Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.09.2022
Share:

By Village Missionary Movement

Sunday, 11-Sep-2022

ಧೈನಂದಿನ ಧ್ಯಾನ(Kannada) – 11.09.2022

 

ಅತ್ಯುತ್ತಮ ಲಕ್ಷಣ

 

"...ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ." - ಕೀರ್ತನೆ 32:5

 

ಹಲೋ ಮುದ್ದು ಪುಟಾಣಿಗಳೇ! ನೀವು ಹೇಗಿದ್ದೀರ? ವಾರಕ್ಕೊಂದು ಕಥೆ ಕೇಳೋದ್ರಿಂದ ಬೋರ್ ಆಗ್ತಿಲ್ಲಾ ಅಲ್ವಾ? ನೀವು ಸಂತೋಷವಾಗಿ ಕಥೆ ಕೇಳೋದು ಮಾತ್ರವಲ್ಲ, ಅದರಂತೆ ಬದುಕಲೂ ಬೇಕು. Ok ನಾ?

 "ಏಯ್, School ಗೆ ಟೈಂ ಆಗೋಯ್ತು, ಏನೇ ಮಾಡ್ತಿದೀಯ?" ಬೇಗ ಬಾ... Assembly prayer ಶುರು ಆಗ್ಬಿಡುತ್ತೆ. PT Teacher ಬರೀ ಪ್ರಶ್ನೆ ಕೇಳೇ ಸಾಯಿಸಿ ಬಿಡ್ತಾರೆ” ಎಂದಳು ಮಾಲಾ. "ಇಗೋ ಬಂದ್ಬಿಟ್ಟೆ" ಎಂದು ಹೇಳುತ್ತಾ ಸೈಕಲ್ ತೆಗೆದುಕೊಂಡು ಹೊರಟಳು ಕಲಾ. ಇಬ್ಬರೂ ಸೈಕಲ್ ತುಳಿಯಲು ಪ್ರಾರಂಭಿಸುತ್ತಿದ್ದಂತೆ ಗೀತಾ ಉಸಿರು ಬಿಡುತ್ತಾ ಓಡಿ ಬಂದಳು. “ಹೇ ಮಾಲಾ, ನನ್ನ ಸೈಕಲ್ ರಿಪೇರಿಯಾಗಿದೆ. ಇವತ್ತು ಮಾತ್ರ ನಾನು ನಿನ್ನ ಜೊತೆ ಸೈಕಲ್ ನಲ್ಲಿ ಬರುತ್ತೇನೆ ಎಂದಳು. "ನೀನು ಗುಂಡು ಕುಂಬಳಕಾಯಿ, ನಾನು ನಿನ್ನನ್ನು ಕೂರಿಸಿಕೊಂಡು ಓಡಿಸೋಕೆಲ್ಲಾ ಆಗಲ್ಲಪ್ಪಾ" ಎಂದು ನಗುತ್ತಾ ಹೇಳಿದಳು ಕಲಾ.

 

"ಇಲ್ಲ, ಇಲ್ಲ, ನಾನು ಓಡಿಸುತ್ತೇನೆ, ನೀನು ಹಿಂದೆ ಕುಳಿತುಕೋ" ಎಂದು ಗೀತಾ ಹೇಳಿದಾಗ, ಸೈಕಲ್ಲಿನಲ್ಲಿ ಮೂರು ಜನರು ಜೆಟ್ ಸ್ಪೀಡ್ನಲ್ಲಿ School ಗೆ ಹೋದರು, ಪುಟಾಣಿಗಳೇ, ನೀವು ಕೂಡ ಅವಸರದಲ್ಲಿ ಶಾಲೆಗೆ ಹೊರಡುತ್ತೀರಾ? ಹಾಗಾಗಬಾರದು. ಬೇಗ ಎದ್ದು ನಿಶ್ಚಿಂತೆಯಿಂದ ಹೊರಟರೆ ಟೆನ್ಷನ್ ಇಲ್ಲದೇ ನೆಮ್ಮದಿಯಾಗಿ ಸಂತೋಷವಾಗಿ ಹೋಗಬಹುದು, ಹೌದಲ್ವಾ! ಮಾಲಾ, ಕಲಾ ಮತ್ತು ಗೀತಾ ಮೂವರೂ ಸ್ನೇಹಿತರು. ಗೀತಾ ಒಳ್ಳೆಯ ಮಗುವಾಗಿ ಇರಬೇಕು ಎಂದು ಭಾವಿಸುತ್ತಾಳೆ? ಅಂದು ಟೀಚರ್ ಸ್ವಲ್ಪ ಆಫೀಸ್ ಗೆ ಹೋಗುವ ಕೆಲಸವಿದ್ದದರಿಂದ ಕ್ಲಾಸ್ ಲೀಡರ್ ಅನ್ನು ಕರೆದು "ಕ್ಲಾಸಿನಲ್ಲಿ ಯಾರಾದ್ರೂ ಮಾತಾಡಿದರೆ ಅವರ ಹೆಸರು ಬರೆದಿಡು" ಎಂದು ಹೇಳಿ ಹೊರಟು ಹೋದರು. ಈ ಮೂರೂ ಜನ ಮಾತಾಡುತ್ತಲೇ ಇದ್ದುದರಿಂದ ಲೀಡರ್ ಹೆಸರು ಬರೆದು ಮಿಸ್ ಬಂದಾಗ ಕೊಟ್ಟಳು. ಕಲಾ ಮತ್ತು ಮಾಲಾ "ಮಿಸ್, ನಾವು ಏನೂ ಮಾತನಾಡಲಿಲ್ಲ, ಅವಳು ನಮ್ಮ ಹೆಸರನ್ನು ಸುಮ್ಮನೇ ಬರೆದಿದ್ದಾಳೆ" ಎಂದು ಸುಳ್ಳು ಹೇಳಿದಳು. ಗೀತಾ ಬಂದು, “ಇಲ್ಲ, ನಾವು ಮಾತನಾಡುತ್ತಾ ನಗುತ್ತಿದ್ದೆವು. "ದಯವಿಟ್ಟು ನಮ್ಮನ್ನು ಕ್ಷಮಿಸಿ" ಎಂದು ಹೇಳಿದಾಗ, "ಎಲ್ಲರೂ ಇವಳಿಗೆ ಚಪ್ಪಾಳೆ ಹೊಡೆಯಿರಿ ಎಂದು" ಮಿಸ್ ಹೇಳಿದರು. ತಪ್ಪನ್ನು ಒಪ್ಪಿಕೊಳ್ಳುವುದು ಉತ್ತಮ ಲಕ್ಷಣವಾಗಿದೆ, ತಪ್ಪನ್ನು ಮರೆಮಾಡುವುದು ಕಲಹ ಮತ್ತು ಗೊಂದಲಕ್ಕೆ ಕಾರಣವಾಗುತ್ತದೆ. ಇದು ನಿಮ್ಮ ಕುಟುಂಬ ಮತ್ತು ನಿಮ್ಮ ಸುತ್ತಮುತ್ತಲಿನವರ ಮೇಲೆ ಪರಿಣಾಮ ಬೀರುತ್ತದೆ. ನಿನ್ನ ತಪ್ಪನ್ನು ಒಪ್ಪಿಕೊಂಡಾಗ ಸುಖ ಶಾಂತಿ ದೊರೆಯುತ್ತದೆ “ಏನು ಮಕ್ಕಳೇ! ನೀವು ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶಕರಾಗಬೇಕು” ಎಂದು ಅಂದು ಟೀಚರ್ ಅದ್ಭುತವಾದ ಪ್ರಾಯೋಗಿಕ ಪಾಠವನ್ನು ಹೇಳಿಕೊಟ್ಟರು. ಏನು ಪುಟಾಣಿಗಳೇ, ಟೀಚರ್ ಹೇಳಿದ್ದನ್ನ ನೀವೂ ಕೇಳುದ್ರಾ?... ನೀವು Follow ಮಾಡೋಕೆ ರೆಡೀನಾ?

- A. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz jojobet jojobet giriş jojobet güncel giriş meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş Meritking Perabet Holiganbet jojobet jojobet giriş jojobet güncel giriş bahsegel bahsegel bahsegel bahsegel bahsegel perabet perabet giriş perabet perabet giriş holiganbet holiganbet giriş holiganbet holiganbet giriş belugabahis matbet romabet https://tr.jojobet-13eylul.art/