Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.09.2022
Share:

By Village Missionary Movement

Wednesday, 28-Sep-2022

ಧೈನಂದಿನ ಧ್ಯಾನ(Kannada) – 29.09.2022

 

ಚಿಂತೆ ಬೇಡ

 

"ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ." - ಫಿಲಿಪ್ಪಿ 4: 6

 

ನಾನು ಮುಂಜಾನೆಯೇ ನನ್ನ ತೋಟದಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ "ಕೀಚ್‌ಕೀಚ್" ಎಂಬ ಶಬ್ದ ಕೇಳಿಸಿತು. ಹತ್ತಿರ ಹೋದಾಗ ಗೊತ್ತಾಯಿತು ಅದು ಮರದಲ್ಲಿ ಗೂಡು ಕಟ್ಟಿಕೊಂಡಿರುವ ಗುಬ್ಬಚ್ಚಿಗಳ ಸದ್ದು ಎಂದು. ಸ್ವಲ್ಪ ಹೊತ್ತು ಅದರತ್ತ ಮುಖಮಾಡಿ ಕುಳಿತಾಗ ಒಂದು ಅದ್ಭುತವಾದ ದೃಶ್ಯ ಕಂಡುಬಂತು. ತಾಯಿ ಹಕ್ಕಿ ಕೊಂಬೆಯ ಮೇಲೆ ಬಂದು ಕುಳಿತ ಸದ್ದು ಕೇಳಿ ಹತ್ತಿರ ಬಂದು ನಿಧಾನವಾಗಿ ಮರಿಗಳು ಬಾಯಿ ತೆರೆದವು. ತಾಯಿ ಹಕ್ಕಿ ಆಹಾರವನ್ನು ಇಟ್ಟ ತಕ್ಷಣ ಹಾಗೇ ತಿಂದವು.

 

ಇದರಲ್ಲಿ ನಮಗೆ ಒಂದು ಪಾಠವಿದೆ. ತಾಯಿ ಹಕ್ಕಿ ತಮ್ಮ ಪಕ್ಕದಲ್ಲಿ ಕುಳಿತಾಗ, ಮರಿಗಳು ಕೊಡುವುದನ್ನು ತೆಗೆದುಕೊಳ್ಳಲು ಬಾಯಿ ತೆರೆಯುತ್ತವೆ. ತಾಯಿ ಹಕ್ಕಿ ಕೊಟ್ಟದ್ದು ನಮಗೆ ಬೇಕಾದ ಆಹಾರ ಎಂದು ನಂಬಿದ್ದವು. ಆದರೆ ದೇವರು ನಮ್ಮೊಂದಿಗೆ ಇದ್ದಾಗ ಮತ್ತು ನಮ್ಮ ಅಗತ್ಯಗಳನ್ನು ಪೂರೈಸಿದಾಗ, ಮನುಷ್ಯರಾದ ನಾವು ಆಗಾಗ್ಗೆ ನಾಳೆಯ ಬಗ್ಗೆ ಯೋಚಿಸುತ್ತೇವೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸುತ್ತೇವೆ. ನಾವು ನಾಳೆಯ ಬಗ್ಗೆ ಯೋಚಿಸುತ್ತಾ ಈ ದಿನವನ್ನು ಮರೆತುಬಿಡುತ್ತೇವೆ. ಕರ್ತನಾದ ಯೇಸು ಕ್ರಿಸ್ತನು ಹೀಗೆ ಚಿಂತಿತರಾದವರನ್ನು ನೋಡಿ, "ಪಕ್ಷಿಗಳನ್ನು ಗಮನಿಸಿ ನೋಡಿರಿ" ಎಂದು ಹೇಳಿದರು. ಅವು ಇರುವೆಗಳಂತೆ ಶೇಖರಿಸದಿದ್ದರೂ, ದೇವರು ದಿನವೂ ಅವುಗಳನ್ನು ಪೋಷಿಸುತ್ತಾರೆ. ಆದರೆ ನಾವು "ಇದಕ್ಕಿಂತ ಅದು ಸಿಕ್ಕಿದರೆ ಚೆನ್ನಾಗಿರುತ್ತದೆ. ಈಗ ನಮಗೆ ಇದು ಅಗತ್ಯವಿಲ್ಲ" ಎಂದು ದೇವರು ಕೊಡುವದನ್ನು ನಾವು ನಿರ್ಲಕ್ಷಿಸುತ್ತೇವೆ. ಇದರಿಂದ ದೇವರಿಗೂ ದುಃಖವಾಗುತ್ತದೆ. ಅವರು ನಮ್ಮ ಪರಮ ತಂದೆ. ಆತನು ನಮ್ಮ ಎಲ್ಲಾ ಅಗತ್ಯಗಳು ಮತ್ತು ನಮ್ಮ ಹೃದಯದ ಆಸೆಗಳನ್ನು ತಿಳಿದಿದ್ದಾರೆ. ಅವರು ಎಲ್ಲವನ್ನೂ ಸರಿಯಾದ ಸಮಯದಲ್ಲಿ ನೀಡಲು ಸಮರ್ಥನಾಗಿದ್ದಾರೆ. ಕೊಟ್ಟದ್ದನ್ನು ಸಂತೋಷದಿಂದ ಸ್ವೀಕರಿಸಿ ದೇವರೊಂದಿಗೆ ಬಾಳಿದಾಗ ನಾವು ಸಂತೋಷವಾಗಿರಬಹುದು. ನಾವು ಚಿಂತೆ ಮಾಡಿದಾಗ ನಾವು ಸಂತೋಷ ಮತ್ತು ಶಾಂತಿಯನ್ನು ಕಳೆದುಕೊಳ್ಳುತ್ತೇವೆ.

 

ಪ್ರಿಯರೇ! ನಮ್ಮ ದೇವರು ನಮಗೆ ನೀಡಿದ ಆಶೀರ್ವಾದಗಳನ್ನು ನಾವು ಅನೇಕ ಬಾರಿ ಮರೆತುಬಿಡುತ್ತೇವೆ, ಅವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಬಿಟ್ಟು, ಗೊಣಗುಟ್ಟಿ ಆತನು ನಮಗಾಗಿ ಇಟ್ಟಿರುವ ಆಶೀರ್ವಾದಗಳನ್ನು ಕಳೆದುಕೊಳ್ಳುತ್ತೇವೆ. ನಮ್ಮ ದೇವರು ಪರಿಸ್ಥಿತಿಗಳಿಗಿಂತ ಉನ್ನತನು. ಆತನೇ ನಮ್ಮನ್ನು ಸೃಷ್ಟಿಸಿದ ದೇವರು. ಆತನು ನಮ್ಮ ಆಲೋಚನೆಗಳು ಮತ್ತು ಹಂಬಲಗಳನ್ನು ತಿಳಿದಿದ್ದಾರೆ. ಆದುದರಿಂದ ಆತನು ನಮಗೆ ಕೊಡುವ ಕಾರ್ಯಗಳನ್ನು ಸಂದೇಹಪಡದೇ ಸ್ವೀಕರಿಸಿ "ದೇವರೇ, ನಿಮಗೆ ಸ್ತೋತ್ರ" ಎಂದು ಹೇಳುವಾಗ, ಆತನು ಸಂತೋಷದಿಂದ ನಮಗಾಗಿ ಕಾರ್ಯಗಳನ್ನು ನಡೆಸಿಕೊಡುತ್ತಾರೆ.

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ದೇಶಕ್ಕಾಗಿ ಒಡಕಿನಲ್ಲಿ ನಿಂತುಕೊಳ್ಳುವ‌ ಹೊಸ ಪ್ರಾರ್ಥನಾ ಗುಂಪುಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet