Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.12.2022 (Christmas Special)
Share:

By Village Missionary Movement

Wednesday, 21-Dec-2022

ಧೈನಂದಿನ ಧ್ಯಾನ(Kannada) – 22.12.2022 (Christmas Special)

 

ಅನ್ಯಜನರ ನಡುವೆ ಅರ್ಥಪೂರ್ಣವಾದ ಕ್ರಿಸ್ಮಸ್

 

"ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು" - ಮತ್ತಾಯ 5:16

 

ಕ್ರಿಸ್‌ಮಸ್ ಬಗ್ಗೆ ಮಂತ್ರಿಯೊಬ್ಬರು ಬರೆದ ತಮಾಷೆಯ ಕಥೆಯನ್ನು ನಾನು ಓದಿದ್ದೇನೆ. ಒಂದು ದೇವಾಲಯದ ಬಲಿಪೀಠದ ಮುಂದೆ ಮಂಡಿಯೂರಿ ಕುಳಿತಿದ್ದ ಒಬ್ಬ ವ್ಯಕ್ತಿಯ ಪ್ರಾರ್ಥನೆಯನ್ನು ಕೇಳಲು ಒಬ್ಬ ದೇವದೂತನು ಅವನ ಬಳಿಗೆ ಹೋದರಂತೆ. ಅವನು, “ದೇವರೇ, ನನಗೆ ಕ್ರಿಸ್ಮಸ್ ದಿನದಂದು ಅಡುಗೆ ಮಾಡಲು ಕೋಳಿ ಬೇಕು. ನಮ್ಮ ಸೇವಕರ ಮನೆಯಲ್ಲಿ ಅನೇಕ ಕೋಳಿಗಳಿವೆ. ಎರಡು ಅಂಗಿ ಇರುವವನಿಗೆ ಒಂದು ಅಂಗಿ ಕೊಡಬೇಕೆಂದು ಬೋಧಿಸುವ ಅವರು, ನನಗೆ ಒಂದು ಕೋಳಿ ಕೊಡುವುದಿಲ್ಲ. ಹಾಗಾಗಿ ಅವರ ಮನೆಯಲ್ಲಿ ಕೋಳಿಯನ್ನು ಕದ್ದು ತರುತ್ತೇನೆ'' ಎಂದು ಪ್ರಾರ್ಥಿಸಿದನಂತೆ. ಆಘಾತಕ್ಕೊಳಗಾದ ದೇವದೂತನು ಸಮಾಧಿಯ ಬಳಿ ಅಳುತ್ತಾ ಪ್ರಾರ್ಥಿಸುತ್ತಿದ್ದ ಮತ್ತೊಂದು ವ್ಯಕ್ತಿಯ ಬಳಿಗೆ ಹೋದರಂತೆ. ಅವನು “ಪ್ರೀತಿಯ ಸ್ನೇಹಿತ, ಕಳೆದ ಕ್ರಿಸ್‌ಮಸ್‌ನಲ್ಲಿ ನಾವಿಬ್ಬರೂ ಒಟ್ಟಿಗೆ ಕುಡಿದು ಕ್ರಿಸ್‌ಮಸ್ ಅನ್ನು ಸಂತೋಷದಿಂದ ಆಚರಿಸಿದ್ದೇವೆ, ಆದರೆ ಈ ಕ್ರಿಸ್ಮಸ್ ಗೆ ನೀನಿಲ್ಲ. ಹಾಗಾಗಿ ಈ ವೈನ್ ಬಾಟಲಿಯನ್ನು ನಿನಗೆ ಅರ್ಪಿಸುತ್ತೇನೆ'' ಎಂದು ಹೇಳಿ ಸಮಾಧಿಯ ಮೇಲೆ ವೈನ್ ಬಾಟಲಿಯನ್ನು ಇಟ್ಟನಂತೆ. ದಿಗ್ಭ್ರಮೆಗೊಂಡ ದೇವದೂತನು ವಿದ್ಯುತ್ ದೀಪಗಳಿಂದ ಹೊಳೆಯುತ್ತಿರುವ ಮನೆಯೊಂದರ ಬಳಿಗೆ ಹೋದರಂತೆ, ಮನೆಯ ಮಾಲೀಕರು ಅಲಂಕಾರಗಳತ್ತ ಕಾತರದಿಂದ ನೋಡುತ್ತಿದ್ದ ಬಡ ಹುಡುಗರನ್ನು ಓಡಿಸಿಬಿಟ್ಟರಂತೆ. ಜನರ ಕ್ರಿಸ್‌ಮಸ್ ಆಚರಣೆಯನ್ನು ನೋಡಿದ ದೇವದೂತನು ತುಂಬಾ ದುಃಖದಿಂದ ಪರಲೋಕಕ್ಕೆ ಹಿಂತಿರುಗಿದರಂತೆ.

 

ಇಂದಿನ ಸತ್ಯವೇದ ಭಾಗವು ಮನುಷ್ಯರು ತಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಬೇಕು ಎಂಬುದು. ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು ಎಂದು1 ಪೇತ್ರ 2:12 ರಲ್ಲಿ ನೋಡುತ್ತೇವೆ. ಆದ್ದರಿಂದ, ಮೇಲಿನ ಕಥೆಯಲ್ಲಿ ಕಂಡುಬರುವಂತೆ, ದೇವರ ಹೆಸರು ದೂಷಿಸಲ್ಪಡುವಂತೆ ಯಾವ ಕೆಲಸವನ್ನೂ ಮಾಡಿ ಕ್ರಿಸ್ಮಸ್ ಅನ್ನು ಆಚರಿಸಬಾರದು. ಅನೇಕ ಕ್ರೈಸ್ತರು ಮಧ್ಯಪಾನದೊಂದಿಗೆ ಕ್ರಿಸ್ಮಸ್ ಆಚರಿಸುತ್ತಾರೆ. ಎಂಥಾ ವೇದನೆ!

 

ಪ್ರಿಯರೇ! ಯೇಸುವನ್ನು ತಿಳಿಯದ ಅನ್ಯಜನರಾದ ಬಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ನೀಡಿ ಯೇಸುವಿನ ಪ್ರೀತಿಯನ್ನು ತೋರಿಸಿರಿ. ಯೇಸುವನ್ನು ತಿಳಿಯದ ನಿಮ್ಮ ಸ್ನೇಹಿತರನ್ನು ಔತಣಕ್ಕೆ ಆಹ್ವಾನಿಸಿ ಮತ್ತು ಒಳ್ಳೆಯ ಶುಭ ಸಂದೇಶವನ್ನು ಹಂಚಿಕೊಳ್ಳಿರಿ. ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರಿಗೂ ಕ್ರಿಸ್‌ಮಸ್‌ನ ಕೈ ಪ್ರತಿಗಳನ್ನು ನೀಡಿರಿ. ದುಃಖಿತ, ಅನಾರೋಗ್ಯ ಮತ್ತು ಏಕಾಂಗಿಯಾಗಿರುವ ನಂಬಿಕೆಯಿಲ್ಲದವರ ಬಳಿಗೆ ಹೋಗಿ, ಅವರಿಗೆ ಕ್ರಿಸ್‌ಮಸ್‌ನ ಶುಭ ಸಂದೇಶವನ್ನು ಹೇಳುವ ಮೂಲಕ ಭರವಸೆಯ ಮಾತುಗಳನ್ನು ಹೇಳುವ ಮೂಲಕ ಅವರನ್ನು ಹುರಿದುಂಬಿಸಿ. ಮನೆಯ ಅಲಂಕಾರಿಕ ದೀಪಗಳ ಬೆಳಕಿಗಿಂತ ನಮ್ಮ ಸತ್ಕಾರ್ಯಗಳ ಬೆಳಕು ಮನುಷ್ಯರ ಮುಂದೆ ಬೆಳಗಲಿ. ದೇವರ ನಾಮವು ಮಹಿಮೆ ಹೊಂದುತ್ತದೆ. ಪರಲೋಕವು ಸಂತೋಷಿಸುತ್ತದೆ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

"ಕಣ್ಮಣಿಯೇ ಕೇಳು" ಮತ್ತು "ಯೆಹೋಶುವನೇ ಎದ್ದೇಳು" ಎಂಬ ಪತ್ರಿಕೆಗಳ ಮೂಲಕ ಅನೇಕ ಯುವಕರು ಸ್ಪರ್ಶಿಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet instagram unban service tiktok unban instagram unban x unban twitter unban palacebet