By Village Missionary Movement
Thursday, 08-Sep-2022ಧೈನಂದಿನ ಧ್ಯಾನ(Kannada) – 09.09.2022
ಒಳ್ಳೆಯ ಸೈನಿಕ
"ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನನುಭವಿಸು" - 2 ತಿಮೊಥೆ 2:3
ಯೂನ್ ಎಂಬ ದೇವರ ಸೇವಕರೊಬ್ಬರು ಚೀನೀ ಜನರಿಗೆ ಯೇಸುವಿನ ಬಗ್ಗೆ ಸುವಾರ್ತೆ ಸಾರಿದರು ಎಂಬ ಕಾರಣದಿಂದಾಗಿ ಅವರನ್ನು ಅಲ್ಲಿರುವ ಚೀನೀ ಸೆರೆಮನೆಯಲ್ಲಿ ಬಂಧಿಸಲಾಯಿತು. ಅಲ್ಲಿ ಅವರು ಅನೇಕ ಸಂಕಟಗಳನ್ನು ಮತ್ತು ಹೋರಾಟಗಳನ್ನು ಎದುರಿಸಿದರು. ಯೂನ್ ನ ಬಾಯಿಯಲ್ಲಿ ರಕ್ತಸ್ರಾವವಾಗುವವರೆಗೆ ಜೈಲು ಸಿಬ್ಬಂದಿ ಆಗಾಗ್ಗೆ ಹೊಡೆಯುತ್ತಿದ್ದರು. ಮೊಂಡಾದ ಗಾಯಗಳ ಪರಿಣಾಮವಾಗಿ ಅವರ ಸಂಪೂರ್ಣ ಮುಖವು ಊದಿಕೊಳ್ಳುತ್ತಿತ್ತು ಮತ್ತು ಗುರುತಿಸಲಾಗದಷ್ಟು ಬದಲಾವಣೆಯಾಗುತ್ತಿತ್ತು. ಸೆರೆಮನೆಯಲ್ಲಿನ ಭೀಕರ ಚಳಿಯಿಂದಾಗಿ ಅವರ ಕೈಗಳು ರಕ್ತದಷ್ಟು ಕೆಂಪಾಗುತ್ತಿತ್ತು. ಅವರ ಕೈಗಳಲ್ಲಿ ಸರಪಣಿಗಳನ್ನು ಬಹಳ ಗಟ್ಟಿಯಾಗಿ ಬಿಗಿದಿದ್ದದರಿಂದಾಗಿ ಆ ಸ್ಥಳದಲ್ಲಿ ಚರ್ಮ ಕಿತ್ತುಕೊಂಡು ರಕ್ತಸ್ರಾವವಾಗುತ್ತಲೇ ಇತ್ತು. ಒಂದು ದಿನ ಯೂನ್ ನೋವನ್ನು ಸಹಿಸಲಾರದೆ ದೇವರಿಗೆ ಮೊರೆಯಿಟ್ಟರು. ಆಗ ಅವರಿಗೆ ಒಂದು ವಾಕ್ಯ ನೆನಪಾಯಿತು. “ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ" (ಕೀರ್ತನೆ. 46:11) ಈ ವಚನವು ಅವರನ್ನು ಬಲಪಡಿಸುತ್ತಿದ್ದಂತೆ, ಯೂನ್ ತನ್ನ ದೇಹದಲ್ಲಿ ಹೊಸಬಲವನ್ನು ಹೊಂದಿಕೊಂಡರು. ಕ್ರಿಸ್ತನ ನಿಮಿತ್ತವಾಗಿ ಬಂದ ಎಲ್ಲಾ ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕೊಟ್ಟರು. ಅವರ ಮೂಲಕ ಅನೇಕರು ರಕ್ಷಿಸಲ್ಪಟ್ಟರು.
ಇದರಂತೆಯೇ ಸತ್ಯವೇದದಲ್ಲಿಯೂ ಸಹ ಸ್ತೆಫನೆಂಬ ಯುವಕನನ್ನು ಕಾಣುತ್ತೇವೆ. ಅವನು ಸಭೆಯಲ್ಲಿ ಪಂಕ್ತಿಯನ್ನು ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರೂ, ಅವನು ಯೇಸುಕ್ರಿಸ್ತನಿಗಾಗಿ ಸೇವೆಯನ್ನೂ ಮಾಡುತ್ತಿದ್ದನು. ಅವನಮೂಲಕ ದೇವರು ಮಹಾ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದರು. ಕೆಲವು ಪಟ್ಟಣಗಳಿಗೆ ಸೇರಿದವರು ಸ್ತೆಫನನಿಗೆ ವಿರೋಧವಾಗಿ ಸಾಕ್ಷಿ ಹೇಳುವಂತೆ ಮನುಷ್ಯರನ್ನು ಸಿದ್ಧಮಾಡಿದರು. ಅವರು ಸ್ತೆಫನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದು ಕೊಂದರು. ಆದರೆ ಸ್ತೆಫನು ಮಾತ್ರ ತನ್ನನ್ನು ಕೊಲ್ಲಲು ಕಲ್ಲಸೆದವರಿಗಾಗಿ ಮೊಣಕಾಲೂರಿ "ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು" ಪ್ರಾರ್ಥಿಸಿದನು. ಸ್ತೆಫನನ್ನು ಕೊಲ್ಲಲು ಸೌಲನೆಂಬ ಯುವಕನು ಸಹ ಒಪ್ಪಿಕೊಂಡು ಅವರಿಗೆ ಸಹಾಯ ಮಾಡಿದನು. ದೇವರು ಈ ಸೌಲನನ್ನು ಪೌಲನನ್ನಾಗಿ ಬದಲಾಯಿಸಿ, ಆತನು ಏಷ್ಯಾ ಖಂಡದಾದ್ಯಂತ ಸೇವೆ ಮಾಡಲು ಉಪಯೋಗಿಸಿದರು.
ನನ್ನ ಪ್ರಿಯರೇ! ದೇವರಿಗಾಗಿ ನಾವು ಅನುಭವಿಸುವ ಶ್ರಮ ಮತ್ತು ಸಂಕಟ ಎಂದಿಗೂ ವ್ಯರ್ಥವಾಗುವುದಿಲ್ಲ. ಆ ದಿನ ಯೂನ್ ತನ್ನ ರಕ್ತವನ್ನು ಯೇಸುವಿಗಾಗಿ ಸುರಿಸಿದನು. ಕ್ರಿಸ್ತನ ನಂತರ ಮೊದಲ ರಕ್ತ ಸಾಕ್ಷಿಯಾಗಿ ಸ್ತೆಫನನು ಮರಣಹೊಂದಿದರು. ಇಂದು ನಾವು ದೇವರಿಗಾಗಿ ಏನು ಮಾಡುತ್ತಿದ್ದೇವೆ? ಏನು ಮಾಡಲಿದ್ದೇವೆ? ಎಂದು ಯೋಚಿಸಿ ಮತ್ತು ಕಾರ್ಯನಿರ್ವಹಿಸಿ!
- Mrs. ರೂಬಿ ಅರುಣ್
ಪ್ರಾರ್ಥನಾ ಅಂಶ:
ರಾಕ್ಲ್ಯಾಂಡ್ ಮಿಷನರಿ ತರಬೇತಿ ಕೇಂದ್ರದ ಮೂಲಕ ಅನೇಕ ಸಾವಿರಾರು ಮಿಷನರಿಗಳು ರೂಪುಗೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482