Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.12.2022 (Christmas Special)
Share:

By Village Missionary Movement

Monday, 12-Dec-2022

ಧೈನಂದಿನ ಧ್ಯಾನ(Kannada) – 12.12.2022 (Christmas Special)

 

ಮೂಲಮಾದರಿಯಲ್ಲಿ ಅರ್ಥಪೂರ್ಣವಾದ ಕ್ರಿಸ್ಮಸ್

 

"ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ" - 1 ಪೇತ್ರ 1:15

 

ಶಿಕ್ಷಕರೊಬ್ಬರು ತರಗತಿಯಲ್ಲಿ ಪಾಠ ನಡೆಸುತ್ತಿದ್ದರು. ಅವರು ಎಲ್ಲಾ ವಿದ್ಯಾರ್ಥಿಗಳನ್ನು ಕೇಳಿದರು, "ನಿಮ್ಮ ರೋಲ್ ಮಾಡೆಲ್ ಯಾರು?" ಎಂದು. ಎಲ್ಲರೂ ಅಬ್ದುಲ್ ಕಲಾಂ, ಗಾಂಧೀಜಿ, ಕಿರಣ್ಬೇಡಿ... ಎಂದು ಹೇಳುತ್ತಲೇ ಇದ್ದರು. ಒಬ್ಬ ವಿದ್ಯಾರ್ಥಿ ಎದ್ದುನಿಂತು ಯೇಸು ಎಂದು ಹೇಳಿದನು. ತರಗತಿಯಲ್ಲಿದ್ದವರೆಲ್ಲ ಆಶ್ಚರ್ಯದಿಂದ ಅವನತ್ತ ನೋಡಿದರು.

 

ಪ್ರಿಯರೇ! ನಾವು ಈ ರೀತಿ ಹೇಳಲು ಸಾಧ್ಯವೇ? ನಮ್ಮ ನಡೆ, ನುಡಿ, ಶೈಲಿ, ಉಡುಗೆ ಯಾರನ್ನು ಪ್ರತಿಬಿಂಬಿಸುತ್ತಿದೆ. ನಾವು ಯಾರನ್ನು ಮಾದರಿಯಾಗಿ ಇಟ್ಟುಕೊಂಡು ಬದುಕುತ್ತಿದ್ದೇವೆ? ರಾಜಕಾರಣಿಯನ್ನಾ? ನಟ ನಟಿಯರನ್ನಾ? ಕ್ರೀಡಾಪಟುಗಳನ್ನಾ? ಅಥವಾ ಕ್ರಿಸ್ತನನ್ನಾ? ಅದರ ಬಗ್ಗೆ ಯೋಚಿಸೋಣ. ಕ್ರಿಸ್ತನ ಜನನವನ್ನು ಆಚರಿಸುತ್ತಿರುವ ನಾವು ಆತನಂತಿದ್ದೇವೆಯೇ? ಕ್ರಿಸ್ತನ ಮಕ್ಕಳಾಗಿರುವ, ನಮ್ಮ ಬಳಿ ಅವರ ಹೋಲಿಕೆ, ಅವರ ಸ್ವಭಾವ ಇದೆಯೇ? ಸತ್ಯವೇದದಲ್ಲಿಯೂ ಒಬ್ಬ ಮಹಿಳೆ ಪೇತ್ರನನ್ನು ನೋಡಿ ನಿನ್ನ ಮಾತು ನಜರೇತಿನ ಯೇಸುವಿನಂತಿದೆ ಎಂದು ಹೇಳಿದಳು. ಹೌದು, ಪೇತ್ರನ ಮಾತು ಕೆಲವು ವರ್ಷಗಳವರೆಗೆ ಅವರನ್ನು ಹೋಲುತ್ತಿತ್ತು. ಆದರೆ ಕ್ರಿಸ್ತನನ್ನು ಸ್ವೀಕರಿಸಿ ಅನೇಕ ವರ್ಷಗಳಾಗಿರುವ ನಮ್ಮ ಮಾತುಗಳು ಯಾರಿಗೆ ಹೋಲುತ್ತಿದೆ. ಅದರ ಬಗ್ಗೆ ಯೋಚಿಸೋಣ.

 

ಯೇಸು ಈ ಭೂಮಿಯ ಮೇಲೆ ಜೀವಿಸುತ್ತಿದ್ದ ದಿನಗಳಲ್ಲಿ, ಪಾಪಪೂರ್ಣ ಜಗತ್ತಿನಲ್ಲಿ ಹೇಗೆ ಪವಿತ್ರ ಜೀವನವನ್ನು ನಡೆಸಬೇಕೆಂದು ನಮಗೆ ತೋರಿಸಿದರು. ಅವರು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾಗ ಅವರ ಮಾತನ್ನು ಪಾಲಿಸಿದರು. ತಂದೆಯು ಅವರನ್ನು ಯಾವ ಉದ್ದೇಶಕ್ಕಾಗಿ ಕಳುಹಿಸಿದರೋ, ಅದನ್ನು ಅವರು ಕೊನೆಯವರೆಗೂ ನೆರವೇರಿಸಿ ಮುಗಿಸಿದರು (ಯೋಹಾನ 19:30). ಯೇಸುವಿನ ಸುತ್ತಲಿದ್ದವರು ಅವರ ಮಾತುಗಳಿಂದ ಕನಿಕರದಿಂದ ಆಕರ್ಷಿಸಲ್ಪಟ್ಟು ಸೆಳೆಯಲ್ಪಟ್ಟರು. ಒಂದು ಬೆಳಕಾಗಿ ಬದುಕಿ ತೋರಿಸಿದರು. ತನ್ನನ್ನು ಧಿಕ್ಕರಿಸಿದವರ ಪಾಪಗಳನ್ನೂ ಕ್ಷಮಿಸಿದರು. ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಎಂಬ ವಾಕ್ಯದ ಪ್ರಕಾರ ನಾವು ಸಹ ಬದುಕೋಣ. ಯೇಸು ಕ್ರಿಸ್ತನಂತೆ ಬಾಳೋಣ.

 

ಆದರೆ ಇಂದು ಅನೇಕ ಜನರು ಪಾಪವನ್ನು ಹೋಗಲಾಡಿಸಲು ಬಂದ ಕ್ರಿಸ್ತನ ಜನ್ಮದಿನವನ್ನು ಪಾಪಮಾಡಿ (ಕುಡಿತ, ಮಾದಕ ದ್ರವ್ಯ) ಆಚರಿಸುತ್ತಿದ್ದಾರೆ. ಇದು ದೇವರಿಗೆ ನೋವುಂಟು ಮಾಡುವ ವಿಷಯ. ನಾವು ಮಾನಸಾಂತರ ಹೊಂದಬೇಕಾದ ಸಮಯದಲ್ಲೇ ಮಾನಸಾಂತರ ಹೊಂದೋಣ. ಮುಂಬರುವ ಹೊಸ ವರ್ಷದಲ್ಲಿ, ನಾವು ಮಾಡುವ ಎಲ್ಲದರಲ್ಲೂ ಯೇಸುವಿನ ಮಾದರಿಯನ್ನು ಅನುಸರಿಸೋಣ. ಪರಲೋಕ ಭಾಗ್ಯವನ್ನು ಪಡೆಯೋಣ. ಆಮೆನ್.

- Mrs. ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ಪ್ರತಿದಿನ ಪ್ರತಿಯೊಂದು ಸೇವಕರೂ 100 ಹಸ್ತಪ್ರತಿಗಳನ್ನು ನೀಡುತ್ತಿದ್ದಾರೆ. ಹಸ್ತಪ್ರತಿಯನ್ನು ಸ್ವೀಕರಿಸುತ್ತಿರುವ ಜನರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet