Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.01.2023
Share:

By Village Missionary Movement

Wednesday, 04-Jan-2023

ಧೈನಂದಿನ ಧ್ಯಾನ(Kannada) – 04.01.2023

 

ಶಾಂತಿ ನಿಲಯ

 

“ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ..." - ಮತ್ತಾಯ 8:16

 

ನಾನು ದಕ್ಷಿಣ ಜಿಲ್ಲೆಯ ಒಂದು ಹಳ್ಳಿಯ ಸುವಾರ್ತಾಬೋಧಕ ಸೇವೆಗೆ ಹೋಗಿದ್ದೆ. ಅಲ್ಲಿ ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸುವ ಪೂಜಾ ಸ್ಥಳವಿತ್ತು. ಆ ಸ್ಥಳದಲ್ಲಿ, ದೀರ್ಘಕಾಲದ ಅಸ್ವಸ್ಥರು ಮತ್ತು ಅನೇಕ ದೆವ್ವ ಹಿಡಿದ ಜನರನ್ನು ಅಲ್ಲಿನ ಮರಗಳು ಮತ್ತು ತಂತಿಗಳಿಗೆ ಸರಪಳಿಯಲ್ಲಿ ಬಂಧಿಸಲಾಗಿತ್ತು. ಈ ಜಾಗಕ್ಕೆ ಬಂದು ಪ್ರಾರ್ಥಿಸಿದರೆ ಸ್ವಸ್ಥತೆ ಸಿಗುತ್ತದೆ ಎಂಬ ನಿರೀಕ್ಷೆಯೂ ಆ ಜನರಲ್ಲಿತ್ತು. ಆದರೆ ಅಲ್ಲಿ ನಾನು ಕಂಡ ವಾಸ್ತವವೆಂದರೆ 

ಅವರ ನಿರೀಕ್ಷೆಗಳು ಈಡೇರಲಿಲ್ಲ. ನಾನು ಇದನ್ನು ನೋಡಿದಾಗ, ನಾನು ಭಾರವಾದ ಮನೋಭಾವದಿಂದ ಪ್ರಾರ್ಥಿಸಲು ಪ್ರಾರಂಭಿಸಿದೆ. ಆಗ ಪವಿತ್ರಾತ್ಮನು ನನ್ನೊಂದಿಗೆ ಮಾತನಾಡಿದರು. ಇಂತಹ ಸಂತ್ರಸ್ತ ಜನರಿಗಾಗಿ "ಶಾಂತಿ ನಿಲಯ'' ಎಂಬ ಒಂದು ಸೇವೆಯ ಯೋಜನೆಯನ್ನು ನನಗೆ ನೀಡಿದರು.

 

ಕಳೆದ 26 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುತ್ತಿದ್ದೇವೆ. ಸತ್ಯವೇದವು ಹೇಳುವಂತೆ, ಸುವಾರ್ತೆಯನ್ನು ಬಡವರಿಗೆ ಬೋಧಿಸಲಾಗುತ್ತಿದೆ; ಆದರೆ ಅದೇ ಸಮಯದಲ್ಲಿ, ನಾವು ಹಳ್ಳಿಗಳಲ್ಲಿ ದೆವ್ವದ ಮತ್ತು ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಇಂತಹ ಜನರನ್ನು ನೋಡಿದಾಗ, ನಾವು ಅಲ್ಲಿ ಒಂದು ಸಣ್ಣ ಪ್ರಾರ್ಥನೆಯನ್ನು ಮಾತ್ರ ಮಾಡಲು ಸಾಧ್ಯವಾಗುತ್ತಿದೆ. ಹೀಗೆ ಬಾಧಿಸಲ್ಪಟ್ಟ ಜನರಿಗಾಗಿ ನಾನು ದೇವರನ್ನು ಪ್ರಾರ್ಥಿಸಿ ಬಿಡುಗಡೆ ಹೊಂದಲು ಪ್ರಯತ್ನಿಸಿದಾಗ ದೇವರು ನನ್ನೊಂದಿಗೆ ಸ್ಪಷ್ಟವಾಗಿ ಮಾತನಾಡಿದರು. ಅದರಂತೆ, ಅವರನ್ನು ಹತ್ತು ದಿನಗಳ ಕಾಲ ನಮ್ಮೊಂದಿಗೆ ಇಟ್ಟುಕೊಳ್ಳಲು ನಿರ್ಧರಿಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅವರಿಗೆ ಪ್ರಾರ್ಥಿಸುತ್ತಾ ಸತ್ಯವೇದದಿಂದ ಕೆಲವು ಸಲಹೆ ನೀಡುತ್ತಿದ್ದೇವೆ . ಹೀಗೆ ಕಟ್ಟಲ್ಪಟ್ಟ ಜನರಿಗಾಗಿ ನಾವು ನಮ್ಮ ಕ್ಯಾಂಪಸ್‌ನಲ್ಲಿ ಪ್ರತಿನಿತ್ಯ ಪ್ರಾರ್ಥಿಸತೊಡಗಿದೆವು. ಪ್ರಸ್ತುತ ನಾವು ಈ ಯೋಜನೆಯ ಪ್ರಕಾರ ಜನರು ಉಳಿಯಲು ಚಾಪೆಲ್ ಮತ್ತು ಸಣ್ಣ ಕೊಠಡಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ಹೇಗಾದರೂ, ಬಹುಸಂಖ್ಯೆಯ ಜನರನ್ನು ದೇವರಿಗಾಗಿ ಸಂಪಾದಿಸುವ ಕೆಲಸದಲ್ಲಿ ಶಾಂತಿ ನಿಲಯ ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದೆ.

 

ಇಂದಿನ ಧ್ಯಾನದಲ್ಲಿ ನಾವು ಅಗತ್ಯವಿರುವ ಜನರಿಗೆ ಕರ್ತನಲ್ಲಿ ನಮ್ಮ ಕೈಲಾದದ್ದನ್ನು ಮಾಡಲು ಪ್ರಯತ್ನಿಸಬೇಕು ಎಂಬುದನ್ನು ಕಲಿತುಕೊಳ್ಳುತ್ತಿದ್ದೇವೆ. ಚೆನ್ನಾಗಿ ಪ್ರಾರ್ಥಿಸುವವರು ಮತ್ತು ಉಪವಾಸ ಮಾಡುವವರು ಇಂದು ದೇವರ ಕೆಲಸದಲ್ಲಿ ಹೆಚ್ಚು ಅಗತ್ಯವಿದೆ. ಈ ರೀತಿಯ ದೆವ್ವಗಳು ಉಪವಾಸ ಮತ್ತು ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾತರಿಂದಲೂ ಬಿಟ್ಟು ಹೋಗುವುದಿಲ್ಲವೆಂದು ಕರ್ತನಾದ ಯೇಸು ಕ್ರಿಸ್ತನು ಹೇಳಿದ್ದಾರೆ. ಹಳ್ಳಿಗಳಲ್ಲಿ ಈ ರೀತಿಯ ಹೋರಾಟದಲ್ಲಿ ಸಿಕ್ಕಿಬಿದ್ದ ಜನರಿಗಾಗಿ ಪ್ರಾರ್ಥಿಸಲು ಮತ್ತು ಅವರು ಬಿಡುಗಡೆಯನ್ನು ಪಡೆಯಲು ಮುಂದೆ ಬನ್ನಿ. ಒಟ್ಟಿಗೆ ಸೇರಿ ಕೆಲಸ ಮಾಡೋಣ. ದೇವರು ನಮಗೆ ಮಾರ್ಗದರ್ಶನ ನೀಡಲಿ!

- K. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಗೆತ್ಸೆಮನೆ ಆವರಣದಲ್ಲಿ ಕಟ್ಟಡ ಕಾಮಗಾರಿಯ ಅಗತ್ಯತೆಗಳು ಪೂರೈಸಲ್ಪಡಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino