Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.10.2022 (Kids Special)
Share:

By Village Missionary Movement

Saturday, 15-Oct-2022

ಧೈನಂದಿನ ಧ್ಯಾನ(Kannada) – 16.10.2022 (Kids Special)

 

ನೀನೇ Special

 

"...ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು" - ಮತ್ತಾಯ 10:31

 

Hello freinds! ನಿಮಗೊಂದು ಗೊತ್ತಾ? "Jesus" ನ ದೃಷ್ಟಿಯಲ್ಲಿ ನೀವು ತುಂಬಾ "Special". ಏನು ಹೇಳ್ತಿದೀರಾ? ಕರುಪಿ, ಮೊಟ್ಟೆ ಕಣ್ಣವಳೇ, ಕುಳ್ಳಿ ಎಂದೆಲ್ಲಾ ಗೇಲಿ ಮಾಡ್ತಾರಲ್ಲಾ! ನಾನಾ Special?” ಎಂದು ನೀವು ಕೇಳಬಹುದು. ಮುದ್ದು ಪುಟಾಣಿಗಳೇ! ನಿಜವಾಗಿಯೂ ನಿಮ್ಮನ್ನು ಸೃಷ್ಟಿಸಿದ ದೇವರು "ನೀವು ವಿಶೇಷವಾದವರು" ಎಂದು ಸತ್ಯವೇದದಲ್ಲಿ ಬರೆದಿದ್ದಾರೆ. “ಛೇ... ನಾನು ತುಂಬಾ ಅಸಹ್ಯವಾಗಿದ್ದೇನೆ. ಧ್ವನಿಯೂ ಚೆನ್ನಾಗಿಲ್ಲ" ಎಂದು Feel ಮಾಡಿದ ಒಂದು ಹಕ್ಕಿಯ ಕಥೆಯನ್ನು ಕೇಳೋಣ್ವಾ?

 

ಒಂದು ಹಸಿರಾದ ಕಾಡಿನಲ್ಲಿ ಪ್ರಾಣಿ ಪಕ್ಷಿಗಳು ಒಟ್ಟಾಗಿ ಬದುಕುತ್ತಿದ್ದವು. ನೀವು ಹೇಗಿದ್ದೀರಿ? ನೀವು ಶಾಲೆಯಲ್ಲಿ ಮತ್ತು ಮನೆಯಲ್ಲಿ ಒಂದಾಗಿದ್ದೀರಾ? ನೀವು ಕೆಲವೊಮ್ಮೆ ಜಗಳವಾಡುತ್ತೀರಾ? ಸರಿ, ಸರಿ. ತಕ್ಷಣ ಸಮಾಧಾನ ಆಗಿಬಿಡಬೇಕು , ok ನಾ? ಮರದಿಂದ ಮರಕ್ಕೆ ಜಿಗಿಯುತ್ತಾ ತುಂಬಾ ಖುಷಿಯಾಗಿತ್ತು ಕೋತಿ. ಸಂತೋಷವಾಗಿ ಜಿಗಿಯುತ್ತಾ ಬಂದ ಮೊಲ, “ಏನು ಕೋತಿ ಅಣ್ಣಾ, ಹೇಗಿದ್ದೀರ? " ಎಂದು ಕೇಳಿತು. ‘‘ನಾಳೆ ಸರ್ಕಸ್ ನಲ್ಲಿ ನನ್ನ ಕೈಚಳಕ ತೋರಿಸುತ್ತೇನೆ. ಅದನ್ನು ನೆನೆಸಿಕೊಂಡರೇನೆ ನನಗೆ ಸಂತೋಷವಾಗುತ್ತಿದೆ, ”ಎಂದು ಕೋತಿ ಹೇಳಿತು. “ಸರಿ...ಸರಿ.. ನೀನು ಯಾಕೆ ಇಷ್ಟು ಮೇಕಪ್ ಹಾಕೊಂಡಿದೀಯ ಎಂದು ಕೇಳಿತು. "ಇವತ್ತು ನಮ್ಮ ಚಿಕ್ಕಪ್ಪನ ಮನೆಯಲ್ಲಿ ಫಂಕ್ಷನ್ ಇದೆ - ನಾನು ಡ್ಯಾನ್ಸ್ ಮಾಡಲು ಹೋಗುತ್ತಿದ್ದೇನೆ" ಎಂದು ಮೊಲವು ಜಿಗಿಯುತ್ತಾ ಓಡಿತು. ಇದನ್ನೆಲ್ಲ ನೋಡುತ್ತಿದ್ದ ಕಾಗೆ ತುಂಬಾ ಚಿಂತಿತವಾಗಿತ್ತು. “ನನಗೆ ಸೌಂದರ್ಯ, ಪ್ರತಿಭೆ ಏನೂ ಇಲ್ಲ. ದೇವರು ನನ್ನನ್ನು ಕಪ್ಪಾಗಿ ಸೃಷ್ಟಿಸಿದ್ದಾರೆ, ಧ್ವನಿಯಾದರೂ ಚೆನ್ನಾಗಿದೆಯಾ ಅಂದ್ರೆ... ನಾನು ಕಾ...ಕಾ... ಎಂದು ಕೂಗಲು ಪ್ರಾರಂಭಿಸಿದರೇನೆ ಜನ ನನ್ನನ್ನು ಛೀ, ಹೋಗು ಎಂದು ಓಡಿಸಿ ಹೊಡೆಯುತ್ತಾರೆ. "ಯಾಕಾದರೂ ಹುಟ್ಟಿದೆನೋ ಏನೋ?" ಅಂಥಾ ದುಃಖಿಸಿತು.

 

ಆಗ "ಕೂ...ಕೂ..." ಎಂದು ಕೂಗುತ್ತಾ ಕಾಗೆಯ ಪಕ್ಕದಲ್ಲಿ ಬಂದು ಕೂತಿತು ಕೋಗಿಲೆ, Hai blacky, how are you?" ಎಂದಿತು. "ನಿನಗೇನು ನೀನು ಕೂಗುವ ಶಬ್ಧವನ್ನು ಕೇಳಿದರೇನೆ ಎಲ್ಲರೂ ನಿನ್ನನ್ನು ತುಂಬಾ ಇಷ್ಟಪಡುತ್ತಾರೆ. ಆದರೆ...” ಎಂದ ಕಾಗೆಯ ಬಳಿ “ನೀನೇ Special, ಕಾಗೆಗಳನ್ನು ನೋಡಿರಿ, ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ ಎಂದು ಯೇಸು ಕ್ರಿಸ್ತನು ನಿಮ್ಮನ್ನೇ ಮಾನವರಿಗೆ ಉದಾಹರಣೆಯಾಗಿ ತೋರಿಸಿದ್ದಾರೆ. ಈಗ ಹೇಳು, ನೀನು feel ಮಾಡಬಹುದಾ?” ಎಂದಿತು ಕೋಗಿಲೆ. "ಓಹ್, ಹೌದಾ? ಇದು ನನಗೆ ಗೊತ್ತೇ ಇರಲಿಲ್ಲ. ಯೇಸು ಕ್ರಿಸ್ತನೇ ನಮ್ಮ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ನೆನೆಸಿಕೊಂಡಾಗ, ಮಿತಿ ಇಲ್ಲದ ಸಂತೋಷ ನನ್ನ ಹೃದಯವನ್ನು ತುಂಬುತ್ತಿದೆ! ಇನ್ನು ಮುಂದೆ ನನ್ನ ಕೊರತೆಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಯಾವಾಗಲೂ ಸಂತೋಷವಾಗಿರುತ್ತೇನೆ” ಎಂದು ಕಾಗೆ ಹೇಳಿತು. "Bye Blacky" ಎಂದು ಹಾರಿಹೋಯಿತು ಕೋಗಿಲೆ.

 

ಪ್ರೀತಿಯ ಪುಟಾಣಿಗಳೇ! ಕಥೆಯಲ್ಲಿ ಬರುವ ಕಾಗೆಯಂತೆ ನೀವೂ ಸಹ "ನನಗೆ ಸೌಂದರ್ಯವಿಲ್ಲ, ಜ್ಞಾನವಿಲ್ಲ, ಪ್ರತಿಭೆಯಿಲ್ಲ" ಎಂದು feel ಮಾಡ್ತಾ ಇದ್ದೀರ? ಅವರು ಕಾಗೆಯನ್ನೇ ಒಂದು ಉದ್ದೇಶದಿಂದ ಸೃಷ್ಟಿಸಿದ್ದಾರೆ ಅಂದ್ಮೇಲೆ, ಅದಕ್ಕಿಂತ ದೊಡ್ಡ ಉದ್ದೇಶದಿಂದ ಅವರು ನಿಮ್ಮನ್ನು ಸೃಷ್ಟಿಸಿದ್ದಾರೆ. So feel ಮಾಡ್ಬೇಡಿ. ಯೇಸಪ್ಪನ ಕೈಗಳಲ್ಲಿ ನಿಮ್ಮನ್ನು ಕೊಟ್ಟು ಬಿಟ್ಟರೆ ನಿಮ್ಮ Life super - O Super ಅಷ್ಟೇ"

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet