Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.10.2022
Share:

By Village Missionary Movement

Thursday, 13-Oct-2022

ಧೈನಂದಿನ ಧ್ಯಾನ(Kannada) – 14.10.2022

 

ಜೀವವುಳ್ಳ ನಿಜವಾದ ದೇವರು

 

"ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ" - ಯೆರೆಮಿಯ 29:13

 

ಇಲ್ಲಿಯವರೆಗೆ ಅನೇಕ ಆವಿಷ್ಕಾರಗಳಿಂದ ಜಗತ್ತು ಬೆರಗಾಗಿದೆ. ಸಂಶೋಧನೆಗಳನ್ನು ಮಾಡುವ ಹೆಚ್ಚು ವಿಜ್ಞಾನಿಗಳು ದೇವರ ಮೇಲೆ ನಂಬಿಕೆ ಇಲ್ಲದವರಾಗಿರುತ್ತಾರೆ. ಅವರು ವಿಜ್ಞಾನ ಮತ್ತು ತಮ್ಮ ಸ್ವಂತ ಬುದ್ಧಿವಂತಿಕೆಯ ಮೇಲೆ ಅತಿಯಾದ ನಂಬಿಕೆ ಇಟ್ಟಿರುವುದರಿಂದ, ಅವರು ದೇವರ ಮೇಲೆ ನಂಬಿಕೆ ಇಲ್ಲದವರಾಗಿದ್ದಾರೆ. ದೇವರಿಲ್ಲ ಎಂದು ವಾದಿಸುತ್ತಾರೆ. ಅದೇ ರೀತಿ ಅಮೆರಿಕದಲ್ಲಿ ನೆಲೆಸಿದ್ದ ವೈದ್ಯ ಮತ್ತು ತಳಿಶಾಸ್ತ್ರಜ್ಞ ಡಾ.ಫ್ರಾನ್ಸಿಸ್ ಕಾಲಿನ್ಸ್ ಕೂಡ ನಂಬಿಕೆ ಇಲ್ಲದವರಾಗಿದ್ದರು. ಒಮ್ಮೆ ಚಿಕಿತ್ಸೆ ಪಡೆಯಲು ತನ್ನ ಬಳಿಗೆ ಬಂದ ವಯಸ್ಸಾದ ತಾಯಿಯೊಬ್ಬಳು ತನ್ನ ಜೀವನದಲ್ಲಿ ಯೇಸು ಮಾಡಿದ ಅದ್ಭುತವನ್ನು ವಿವರಿಸಿ ಹೇಳಿದಳು. ಅದನ್ನು ಕೇಳಿದ ಫ್ರಾನ್ಸಿಸ್ "ದೇವರು ಎಂಬವರು ನಿಜವಾಗಿಯೂ ಇಲ್ಲ ಎಂದು ಸಾಬೀತುಪಡಿಸಿ ತೋರಿಸಬೇಕು" ಎಂಬುದಕ್ಕಾಗಿ ಸಂಶೋಧನೆ ಆರಂಭಿಸಿದರು. ಆದರೆ ಸಂಶೋಧನೆಯ ಕೊನೆಯಲ್ಲಿ, ಅವರು ಯೇಸುವನ್ನು ತನ್ನ ಸ್ವಂತ ರಕ್ಷಕ ಎಂದು ಒಪ್ಪಿಕೊಂಡರು ಮತ್ತು ಅನೇಕ ಜನರಿಗೆ ತಮ್ಮ ಸಾಕ್ಷಿಯನ್ನು ತಿಳಿಸಿದರು, ವಿವಿಧ ವೈಜ್ಞಾನಿಕ ಪುರಾವೆಗಳೊಂದಿಗೆ "ಯೇಸು ಮಾತ್ರವೇ ನಿಜವಾದ ದೇವರು" ಎಂದು ವಿವರಿಸಿ ಹೇಳುತ್ತಿದ್ದಾರೆ.

 

ಪರಿಶುದ್ಧ ಗ್ರಂಥದಲ್ಲಿ (ಯೆಶಾಯ 43:10-15) ರ ವರೆಗೂ ಇರುವ ವಾಕ್ಯಗಳನ್ನು ನೋಡುವಾಗ, ನಾನೇ ನಿಜವಾದ ದೇವರು ಎಂದು ಗ್ರಹಿಸಿ ನಂಬಬೇಕು. ನೀವೇ ನನ್ನ ಸಾಕ್ಷಿಗಳು. ನನಗಿಂತ ಮುಂಚೆ ಯೂ ನನ್ನ ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ. ನಾನೇ, ನಾನೇ, ಕರ್ತನಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ, ನಾನೇ ನಿಜವಾದ ದೇವರು ಎಂದಿಗೂ ಇರುವಾತನು ನಾನೇ ಎಂದು ದೇವರು ಹೇಳುವುದನ್ನು ಓದುತ್ತೇವೆ.

 

ಪ್ರಿಯರೇ! ಇಂದು “ದೇವರು ಇಲ್ಲ ಎಂದು ಹೇಳುವವರು ಅನೇಕರು. ಕ್ರೈಸ್ತ ಕುಟುಂಬದಲ್ಲಿ ಹುಟ್ಟಿ ಸತ್ಯ ದೇವರಾದ ಯೇಸುವನ್ನು ರುಚಿ ನೋಡದ ಅನೇಕ ಜನರಿದ್ದಾರೆ, "ಯೇಸು ನನ್ನೊಂದಿಗೆ ಮಾತನಾಡಲಿ, ನಂತರ ನಾನು ಆಲಯಕ್ಕೆ ಬರುತ್ತೇನೆ, ಆಮೇಲೆ ಬೈಬಲ್ ಓದುತ್ತೇನೆ, ಪ್ರಾರ್ಥಿಸುತ್ತೇನೆ" ಎಂದು ಹೇಳುವವರೂ ಇದ್ದಾರೆ. ಪ್ರಿಯರೇ, “ಸಂಶಯವಿಲ್ಲದೆ ನಂಬಬೇಕು” ಎಂದು ಸತ್ಯವೇದವು ಹೇಳುತ್ತಿದೆ. ಇಂದಿಗೂ ಆತನು ತನ್ನನ್ನು ಸತ್ಯವಾಗಿ ಕರೆಯುವ ಎಲ್ಲರಿಗೂ ತನ್ನನ್ನು ಬಹಿರಂಗಪಡಿಸುವ ಮೂಲಕ ತನ್ನನ್ನು ತಾನು ನಿಜವಾದ ದೇವರು ಎಂದು ಸಾಬೀತುಪಡಿಸುತ್ತಿದ್ದಾರೆ.

- P. ಶಿವ

 

ಪ್ರಾರ್ಥನಾ ಅಂಶ:

ಪ್ರತಿ ತಿಂಗಳು ಒಂದು ಪೂರ್ಣ ಸಮಯದ ಮಿಷನರಿಯನ್ನು

ರೂ 5000/- ಕೊಟ್ಟು ಬೆಂಬಲಿಸುವ ಪಾಲುದಾರರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet