Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.11.2022
Share:

By Village Missionary Movement

Thursday, 03-Nov-2022

ಧೈನಂದಿನ ಧ್ಯಾನ(Kannada) – 04.11.2022

 

ಕಾದಿರು

 

“ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು" - ಹಬಕ್ಕೂಕ್ಕ 2:3

 

ಪಾಪದಿಂದ ಮುಕ್ತರಾಗಿ, ಉತ್ತರ ಭಾರತದ ಆದಿವಾಸಿ ಜನರ ನಡುವೆ ಸೇವೆ ಮಾಡಲು ತನ್ನನ್ನು ಸಮರ್ಪಿಸಿಕೊಂಡು ತನ್ನ ಕುಟುಂಬವನ್ನೆಲ್ಲಾ ಬಿಟ್ಟು ಒಬ್ಬರು ಅಲ್ಲಿಗೆ ಮಿಷಿನರಿಯಾಗಿ ಹೋದರು. ಐದು ವರ್ಷಗಳಾದರೂ ಕಿವುಡಾಗಿದ್ದ ವಯಸ್ಸಾದ ತಾಯಿಯನ್ನು ಹೊರತುಪಡಿಸಿ ಬೇರೆ ಯಾವುದೇ ಆತ್ಮಗಳು ಅವರ ಸೇವೆಯಲ್ಲಿ ಬರಲೇ ಇಲ್ಲ. ಒಂದು ದಿನ ಅವರು ತನಗೆ ಬೇರೇನೂ ಬೇಡವೆಂದು ತನ್ನ ಸ್ವಂತ ರಾಜ್ಯಕ್ಕೆ ಮರಳಲು ನಿರ್ಧರಿಸಿದರು. ಇದ್ದಕ್ಕಿದ್ದಂತೆ ಒಂದು ದಿನ ಆ ತಾಯಿ ತೀರಿಹೋದರೆಂಬ ಸುದ್ದಿ ಬಂತು. ಆ ತಾಯಿ ತನ್ನ ಕುಟುಂಬಸ್ಥರ ಬಳಿ ತನ್ನನ್ನು ಕ್ರೈಸ್ತರ ಸಂಪ್ರದಾಯದಂತೆ ಸಮಾಧಿಮಾಡಬೇಕೆಂದು ಮೊದಲೇ ಕೇಳಿಕೊಂಡಿದ್ದದರಿಂದ ಆ ಕುಟುಂಬದವರು ಮಿಷಿನರಿಯನ್ನು ಕರೆದರು. ಈ ಮಿಷಿನರಿಯೂ ಅಲ್ಲಿಗೆ ಹೋಗಿ ಕಣ್ಣೀರಿಟ್ಟರು. ದೇವರು ಕ್ರಿಯೆಮಾಡಲು ಪ್ರಾರಂಭಿಸಿದರು. ಇವರು ಪ್ರಾರ್ಥಿಸಲು ಪ್ರಾರಂಭಿಸಿದ ತಕ್ಷಣ, ದೇವರು ಆ ತಾಯಿಯನ್ನು ಜೀವಂತವಾಗಿ ಎಬ್ಬಿಸಿದರು. ಇದನ್ನು ನೋಡಿದ ಇಡೀ ಗ್ರಾಮವೇ ಯೇಸುಕ್ರಿಸ್ತನನ್ನು ನಂಬಿ ರಕ್ಷಣೆ ಹೊಂದಿದರು. ಆ ಸೇವಕನು ಮುಗಿಯಿತು ಎಂದು ನೆನೆಸಿದ ಕಾರ್ಯವನ್ನು ದೇವರು ಪ್ರಾರಂಭಿಸಿ ಯಶಸ್ವಿಯಾಗಿ ಮಾಡಿ ಮುಗಿಸಿದರು.

 

ಕಾಯುವ ಅನುಭವವು ದೇವರ ಮಕ್ಕಳ ಜೀವನದಲ್ಲಿ ಒಂದು ಹಂತದಲ್ಲಿ ಹೊರಬರಲೇ ಬೇಕು. ಈ ಪರಿಸ್ಥಿತಿಯಲ್ಲಿ ನಮ್ಮ ಸಾಂತ್ವನವು ದೇವರ ಸಮ್ಮುಖವೇ. ಸತ್ಯವೇದದಲ್ಲಿ ದೇವರಿಗಾಗಿ ಕಾದಿದ್ದವರ ಜೀವನದ ಅಂತ್ಯದಲ್ಲಿ ಅವರು ತಲೆ ಬಾಗಲು ಅವಕಾಶ ನೀಡಲೇ ಇಲ್ಲ. ಇವರೆಲ್ಲರೂ ಕಾದಿದ್ದು ತಮ್ಮ ನಂಬಿಕೆಯನ್ನು ಮೆಲುಕು ಹಾಕಿದರು. ಅಬ್ರಹಾಮನು ವಾಗ್ದಾನವು ನೆರವೇರಲು ಅನೇಕ ವರ್ಷಗಳ ಕಾಲ ಕಾದಿದ್ದರು. ಅಂತ್ಯವು ಸಂತೋಷ, ಆಶೀರ್ವಾದ. ಲಾಜರನು ಸತ್ತುಹೋದನೆಂದು ಗೊತ್ತಿದ್ದರೂ ಯೇಸು ತಡಮಾಡಿದರು. ಆದರೂ ಕೊನೆಗೆ ದೇವರ ನಾಮ ಮಹಿಮೆಹೊಂದುವಂತೆ ಅವನಿಗೆ ಅದ್ಭುತವನ್ನು ಮಾಡಿದರು.

 

ಪ್ರೀತಿಯ ಸಹೋದರ ಸಹೋದರಿಯರೇ! ಕೆಲಸ, ಮದುವೆ, ದೈಹಿಕ ಆರೋಗ್ಯ ಮತ್ತು ಸಾಲದಂತಹ ವಿಷಯಗಳಲ್ಲಿ ಕಾದಿರುವಂತಹ ಪರಿಸ್ಥಿತಿಯನ್ನು ದೇವರು ಅನುಮತಿಸಿದ್ದಾರೆಯೇ? ನಿರುತ್ಸಾಹಗೊಳ್ಳಲೇ ಬೇಡಿರಿ. ದೇವರ ಸಮ್ಮುಖ, ದೇವರ ವಾಕ್ಯವೇ ನಿಮ್ಮ ಸಾಂತ್ವನವಾಗಿರಲಿ. ಅವರು ತಡವಾದರೂ ಉತ್ತವಾದದ್ದನ್ನು ನೀಡುತ್ತಾರೆ. ಸರಿಯಾದ ಕಾಲ ಮತ್ತು ಸಮಯ ಬಂದಾಗ, ಅವರು ತ್ವರಿತವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ನಮ್ಮ ಕಲ್ಪನೆಗೂ ಮೀರಿದ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ಅದು ನಮ್ಮ ಸ್ವಂತ ಕಣ್ಣುಗಳಿಗೇ ಆಶ್ಚರ್ಯವಾಗಿರುತ್ತದೆ. ಹಲ್ಲೇಲೂಯಾ!

- S. ಮನೋಜ್ ಕುಮಾರ್

 

ಪ್ರಾರ್ಥನಾ ಅಂಶ:

ಉಜ್ಜೀವನದ ಶಿಷ್ಯತ್ವದ ಶಿಬಿರದಲ್ಲಿ ಭಾಗವಹಿಸಿದ ಯುವಕರು ತಾವು ತೆಗೆದುಕೊಂಡ ನಿರ್ಧಾರಗಳಲ್ಲಿ ನೆಲೆಗೊಂಡಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet