Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.11.2022
Share:

By Village Missionary Movement

Tuesday, 01-Nov-2022

ಧೈನಂದಿನ ಧ್ಯಾನ(Kannada) – 02.11.2022

 

ಇಷ್ಟವನ್ನು ನೆರವೇರಿಸುವಾತನು

 

"ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು." - ಮತ್ತಾಯ 10:32

 

ಸತ್ಯವೇದದಲ್ಲಿ, ಕರ್ತನಾದ ಯೇಸು ಕ್ರಿಸ್ತನು ಈ ಲೋಕದಲ್ಲಿ ಜೀವಿಸಿದಾಗ ಮಾಡಿದ ಅನೇಕ ಅದ್ಭುತಗಳ ಬಗ್ಗೆ ನಾವು ಓದುತ್ತೇವೆ. ಅವುಗಳಲ್ಲಿ ಒಂದು ಅವರು ಯೆರಿಕೋವಿಗೆ ಹೋಗುವ ದಾರಿಯಲ್ಲಿ, ತನ್ನನ್ನು ನೋಡಿ ಕರೆದ ಕುರುಡರಿಗೆ ದೃಷ್ಟಿ ನೀಡಿದ್ದು. ಈ ಘಟನೆಯನ್ನು ನಾವು ಓದುವಾಗ ಒಂದು ವಿಷಯವನ್ನು ಗಮನಿಸಲು ತಪ್ಪಿ ಹೋಗುತ್ತೇವೆ. ಅದೇನೆಂದರೆ ಯೇಸು ಅವರಿಗೆ, "ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?" ಎಂದು ಕೇಳಿದ್ದನ್ನು, ಅವರು ನಡೆದು ಬರುವಾಗಲೇ ಅವರೆಲ್ಲಾ ಕುರುಡರು ಎಂಬುದು ಆತನಿಗೆ ಗೊತ್ತು. ಆದರೂ ಅವರ ಬಳಿ ಈ ಪ್ರಶ್ನೆ ಕೇಳುತ್ತಾರೆ. ಹೌದು, ಆತನೇ ನಮ್ಮ ಇಷ್ಟಾರ್ಥಗಳನ್ನು ಪೂರೈಸುವ ದೇವರು. ಅವರು ನಮ್ಮ ಸ್ವಾರ್ಥದಂತೆ ನಮ್ಮನ್ನು ನಡೆಸಿಕೊಳ್ಳುವವರಲ್ಲ. ಬದಲಿಗೆ, ಆತನು ನಮ್ಮ ಆಲೋಚನೆಗಳು ಮತ್ತು ಹಂಬಲಗಳನ್ನು ತಿಳಿದು, ಅದಕ್ಕೆ ತಕ್ಕಂತೆ ನಮ್ಮನ್ನು ಆಶೀರ್ವದಿಸಲು ಬಯಸುವ ದೇವರಾಗಿದ್ದಾರೆ.

 

ಮತ್ತು ಅವರ ಈ ಪ್ರಶ್ನೆಗೆ, ಕುರುಡರ ಪ್ರತಿಕ್ರಿಯೆಯು ಗಮನಿಸಬೇಕಾದ ಅಂಶವಾಗಿದೆ. ಅವರು ನಂಬಿಕೆಯನ್ನು ಕಳೆದುಕೊಂಡು ಹುಡುಗಾಟವಾಗಿ, ನಿರ್ಲಕ್ಷ್ಯವಾದ ಕಾರ್ಯಗಳನ್ನು ಕೇಳದೇ, ತಮ್ಮ ಅವಶ್ಯಕತೆ ಏನೆಂಬುದನ್ನು ನಿಧಾನವಾಗಿ ಯೋಚಿಸಿ ತಿಳಿದು, ತಾವು ದೃಷ್ಟಿ ಪಡೆದುಕೊಳ್ಳಬೇಕೆಂದು ಬೇಡಿಕೊಳ್ಳುತ್ತಾರೆ. ಅವರು ದೇವರನ್ನು ಪರೀಕ್ಷಿಸದೆ ಎಚ್ಚರಿಕೆವಹಿಸಿದರು. ಆದರೆ ನಾವು ಅನೇಕ ಸಂದರ್ಭಗಳಲ್ಲಿ ನಮ್ಮ ಜೀವನದಲ್ಲಿ ದೇವರಿಗೆ ಇಷ್ಟವಾಗದ ಮತ್ತು ನಮಗೆ ಅಗತ್ಯವಿಲ್ಲದ ವಿಷಯಗಳನ್ನಿಟ್ಟು, ಪ್ರಾರ್ಥನೆಯಲ್ಲಿ ದೇವರನ್ನು ಪರೀಕ್ಷಿಸುತ್ತಿದ್ದೇವೆ. ಆ ಕುರುಡರು ಅಗತ್ಯವಾದದ್ದನ್ನು ಕೇಳಿ ಪಡೆದು ಅದ್ಬುತವನ್ನು ಕಂಡರು. ಅವರ ಜೀವನದಲ್ಲಿದ್ದ ಕತ್ತಲೆಯು ನೀಗಿ ಬೆಳಕನ್ನು ಕಂಡರು.

 

ಇಂದು ನಾವು ಕಣ್ಣು ಮುಚ್ಚಿಹೋದ ಕುರುಡರಂತೆ ಅನೇಕ ಬಾರಿ ದೇವರನ್ನು ಅರಿಯದೆ ಇದ್ದೇವೆ. ಪಾಪ, ಖಾಯಿಲೆ, ಅಹಂಕಾರ, ಹೆಮ್ಮೆಯಂತಹ ಅನೇಕ ಅಂಧಕಾರಗಳು ನಮ್ಮನ್ನು ಸುತ್ತುವರಿದಿವೆ. ಆದರೆ ಆ ಕತ್ತಲೆಯನ್ನು ನಾವು ಗ್ರಹಿಸಲಾರದಷ್ಟು ದಯನೀಯ ಸ್ಥಿತಿಯಲ್ಲಿ ನಮ್ಮ ಜೀವನ ಸಾಗುತ್ತಿದೆ. ನಾವು ಕತ್ತಲೆಯಲ್ಲಿದ್ದೇವೆ ಎಂಬುದನ್ನು ಸಹ ಗ್ರಹಿಸಲಾರದಷ್ಟು ಮಟ್ಟಿಗೆ ಸೈತಾನನು ನಮ್ಮ ಮನೋನೇತ್ರಗಳನ್ನು ಕುರುಡಾಗಿಸಿದ್ದಾನೆ. ಆದ್ದರಿಂದ ನಾವು ಮೊದಲು ನಮ್ಮ ಸುತ್ತಲಿರುವ ಕತ್ತಲೆಯನ್ನು ಅರಿತು, ಅಗತ್ಯವಿರುವುದು ಏನೆಂಬುದನ್ನು ಜ್ಞಾನವಾಗಿ ಗ್ರಹಿಸಿ ಯೇಸುವಿನ ಬಳಿಗೆ ಬಂದ ಕುರುಡರಂತೆ ಸುತ್ತಲಿರುವ ತಡೆಗಳನ್ನು ಲೆಕ್ಕಿಸದೇ ನಿಜವಾದ ಉದ್ದೇಶದೊಂದಿಗೆ ದೇವರ ಸನ್ನಿಧಾನದಲ್ಲಿ ನಮ್ಮ ಅವಶ್ಯಕತೆಗಳನ್ನು ಕೇಳಿಕೊಳ್ಳುವಾಗ ಖಂಡಿತವಾಗಿಯೂ ದೇವರು ನಮ್ಮ ಇಷ್ಟಗಳನ್ನು ಈಡೇರಿಸುವವರಾಗಿದ್ದಾರೆ.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ದೇವರು ನಮ್ಮ ಮಿಷನರಿಗಳ ಮೂಲಕ ದೇಶದಲ್ಲಿ ದೊಡ್ಡ ಉಜ್ಜೀವನವನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş