Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.10.2022 (Youth Special)
Share:

By Village Missionary Movement

Sunday, 30-Oct-2022

ಧೈನಂದಿನ ಧ್ಯಾನ(Kannada) – 31.10.2022 (Youth Special)

 

ದಾಸತ್ವ

 

 "...ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ನನಗೆ ಸ್ವಾತಂತ್ರ್ಯವುಂಟು, ಆದರೆ ನಾನು ಯಾವದಕ್ಕೂ ಒಳಗಾಗುವದಿಲ್ಲ" - 1 ಕೊರಿಂಥದವರಿಗೆ 6:12

 

ನಮ್ಮ ಜೀವನದಲ್ಲಿ ಬಹಳಷ್ಟು ಕಾರ್ಯಗಳು ಆಗಾಗ್ಗೆ ಇಣುಕಿನೋಡಿ ಹೋಗುತ್ತವೆ. ಆದರೆ ಕೆಲವು ವಿಷಯಗಳು ಅಂದರೆ ಕೆಲವು ಪಾಪಗಳು ನಮ್ಮನ್ನು ಗುಲಾಮರನ್ನಾಗಿ ಮಾಡಿಬಿಡುತ್ತದೆ. ಇಂತಹ ದಾಸತ್ವದಲ್ಲಿದ್ದೇವೆ ಎಂಬ ಗ್ರಹಿಕೆಯೇ ಇಲ್ಲದಂತೆ ಸೈತಾನನು ನಮ್ಮ ಮನಸ್ಸನ್ನು ಕುರುಡಾಗಿಸಿರಬಹುದು. ಇಂದು ಅಂತಹಾ ಒಂದು ವಿಷಯದ ಬಗ್ಗೆ ಯೋಚಿಸೋಣ.

 

ಈ ಕಾಲದಲ್ಲಿ, ಅನೇಕ ಯೌವನಸ್ಥರು ಮೊಬೈಲ್ ಫೋನ್‌ಗಳಿಗೆ ದಾಸರಾಗಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಮೊದಲು ನೋಡುವುದು ದೇವರನ್ನಾ ಅಥವಾ ನಿಮ್ಮ ಮೊಬೈಲ್ ಫೋನ್ ಅನ್ನಾ ಎಂದು ಕೇಳಿದರೆ ಶೇಕಡಾ 90 ರಷ್ಟು ಉತ್ತರ ಮೊಬೈಲ್ ಫೋನ್ ಎಂದೇ ಆಗಿರುತ್ತದೆ. ಕಾರಣವಿದೆಯೋ ಅಥವಾ ಇಲ್ಲವೋ ನಾವು ನಮ್ಮ ಫೋನ್‌ಗಳಲ್ಲಿ ಒಂದು ದಿನದ ಅನೇಕ ಗಂಟೆಗಳನ್ನು ಫೋನ್ ನಲ್ಲೇ ಕಳೆಯುತ್ತೇವೆ. ಸರಿ ಹಾಗಾದರೆ ನಾನು ಈ ಚಟದಿಂದ ಹೊರಬರುವುದು ಹೇಗೆ? ನನಗೂ ಅದರಿಂದ ಹೊರಬೇಕು ಅನ್ನಿಸುತ್ತೆ ಆದರೆ ಬಿಡಲಾಗುತ್ತಿಲ್ಲವೇ ಎಂದು ಹೇಳುತ್ತೀರಾ? ಚಿಂತಿಸಬೇಡಿ. ನಮ್ಮ ದೇವರಿಂದ ನಿಮ್ಮನ್ನು ಬಿಡಿಸಲು ಸಾಧ್ಯ,

 

"ನಾನು ಬಂಧನದಲ್ಲಿದ್ದೇನೆ" ಎಂಬ ಭಾವನೆ ನಿಮ್ಮಲ್ಲಿದ್ದರೆ ನೀವು ಖಂಡಿತವಾಗಿಯೂ ಅದನ್ನು ಜಯಿಸಬಹುದು. ಸ್ವಯಂ ನಿಯಂತ್ರಣದಿಂದ ಬದುಕಲು ದೇವರನ್ನು ಕೇಳಿರಿ. ಒಂದು ಪ್ರಮುಖ ವಿಷಯವನ್ನು ನೋಡಲು ನಿಮ್ಮ ಫೋನ್ ಅನ್ನು ನೀವು ತೆಗೆದುಕೊಂಡರೆ, ನೀವು ಅದನ್ನು ಮಾತ್ರ ನೋಡಬೇಕು. ಸಮಯ ಕಳೆಯಲು ಅನಗತ್ಯ ವಿಷಯಗಳನ್ನು ವೀಕ್ಷಿಸದಿರಲು ನಿರ್ಧರಿಸಿ. ದಾವೀದನು ಊರೀಯನ ಹೆಂಡತಿಯನ್ನು ನೋಡಲು ಮಾಳಿಗೆಯ ಮೇಲೆ ಹೋಗಲಿಲ್ಲ. ಮಾಳಿಗೆಯ ಮೇಲೆ ತಿರುಗಾಡುತ್ತಿದ್ದಾಗ ಬತ್ಷೆಬೆಳನ್ನು ಕಂಡು ಪಾಪದಲ್ಲಿ ಬಿದ್ದನು. ಅದರಲ್ಲೂ ನೇಮಿಸಲ್ಪಟ್ಟ ಕೆಲಸ ಮಾಡದೆ ಮನೆಯಲ್ಲಿ ಮಲಗಿ ನಿದ್ದೆ ಮಾಡಿದರು. ನಿದ್ದೆಯಿಂದ ಎಚ್ಚರವಾದಾಗ ಸಮಯ ಕಳೆಯಲು ಮಾಳಿಗೆಯ ಮೇಲೆ ತಿರುಗಾಡಲು ಹೋದರು. ಅಲ್ಲಿ ಕಣ್ಣು ಅವರಿಗೆ ಬಲೆಯಾಯಿತು. ಕಣ್ಮಣಿಯೇ, ನಿನ್ನ ಯೌವ್ವನದಲ್ಲಿ ನಿನಗೆ ಕೊಡಲ್ಪಟ್ಟ ಕೆಲಸ ಅಥವಾ ವಿಧ್ಯಾಭ್ಯಾಸವನ್ನು ಉತ್ತಮವಾಗಿ ಮಾಡಿ ಮುಗಿಸು. ಮೊಬೈಲ್‌ನಲ್ಲಿ ಮನರಂಜನೆಗಾಗಿ ನೀನು ಸಾಮಾನ್ಯ ವಿಷಯವನ್ನೇ ನೋಡುತ್ತೀಯ. ಆದರೆ ಅದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ನೋಡುತ್ತಾ, ನೋಡುತ್ತಾ ಕೊನೆಗೆ ನಿನ್ನನ್ನು ಪಾಪದೊಳಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ಮರೆಯಬೇಡ.

 

ಬಹುಶಃ ನೀನು ಯಾವುದಾದರೂ ಪಾಪದಲ್ಲಿ ಗುಲಾಮನಾಗಿದ್ದರೆ, ದೇವರ ಬಳಿ Open-Up ಮಾಡು. ಉಪವಾಸ ಮಾಡಿ ಪ್ರಾರ್ಥಿಸಿ ಬಿಡುಗಡೆಗಾಗಿ ಹೋರಾಡು. ನಿನ್ನ Mind ನಲ್ಲಿ ಫೋನ್ ಎತ್ತಿಕೊಳ್ಳಬೇಕು ಎಂದು ಅನಿಸುವಾಗಲೇ ಆ ಆಲೋಚನೆಯನ್ನು Reject ಮಾಡು. ಕೇವಲ ಒಂದೇ ಒಂದು ಜೀವನ ಅದನ್ನು ಗುಲಾಮಗಿರಿಗೆ ಮಾರಿ ಬಿಡದೇ, ಕ್ರಿಸ್ತನಲ್ಲಿ ವಿಜಯಶಾಲಿಯಾಗಿ ಬದುಕಲು ನಿರ್ಧರಿಸು.

LET YOUR ADDICTIONS BE IN CHRIST

- Mrs. ದಿವ್ಯಾ ಬರ್ನಾರ್ಡ್

 

ಪ್ರಾರ್ಥನಾ ಅಂಶ:

ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳು ದೇವರನ್ನು ತಿಳಿಯದ ಜನರಿಗೆ ಹೋಗಿ ತಲುಪುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet radissonbet nesinecasino betbey cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/