By Village Missionary Movement
Friday, 23-Sep-2022ಧೈನಂದಿನ ಧ್ಯಾನ(Kannada) – 23.09.2022
ಅಶುದ್ಧ
"...ದೇವರು ಪಕ್ಷಪಾತಿಯಲ್ಲ..." - ಅಪೊ. 10:34
"ನಾವು ಮತ್ತೊಬ್ಬರನ್ನು ಅಂಗೀಕರಿಸುತ್ತೇವೆ. ನಾವು ಇತರ ಜನರೊಂದಿಗೆ ಬೆರೆಯಲು ಬಯಸುತ್ತೇವೆ ಆದರೆ ನಾವು ಅವರೊಂದಿಗೆ ಮಿಶ್ರತರಾಗಿರಲು ಬಯಸುವುದಿಲ್ಲ ”ಎಂದು ಹಂಗೇರಿ ದೇಶದ ಪ್ರಧಾನಿ ವಿಕ್ಟರ್ ಆರ್ಬನ್ ಹೇಳಿದರು. ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಅವರ ಸಂದರ್ಶನದ ಪ್ರಕಟಣೆಯು ಹಂಗೇರಿಯಾದ್ಯಂತ ದೊಡ್ಡ ಸಂಚಲನವನ್ನು ಉಂಟುಮಾಡಿತು. ಅವರ ಸಂಪುಟದ ಸಚಿವರೊಬ್ಬರು ರಾಜೀನಾಮೆ ನೀಡಿ, "ಒಂದು ದೇಶದ ಪ್ರಧಾನಿಯೇ ತಮ್ಮ ದೇಶದಲ್ಲಿ ವಾಸಿಸುವ ಜನರನ್ನು ಜನಾಂಗೀಯವಾಗಿ ವಿಭಜಿಸುವುದು ಎಷ್ಟು ದೊಡ್ಡ ಬೂಟಾಟಿಕೆ" ಎಂದು ತಮ್ಮ ಖಂಡನೆಯನ್ನು ದಾಖಲಿಸಿದ್ದಾರೆ.
ಒಬ್ಬನು ಜನಾಂಗೀಯ ಮತ್ತು ವರ್ಣಭೇದ ನೀತಿಯನ್ನು ಹೊಂದಿದ್ದರೆ, "ಅದು ನರಕಕ್ಕೆ ಕರೆದೊಯ್ಯುವ ಮಾರಣಾಂತಿಕ ಪಾಪವಾಗಿದೆ" ಎಂದು ಪರಿಶುದ್ಧ ಗ್ರಂಥವು ನಮಗೆ ಎಚ್ಚರಿಸುತ್ತಿದೆ. ಐಗುಪ್ತರಿಗೆ ಕುರುಬರು ಅಸಹ್ಯವಾಗಿದ್ದರು, ಯೆಹೂದ್ಯರಿಗೆ ಸಮಾರ್ಯದವರು ಅಶುದ್ಧರಾಗಿದ್ದರು. ಅಂತೆಯೇ, ಬೈಬಲ್‌ನಲ್ಲಿ ಒಂದೊಂದು ಜನಾಂಗದವರಿಗೂ ಇತರ ಜನಾಂಗದವರನ್ನು ನೋಡುವಾಗ, "ತಮ್ಮನ್ನು ಅವರಿಗಿಂತ ಹೆಚ್ಚಿನವರು" ಎಂದು ಭಾವಿಸುವ ಅನೇಕರ ಮನಸ್ಥಿತಿಯ ಬಗ್ಗೆ ನಾವು ಓದುತ್ತೇವೆ. ದೇವರು ಈ ಮನೋಭಾವವನ್ನು ಎಂದಿಗೂ ಇಷ್ಟಪಡುವುದಿಲ್ಲ. ನಮ್ಮ ದೇವರು ಧರ್ಮ, ಪಂಥ ಮತ್ತು ಜನಾಂಗೀಯತೆ ಎಂದು ಬೇಧಭಾವದಿಂದ ನಡೆದುಕೊಳ್ಳುವುದನ್ನು ತಿರಸ್ಕರಿಸುತ್ತಾರೆ.
ಗಲಾತ್ಯದವರಿಗೆ ಬರೆದ ಪತ್ರಿಕೆಯಲ್ಲಿ, ಪೇತ್ರನು ಸುನ್ನತಿಯಾದವದರಿಗೆ ಭಯಪಟ್ಟು, ಅನ್ಯ ಜನರ ಬಳಿ ಮಾಯಾಜಾಲವಾಗಿ ಇದ್ದದ್ದನ್ನು ಪೌಲನು ಖಂಡಿಸಿದ್ದನ್ನು ಓದುತ್ತೇವೆ. ಇಂದಿಗೂ ರಕ್ಷಣೆ ಹೊಂದಿರುವ ಅನೇಕರ ಮನಸ್ಸಿನಲ್ಲಿ ಜಾತಿ ಪಕ್ಷಪಾತವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ತಾನು ಕಂಡ ಸಹೋದರನನ್ನು ಪ್ರೀತಿಸದವನು ತಾನು ಕಾಣದ ದೇವರನ್ನು ಹೇಗೆ ಪ್ರೀತಿಸುತ್ತಾನೆ? ಇದನ್ನು ಯೋಹಾನನು ತನ್ನ ಪತ್ರಿಕೆಗಳಲ್ಲಿ ಸುಂದರವಾಗಿ ಬರೆದಿದ್ದಾರೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಮತ್ತು ಸ್ನೇಹಿತರನ್ನು ಮಾಡಿಕೊಳ್ಳುವಲ್ಲಿ ನಿಮಗೆ ಸಮಾನತ್ವದ ಭಾವವಿಲ್ಲದಿದ್ದರೆ, ನೀವು ದೇವರ ಮುಂದೆ ಅಸಹ್ಯವಾದವರೇ. ಪಕ್ಷಪಾತವಿಲ್ಲದೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ದೇವರೇ ನಮ್ಮ ರಕ್ಷಕನು ಆತನ ಮಕ್ಕಳಾಗಿರುವ ನಮ್ಮ ಬಳಿ ಬೇಧಭಾವಗಳಿದ್ದರೆ ಅದು ಎಷ್ಟು ದೊಡ್ಡ ಬೂಟಾಟಿಕೆ. ನಮ್ಮ ದೇವರ ಆಲೋಚನೆಗಳೇ ನಮ್ಮಲ್ಲೂ ಇರಬೇಕು.
- P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:
7000 ಸೇವಕರುಗಳ ಮೂಲಕ 1 ಲಕ್ಷ ಹಳ್ಳಿಗಳನ್ನು ತಲುಪಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಲ್ಲಿ ಕರ್ತನ ಹಸ್ತವು ಜೊತೆ ಇದ್ದು ನಡೆಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482