By Village Missionary Movement
Tuesday, 25-Oct-2022ಧೈನಂದಿನ ಧ್ಯಾನ(Kannada) – 25.10.2022
ದೋಷವಿಲ್ಲದ ಪ್ರೀತಿ
"ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ" - ಯೋಹಾನ 15:13
ಮದರ್ ತೆರೇಸಾ ಅವರ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ. ಕುಷ್ಠರೋಗಿಗಳು ಮತ್ತು ಬಡವರ ಮೇಲೆ ಅವರ ಪ್ರೀತಿ ಅಪಾರವಾಗಿತ್ತು. ಅವರು ತಮ್ಮ ಸ್ವಂತ ದೇಶದಿಂದ ಭಾರತಕ್ಕೆ ಬಂದು ನಮ್ಮ ಜನರ ಮೇಲಿನ ಪ್ರೀತಿಯಿಂದಾಗಿ 45 ವರ್ಷಗಳ ಕಾಲ ಸೇವೆ ಮಾಡಿದರು. ಅವರ ಮರಣದ ಸಮಯದಲ್ಲಿ, 123 ದೇಶಗಳಲ್ಲಿ 610 ದತ್ತಿಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳಲ್ಲಿ ಏಡ್ಸ್, ಕುಷ್ಠರೋಗ ಮತ್ತು ಕ್ಷಯರೋಗದಿಂದ ಬಳಲುತ್ತಿರುವ ಜನರಿಗಾಗಿ ಹಾರೈಕೆ ಕೇಂದ್ರ, ಅನಾಥಾಶ್ರಮಗಳು ಮತ್ತು ಶಾಲೆಗಳು ಸೇರಿವೆ. ಪ್ರೀತಿ ಎಷ್ಟು ದೊಡ್ಡದು ನೋಡಿ.
ಇಂದಿನ ಸತ್ಯವೇದ ಭಾಗದಲ್ಲಿ ಯೋನಾತಾನ ಮತ್ತು ದಾವೀದನ ಪ್ರೀತಿಯ ಬಗ್ಗೆ ನೋಡಲಿದ್ದೇವೆ. ಸೌಲನು ಇಸ್ರಾಯೇಲ್ ಜನರ ಮೊದಲ ರಾಜನಾಗಿದ್ದನು. ಅವನ ಮಗ ಯೋನಾತಾನ. ದಾವೀದನು ಒಬ್ಬ ಯುವ ಕುರುಬನಾಗಿದ್ದನು. ಸೌಲನಿಗೆ ಹಿಡಿದಿದ್ದ ದುರಾತ್ಮವನ್ನು ಓಡಿಸಲು ದಾವೀದನನ್ನು ಕಿನ್ನರಿಯನ್ನು ಬಾರಿಸುವುದಕ್ಕಾಗಿ ಅರಮನೆಗೆ ಕರೆತಂದರು. ಯೋನಾತಾನನು ಮತ್ತು ದಾವೀದನು ಉತ್ತಮ ಸ್ನೇಹಿತರಾದರು. ಕೆಲವು ಕಾರಣಗಳಿಗಾಗಿ, ಸೌಲನು ಅವನನ್ನು ಕೊಲ್ಲಲು ಜನರನ್ನು ಕಳುಹಿಸಿದಾಗಲೂ ಯೋನಾತಾನನು ದಾವೀದನಿಗೆ ಮಧ್ಯಸ್ಥಿಕೆ ವಹಿಸುವುದನ್ನು ನಾವು ನೋಡುತ್ತೇವೆ. ಮತ್ತು ದಾವೀದನು ಸೌಲನ ಭಯದಿಂದ ಅರಣ್ಯದಲ್ಲಿ ಅಡಗಿಕೊಂಡಾಗಲೂ, ದಾವೀದನನ್ನು ಸಾಂತ್ವನಗೊಳಿಸಲು ಮತ್ತು ಬಲಪಡಿಸಲು ಯೋನಾತಾನನು ಅಲ್ಲಿಗೆ ಹೋಗುವುದನ್ನು ನಾವು ನೋಡುತ್ತೇವೆ. ಒಂದು ದೇಶದ ರಾಜಕುಮಾರನಿಗೆ ಒಂದು ಸಾಮಾನ್ಯ ಯೌವನಸ್ಥನ ಮೇಲೆ ಇದ್ದ ದೋಷವಿಲ್ಲದ ಪ್ರೀತಿಯನ್ನು ನೋಡಿರಿ.
ಪ್ರಿಯರೇ! ನಾವು ಇತರರಿಗೆ ತೋರಿಸುವ ಪ್ರೀತಿ ಹೇಗಿದೆ? ಅದರ ಬಗ್ಗೆ ಯೋಚಿಸೋಣ. ಎಷ್ಟೋ ಸಲ ನಮಗೆ ಏನಾದರೂ ಲಾಭವಾಗುತ್ತದೆ ಎಂದುಕೊಂಡು ಬೇರೆಯವರಿಗೆ ಹುಸಿ ಪ್ರೀತಿಯನ್ನು ಕೊಟ್ಟಿದ್ದೇವೆ. ಆದರೆ ಮದರ್ ತೆರೇಸಾ ಯಾವುದೋ ಲಾಭಕ್ಕಾಗಿ ಖ್ಯಾತಿಗಾಗಿ ಭಾರತೀಯರ ಸೇವೆ ಮಾಡಲಿಲ್ಲ. ಅವರು ತುಂಬಾ ಸರಳ ಜೀವನ ನಡೆಸುತ್ತಿದ್ದರು ಎಂದು ನಮಗೆ ತಿಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಯೇಸು ಕ್ರಿಸ್ತನು ತನ್ನ ಜೀವವನ್ನು ಕೊಟ್ಟು ನಮಗೆ ತೋರಿಸಿದ ನಿಜವಾದ ಪ್ರೀತಿ ಎಷ್ಟು ದೊಡ್ಡದಾಗಿದೆ. ಅದಕ್ಕಾಗಿಯೇ ನಾವು ಇಂದಿಗೂ ನಿಂತಿದ್ದೇವೆ. ನಾವು ಕ್ರಿಸ್ತನ ನಿಜವಾದ ಪ್ರೀತಿಯನ್ನು ಇತರರಿಗೆ ತೋರಿಸೋಣ. ಕ್ರಿಸ್ತನ ಸ್ವಾರೂಪ್ಯವನ್ನು ಪ್ರತಿಬಿಂಬಿಸೋಣ.
- Mrs. ದಿವ್ಯಾ ಬರ್ನಾರ್ಡ್
ಪ್ರಾರ್ಥನಾ ಅಂಶ:
7000 ಸೇವಕರುಗಳ ಮೂಲಕ 1 ಲಕ್ಷ ಗ್ರಾಮಗಳು ಸಂಧಿಸಲ್ಪಡುವಂತೆ ಏಕ ದರ್ಶನವುಳ್ಳ ಸೇವಕರು ನಮ್ಮೊಂದಿಗೆ ಸೇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482