Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.01.2023
Share:

By Village Missionary Movement

Wednesday, 18-Jan-2023

ಧೈನಂದಿನ ಧ್ಯಾನ(Kannada) – 19.01.2023

 

ಚಿಕ್ಕ ಮಕ್ಕಳ ಸೇವೆ

 

"...ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು;..." - ಲೂಕ 9:48

 

ಸಂಜೆ 4ರ ನಂತರ ಗ್ರಾಮಕ್ಕೆ ಹೋದರೆ ಗ್ರಾಮದ ಬೀದಿಗಳಲ್ಲಿ, ದಿಣ್ಣೆಗಳ ಮೇಲೆ ಆ ಗ್ರಾಮದ ಶಾಲೆಯ ಮುಂದೆ ಚಿಕ್ಕ ಮಕ್ಕಳು ಆಟವಾಡುತ್ತಿರುತ್ತಾರೆ. ನಾವು ಅವರ ಬಳಿ ಹೋಗಿ ಒಂದು ಕಥೆ ಹೇಳಿಕೊಡುತ್ತೇನೆ ಎಂದು ಕೇಳಿದರೆ, ಅವರು ತಕ್ಷಣ ಸರಿ ಎಂದು ಹೇಳಿ ನಮ್ಮ ಹಿಂದೆ ನಮ್ಮೊಂದಿಗೆ ಓಡಿ ಬರುತ್ತಾರೆ. ಎಂಥಾ ಆಶ್ಚರ್ಯ ನೋಡಿ. ಮಕ್ಕಳ ಸೇವೆ ಎಂದರೆ ಕಥೆಗಳ ಮೂಲಕ ಅವರಿಗೆ ಸುವಾರ್ತೆ ಸಾರುವುದೇ. ಕೆಲವು ಸಮಯಗಳಲ್ಲಿ, ಅವರ ಪೋಷಕರು ಸಹ ಅವರು ಏನು ಕಲಿಸುತ್ತಿದ್ದಾರೆ ಎಂದು ಸಂಶಯ ಪಟ್ಟು ಅವರೊಂದಿಗೆ ಬಂದು ಬಿಡುತ್ತಾರೆ. ನಾವು ಅವರಿಗೆ ಕಲಿಸುವ ಹಾಡುಗಳು, ಕಥೆಗಳು, ವಾಕ್ಯಗಳು ಮತ್ತು ಕ್ರಮಬದ್ಧತೆ ಹೀಗೆ ಉತ್ತಮ ವಿಷಯಗಳನ್ನು ಕಂಡು ಮುಂದಿನ ಬಾರಿ ಅವರೇ ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಾರೆ.

 

ಮಕ್ಕಳು ರೊಟ್ಟಿ ಕೇಳುತ್ತಾರೆ ಅವರಿಗೆ ಕೊಡುವವರಿಲ್ಲ ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ಆದ್ದರಿಂದ ಅನ್ಯಜನರ ಮಕ್ಕಳಿಗೂ ಯೇಸುವಿನ ಅಗತ್ಯವಿದೆ. ಈ ಚಿಕ್ಕ ವಯಸ್ಸಿನಲ್ಲಿ ಅವರು ಕಲಿಯುವ ಪಾಠಗಳು ದೊಡ್ಡವರಾಗಿ ಮುಂದುವರಿಯಲು ಸಹಾಯ ಮಾಡುತ್ತದೆ. ಈ ವಯಸ್ಸಿನಲ್ಲಿ ಯೇಸುವಿನ ಪ್ರೀತಿಯನ್ನು ಅವರಲ್ಲಿ ತುಂಬದಿದ್ದರೆ, ಅವರು ವಯಸ್ಕರಾದಾಗ ಅವರು ದಾರಿತಪ್ಪುವ ಅನೇಕ ಅವಕಾಶಗಳನ್ನು ಹೊಂದಿರುತ್ತಾರೆ. ಗ್ರಾಮ ಮಿಷನರಿ ಚಳವಳಿಯ ದರ್ಶನವೇ ನನ್ನ ಕುರಿಮರಿಗಳನ್ನು ಮೇಯಿಸುತ್ತೀಯ ಎಂಬ ವಾಕ್ಯವೇ! ವಿಶೇಷವಾಗಿ ಹಳ್ಳಿಗಳಲ್ಲಿರುವ ಮಕ್ಕಳು ಕರ್ತನ ಪ್ರೀತಿಯನ್ನು ತಿಳಿಯುವಂತೆ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ನಾವು ವಿಶೇಷವಾಗಿ ಕಲಿತುಕೊಂಡೋ ಅಥವಾ ತರಬೇತಿ ಪಡೆದೋ ಬಂದಿಲ್ಲ. ದೇವರು ನಮಗೆ ಮಾಡಿದ ಉಪಕಾರಗಳನ್ನು ಒಂದು ಸಣ್ಣ ಕಥೆಯಾಗಿ ಹೇಳುತ್ತಿದ್ದೇವೆ ಮತ್ತು ಕಥೆಗೆ ತಕ್ಕಂತೆ ಒಂದು ವಾಕ್ಯವನ್ನು ಹೇಳಿ ಯೇಸುವನ್ನು ಪರಿಚಯಿಸುತ್ತಿದ್ದೇವೆ.

 

ಪ್ರಿಯರೇ! ಇಂದಿನ ಮಕ್ಕಳೇ ನಾಳಿನ ನಾಯಕರು ಎಂಬ ಗಾದೆಯಂತೆ ನಾವು ಈಗಲೇ ಯೇಸುವಿನ ಪ್ರೀತಿಯನ್ನು ಸಾರದಿದ್ದರೆ ಅವರ ಭವಿಷ್ಯ ಏನಾಗಬಹುದು ಎಂದು ಯೋಚಿಸಿ. ಬಹುಶಃ ಯೇಸುವಿನ ಪ್ರೀತಿಯನ್ನು ತಿಳಿದರೆ ಅವರು ಯೇಸುವಿನ ಶಿಷ್ಯರಾಗಿ ಬದಲಾಗುತ್ತಾರೆ. ಲಕ್ಷಾಂತರ ಆತ್ಮಗಳು ಯೇಸುವಿನ ಮಕ್ಕಳಾಗಿ ಮಾರ್ಪಡಲು ಅವರು ಕಾರಣಕರ್ತರಾಗುತ್ತಾರೆ. ಭಾರತದಲ್ಲಿ ಸುವಾರ್ತೆ ಸಾರಲ್ಪಟ್ಟು 2000 ವರ್ಷಗಳಾದರೂ, ಇನ್ನೂ ಕೇವಲ ಮೂರು ಶೇಕಡಾ ಜನರು ಮಾತ್ರ ದೇವರನ್ನು ಅರಿತುಕೊಂಡಿದ್ದಾರೆ. ಹಾಗಾಗಿ ನಾವು ಕ್ರಿಯಾಶೀಲರಾಗಬೇಕು. ಹಳ್ಳಿಗಳಲ್ಲಿ ಮಕ್ಕಳನ್ನು ಭೇಟಿ ಮಾಡಲು ನಮ್ಮೊಂದಿಗೆ ಅರೆಕಾಲಿಕವಾಗಿಯೋ ಅಥವಾ ಪೂರ್ಣ ಸಮಯವೋ ಜೊತೆಯಾಗಿ ಸೇರಿ ಹಳ್ಳಿಗಳಲ್ಲಿರುವ ಮಕ್ಕಳನ್ನು ಭೇಟಿ ಮಾಡಲು ಮುಂಬರುತ್ತೀರಾ? ಮುಂದಿನ ಪೀಳಿಗೆಯು ಎದ್ದು ಪ್ರಕಾಶಿಸುವಂತೆ ಮಾಡುತ್ತೀರಾ? ಇಂದು ದೇಶವೇ ನಿಮ್ಮ ಕೈಯಲ್ಲಿದೆ ಕಾರ್ಯನಿರ್ವಹಿಸಿ.

 

ನೆನಪಿಡಿ: ಒಂದು ಮಗು ಮಾಡುವ ಒಂದು ಚಿಕ್ಕ ತಪ್ಪನ್ನು ಮೊಗ್ಗಿನಲ್ಲೇ ಚಿವುಟಿ ಹಾಕಿದರೆ, ಅವನು ಭವಿಷ್ಯದಲ್ಲಿ ಒಬ್ಬ ದೊಡ್ಡ ವ್ಯಕ್ತಿಯಾಗಿ ಕರ್ತನಿಗಾಗಿ ಕಾರ್ಯಸಾಧಿಸುತ್ತಾನೆ ಎಂಬುದನ್ನು ನೆನಪಿಟ್ಟುಕೊಳ್ಳಿ.

- Mrs. ಮೆರ್ಸಿ ಅಲೆಕ್ಸಾಂಡರ್

 

ಪ್ರಾರ್ಥನಾ ಅಂಶ:

ನಾವು ತಮಿಳುನಾಡಿನಾದ್ಯಂತ 3000 ಟ್ಯೂಷನ್ ಕೇಂದ್ರಗಳನ್ನು ತೆರೆಯಲಿದ್ದೇವೆ, ಇದರಲ್ಲಿ ದೇವರ ಹಸ್ತವು ಜೊತೆಯಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet instagram unban service tiktok unban instagram unban x unban twitter unban palacebet