Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.11.2022
Share:

By Village Missionary Movement

Friday, 18-Nov-2022

ಧೈನಂದಿನ ಧ್ಯಾನ(Kannada) – 19.11.2022

 

ದೋಣಿ ಹೋಗುತ್ತಿದೆ

 

"ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಟ್ಟಾನು?" - ಮತ್ತಾಯ 16:26

 

ಎಲ್ಲವನ್ನು ಕಲಿತಿದ್ದ ಜ್ಞಾನಿಯೊಬ್ಬರು ಒಮ್ಮೆ ನದಿಯನ್ನು ದಾಟಬೇಕಿತ್ತು. ಪ್ರಯಾಣದ ಸಮಯದಲ್ಲಿ ಅವರು ನಾವಿಕನೊಂದಿಗೆ ಮಾತನಾಡಿದರು. ಅವನು ತನ್ನ ಬುದ್ಧಿವಂತಿಕೆಯನ್ನು ತಿಳಿದುಕೊಳ್ಳಬೇಕೆಂದು ನೆನೆಸಿ ಅವನ ಬಳಿ ತತ್ವಶಾಸ್ತ್ರಗಳ ಬಗ್ಗೆ ಗೊತ್ತಾ? ಎಂದರು. ನಾವಿಕ ಇಲ್ಲ ಎಂದನು. ಅಡಡಾ ನಿನ್ನ ಅರ್ಧ ಜೀವನ ಕಳೆದುಕೊಂಡುಬಿಟ್ಟೆ ಎಂದರು. ಸ್ವಲ್ಪ ಸಮಯದ ನಂತರ, ವಿಜ್ಞಾನ, ಸುಜ್ಞಾನದ ಬಗ್ಗೆ ಗೊತ್ತಾ? ಎಂದರು. ಇಲ್ಲ ಎಂದು ಅವನು ತಲೆಯಾಡಿಸಿದಾಗ ನಿನ್ನ ಜೀವನದ ಮುಕ್ಕಾಲು ಭಾಗವನ್ನು ಕಳೆದುಕೊಂಡಿದ್ದೀಯ ಎಂದು ಹೇಳಿದರು. ಜ್ಞಾನಿ ಹೀಗೆ ಮಾತನಾಡುತ್ತಿರುವಾಗ ದೋಣಿಯಲ್ಲಿದ್ದ ಸಣ್ಣ ರಂಧ್ರದಿಂದ ಸ್ವಲ್ಪ ಸ್ವಲ್ಪವಾಗಿ ನೀರು ದೋಣಿಯೊಳಗೆ ಬರಲು ಪ್ರಾರಂಭಿಸಿತು. "ಅಯ್ಯಾ, ದೋಣಿ ಇನ್ನು ಸ್ವಲ್ಪ ಹೊತ್ತಿನಲ್ಲಿ ಮುಳುಗಿಹೋಗುತ್ತದೆ. ನಿಮಗೆ ಈಜು ಗೊತ್ತಾ?" ಎಂದನು. ಜ್ಞಾನಿ ಇಲ್ಲ ಎಂದು ಗಾಬರಿಗೊಳ್ಳಲು, "ಅಯ್ಯಾ, ನೀವು ಎಲ್ಲವನ್ನೂ ಕಲಿತಿದ್ದೀರ ಆದರೆ ಜೀವನಕ್ಕೆ ಬೇಕಾದುದನ್ನು ಕಲಿತೇ ಇಲ್ವೇ! ಈಗ ನೀವು ನಿಮ್ಮ ಇಡೀ ಜೀವನವನ್ನು ಕಳೆದುಕೊಳ್ಳುತ್ತೀರಲ್ಲಾ ನನ್ನನ್ನು ಕ್ಷಮಿಸಿ. ಅಯ್ಯಾ, ನನಗೆ ಈಜಲು ಗೊತ್ತು. ನನ್ನ ಜೀವವನ್ನು ಉಳಿಸಿಕೊಳ್ಳುತ್ತೇನೆ." ಎಂದು ನದಿಗೆ ಹಾರಿದನು.

 

ಹೌದು, ಇದರಂತೆಯೇ ಸತ್ಯವೇದದಲ್ಲಿ ಅರಸನಾದ ಸೊಲೊಮೋನನು ಎಲ್ಲವನ್ನೂ ತಿಳಿದಿರುವ ಒಬ್ಬ ಬುದ್ಧಿವಂತ ವ್ಯಕ್ತಿ ಅವರಂತೆ ಮುಂಚೆಯೂ, ನಂತರವೂ ಯಾರೂ ಇರಲಿಲ್ಲ ಎಂದೇ ಸತ್ಯವೇದವು ಹೇಳುತ್ತಿದೆ. ಆಕಾಶದ ಕೆಳಗೆ ನಡೆಯುವುದನ್ನೆಲ್ಲಾ ತನಿಖೆ ಮಾಡಲು ಮನಸ್ಸು ಮಾಡಿದರು. ಆದರೆ ಅವರ ಜೀವನದ ಬಗ್ಗೆ ಗಮನ ಹರಿಸದೆ ಕತ್ತಲೆಯಲ್ಲಿ ಅಂತ್ಯಗೊಂಡದ್ದನ್ನು ನಾವು ನೋಡುತ್ತೇವೆ. ಸತ್ಯವೇದಕ್ಕೆ ವಿರುದ್ಧವಾಗಿ 1000 ಪತ್ನಿಯರು, ಉಪಪತ್ನಿಯರು. ಅವರನ್ನು ಮೆಚ್ಚಿಸಲು ವಿಗ್ರಹಾರಾಧನೆಗಾಗಿ ದೇವಾಲಯಗಳನ್ನು ಕಟ್ಟುವ ಸಾಹಸ ಮಾಡುತ್ತಾರೆ. ಕೊನೆಯಲ್ಲಿ ಎಲ್ಲಾ ವ್ಯರ್ಥ ವ್ಯರ್ಥ ಎಂದು ಹೇಳಿ ಮುಗಿಸುತ್ತಾರೆ. ಆದರೆ ತನ್ನ ತಂದೆ ದಾವೀದನು ಲೌಕಿಕ ಆಶೀರ್ವಾದಗಳಲ್ಲಿ, ರಾಜ ಪದವಿಯಲ್ಲಿ ಮುಳುಗಿ, ತನ್ನ ಮಾರ್ಗವನ್ನು ಬದಲಾಯಿಸಿಕೊಳ್ಳದೇ, ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ, ನಿನ್ನ ಆಜ್ಞೆಯಂತೆ ನಡೆಯುವುದೇ ನನ್ನ ಧ್ಯಾನ, ನಿಮ್ಮ ಜ್ಞಾನವೇ ದೊಡ್ಡದು ಎಂದು ಪದೇ ಪದೇ ಹೇಳುವುದನ್ನು ನಾವು ನೋಡಬಹುದು. ಹೌದು, ಅವರು ಕೊನೆಯವರೆಗೂ ದೇವರನ್ನು ಹಿಡಿದುಕೊಂಡರು.

 

ನನ್ನ ಪ್ರಿಯರೇ! ವಿಶ್ವ ಖ್ಯಾತಿಗಾಗಿ ನಿಮ್ಮ ಪದವಿಗಾಗಿ ಹಗಲಿರುಳು ಓಡುತ್ತಿದ್ದೀರಲ್ಲಾ? ಇವುಗಳಿಗೆಲ್ಲ ಪ್ರಾಮುಖ್ಯತೆ ನೀಡಿ ದೇವರ ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದೀರಾ? ಯೋಚಿಸಿರಿ. ನಿಮ್ಮ ಆತ್ಮಕ್ಕೆ ನೀವು ನೀಡುವ ಪ್ರಾಮುಖ್ಯತೆಯ ಶೇಕಡಾವಾರು ಎಷ್ಟೆಂದು ಯೋಚಿಸಿರಿ. ಈ ಲೋಕಕ್ಕಾಗಿ ಬದುಕಿದ ಜೀವನವು ಅಂತಿಮವಾಗಿ ಬೇಸರ ಮತ್ತು ಜಿಗುಪ್ಸೆಗೆ ಕಾರಣವಾಗುತ್ತದೆ. ಆದರೆ ದೇವರಿಗೆ ಮೊದಲ ಸ್ಥಾನ ನೀಡುವ ಜೀವನ, ದೇವರಿಗಾಗಿ ಬದುಕುವ ಜೀವನವು ಸಂತೋಷ, ಜೀವನ, ಶಾಶ್ವತ ಜೀವವನ್ನು ತರುತ್ತದೆ! ಹೌದು, ಜೀವನ ಎಂಬ ದೋಣಿ ಯಾವಾಗ ಬೇಕಾದರೂ ಮಗುಚಿ ಬೀಳಬಹುದು. ನಾವು ದೇವರೊಂದಿಗಿದ್ದರೆ, ಆತನು ನಮ್ಮನ್ನು ಸುರಕ್ಷಿತವಾಗಿ ನಿತ್ಯಜೀವದ ದಡಕ್ಕೆ ತಂದು ಸೇರಿಸುತ್ತಾರೆ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಭೇಟಿಯಾಗುವ ಜನರು ಯೇಸುವನ್ನು ಕಂಡುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino