By Village Missionary Movement
Monday, 12-Sep-2022ಧೈನಂದಿನ ಧ್ಯಾನ(Kannada) – 12.09.2022 (Youth Special)
ದೆಬೋರಳೆ ಎದ್ದೇಳು
“ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ." - ಯೆಶಾಯ 60:1
ಯಾರು ಈ ದೆಬೋರ? ಇಸ್ರಾಯೇಲ್‌ಗೆ ತೀರ್ಪು ನೀಡಿದ ಮೊದಲ ಮಹಿಳಾ ನ್ಯಾಯಸ್ಥಾಪಕರು ಇವರು. ಸಾಮಾನ್ಯವಾಗಿ ಮಹಿಳೆಯರು ಭಾವನಾತ್ಮಕವಾಗಿ ತುಂಬಾ ಮೃದು ಎಂದು ಹೇಳುತ್ತಾರೆ. ಸತ್ಯವೇದದಲ್ಲಿಯೂ ಸ್ತ್ರೀಯರನ್ನು ದುರ್ಬಲ ಪಾತ್ರವೆಂದು ಹೇಳಲಾಗಿದೆ. ಆದರೆ ಅದೇ ಸಮಯದಲ್ಲಿ ನಾವು ದೆಬೋರಳಂತಹ ಧೈರ್ಯಶಾಲಿ ಮಹಿಳೆಯರನ್ನು ನೋಡಬಹುದು. ನ್ಯಾಯ. 4: 6, 7, 8 ನ್ನು ನಾವು ಓದುವಾಗ, ದೇವರು ಯುದ್ಧಕ್ಕೆ ಹೋಗಬೇಕೆಂದು ಬಾರಾಕನಿಗೆ ಹೇಳಿದ್ದನ್ನು ದೆಬೋರಳು ನೆನಪಿಸುತ್ತಾಳೆ. ಆಗ ಬಾರಾಕನು “ನೀನು ನನ್ನ ಜೊತೆ ಬಂದರೆ ನಾನು ಹೋಗುತ್ತೇನೆ, ಇಲ್ಲದಿದ್ದರೆ ಹೋಗುವುದಿಲ್ಲ” ಎನ್ನುತ್ತಾನೆ. ಇದನ್ನು ಓದಿದರೆ ದೆಬೋರಳ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನಾವು ಅರ್ಥಮಾಡಿಕೊಳ್ಳಬಹುದು.
ಇಂದು ಇದನ್ನು ಓದುವ ಪ್ರತಿಯೊಬ್ಬ ಮಹಿಳೆ ಮತ್ತು ಯೌವನಸ್ಥರನ್ನು ನಾನು ಪ್ರೋತ್ಸಾಹಿಸಲು ಬಯಸುತ್ತೇನೆ.
ಯುದ್ಧವನ್ನು ಗೆಲ್ಲಲು ನಮ್ಮನ್ನು ಕರೆಯಲಾಗಿದೆ! ಸೋಲಿನ ಸುಳಿಯಲ್ಲಿ ಮುಳುಗಲು ನಮ್ಮನ್ನು ಕರೆದಿಲ್ಲ. ದೇವರು ನಮಗೆ ನೀಡಿದ ಅಲ್ಪ ಶಕ್ತಿಯಿಂದ ಎದ್ದು ಪ್ರಕಾಶಿಸಲು ನಮ್ಮನ್ನು ಕರೆಯಲಾಗಿದೆ. ನಿಮ್ಮ ಜೀವನದಲ್ಲಿ ಕೆಲವು ಸನ್ನಿವೇಶಗಳನ್ನು ಎದುರಿಸುವ ಶಕ್ತಿ ನಿಮಗಿಲ್ಲ ಎಂದು ಭಾವಿಸಿ ನೀವು ನಿರುತ್ಸಾಹಕ್ಕೆ ಒಳಗಾಗಿರಬಹುದು. ದೇವರು ಬದಲಾಯಿಸಲಾಗದಂತಹ ಪರಿಸ್ಥಿತಿ ಒಂದೂ ಕೂಡ ಇಲ್ಲ. ಇಲ್ಲದ್ದನ್ನು ಇರುವಂತೆ ಕರೆಯುವ ದೇವರು. ನೀವು ಮಾಡಬೇಕಾಗಿರುವುದು ಒಂದೇ ಒಂದು ಕೆಲಸ. ನಿಮ್ಮ ಪರಿಸ್ಥಿತಿ ಏನೇ ಇರಲಿ, ಅದರಲ್ಲಿ ದೇವರು ಕಾರ್ಯ ಮಾಡಲು ಅವಕಾಶ ಮಾಡಿಕೊಡಿ. ನೀನು ದೆಬೋರಳಂತೆ ಎದ್ದು ಪ್ರಕಾಶಿಸಬೇಕೆಂದು ಕರ್ತನು ಬಯಸುತ್ತಿದ್ದಾರೆ. ದೆಬೋರಳಿಂದ ನಾವು ಅನೇಕ ವಿಷಯಗಳನ್ನು ಕಲಿಯಬಹುದು. ಅವಳು ಕರ್ತನನ್ನೇ ತನ್ನ ಬಲವಾಗಿ ಇಟ್ಟುಕೊಂಡಿದ್ದಳು. ಮಹಿಳೆಯಾಗಿ ದೆಬೋರಳಿಗೆ ನ್ಯಾಯವೊಂದೇ ಕೆಲಸವಲ್ಲ. ಒಂದು ಮಗಳಾಗಿ, ಒಂದು ಪತ್ನಿಯಾಗಿ, ಒಂದು ತಾಯಿಯಾಗಿ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿರಬೇಕು.
ಈ ಯೌವ್ವನ ವಯಸ್ಸಿನಲ್ಲೇ ನೀವು ಯೇಸುವನ್ನು ಹಿಡಿದುಕೊಂಡರೆ, ಅದು ನಿಮ್ಮ ಸಂತಾನಕ್ಕೆ ಆಶೀರ್ವಾದವಾಗಿರುತ್ತದೆ. ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸುವ ನಿಮ್ಮ ಮೂಲಕ ದೇವರು ಈ ದೇಶವನ್ನು ಅಲುಗಾಡಿಸಲು ಬಯಸುತ್ತಿದ್ದಾರೆ. ಮರೆಯಬೇಡಿರಿ! ಆದ್ದರಿಂದ ದೆಬೋರಳಂತೆ ಎದ್ದು ಪ್ರಕಾಶಿಸಲು ದೇವರಿಗೆ ನಿಮ್ಮನ್ನು ಒಪ್ಪಿಸಿಕೊಡಿ. ಅವರು ನಿಮ್ಮನ್ನು ಅದ್ಭುತವಾಗಿ ಮುನ್ನಡೆಸುತ್ತಾರೆ! ಹಲ್ಲೇಲೂಯ!
- Mrs. ದಿವ್ಯಾ ಬರ್ನಾರ್ಡ್
ಪ್ರಾರ್ಥನಾ ಅಂಶ:
ನಮ್ಮ ಸೇವೆಯ ಮೂಲಕ ಹೊರಬಿಡುವ ಪ್ರೆಯರ್ ಗ್ರೂಪ್ ಲೀಡರ್ಸ್ ಎಂಬ ಪತ್ರಿಕೆ ಅನೇಕರಿಗೆ ಪ್ರಯೋಜನವನ್ನು ನೀಡಲಿ ಎಂದು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482