಬೆಯ ಮೇಲೆ ಸುರಿಸಿದರು. ನಾವು ಅದರ ಮೌಲ್ಯವನ್ನು ಅರಿತುಕೊಳ್ಳದೇ, ಅದನ್ನು ನಿರ್ಲಕ್ಷಿಸಿ ಮರೆತುಬಿಡುತ್ತೇವೆ. ಅಷ್ಟೇ ಅಲ್ಲ, ಬೇರೆಯವರಿಗೆ ಉಚಿತವಾಗಿ ಕೊಡುವಂತೆ ದೇವರು ಆಜ್ಞಾಪಿಸಿದ್ದಾರೆ. Edward ಎಂಬ ವಿಜ್ಞಾನಿ ತಾನು ಕಲಿತದ್ದನ್ನು ತನ್ನಲ್ಲಿಯೇ ಇಟ್ಟುಕೊಳ್ಳದೆ, ಅದನ್ನು ಲೋಕಕ್ಕೆ ಉಚಿತವಾಗಿ ನೀಡಿ, ಇಂದಿಗೂ ಅನೇಕ ಜೀವಗಳನ್ನು ಉಳಿಸುತ್ತಿದ್ದಾರೆ. ಅಂತೆಯೇ, ನಾವು ಉಚಿತವಾಗಿ ಪಡೆದ ನಮ್ಮ ರಕ್ಷಣೆಯನ್ನು ಇತರರೊಂದಿಗೆ ಉಚಿತವಾಗಿ ಹಂಚಿಕೊಳ್ಳುವಾಗ, ಅನೇಕ ಆತ್ಮಗಳು ಉಳಿಸಲ್ಪಡುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ.
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:
ಇಂದು ಅರುಪ್ಪುಕ್ಕೋಟ್ಟೈ ಸೇವಾ ಕ್ಷೇತ್ರದಲ್ಲಿ ನಡೆಯಲಿರುವ “ಉಜ್ಜೀವನವನ್ನು ಬಯಸುವವರ ಶಿಬಿರ” ಕ್ಕೆ ದೇವರು ಮೊದಲೇ ತೀರ್ಮಾನಿಸಿರುವ ಜನರನ್ನು ಯಾವುದೇ ಅಡೆತಡೆಯಿಲ್ಲದೆ ಕರೆತರಬೇಕೆಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482