Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.02.2023
Share:

By Village Missionary Movement

Friday, 03-Feb-2023

ಧೈನಂದಿನ ಧ್ಯಾನ(Kannada) – 04.02.2023

 

ಏಳು ಪ್ರಕಾಶಿಸು

 

"ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು” - ಯೋಹಾನ 1:9

 

ಇಪ್ಪತ್ತು ವರ್ಷಗಳ ಹಿಂದೆ ನಾನು ಕಾಲೇಜಿಗೆ ಹೋಗುತ್ತಿದ್ದಾಗ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದೆ ಸುಮಾರು ಆರು ತಿಂಗಳು ಹುಚ್ಚಿಯಂತೆ ಮನೆಯಲ್ಲಿಯೇ ಇದ್ದೆ. ನನ್ನ ತಾಯಿಯ ಪ್ರಾರ್ಥನೆಯ ಮೂಲಕ ನನ್ನ ಬಲಹೀನತೆ ಬದಲಾಯಿತು. ನನ್ನನ್ನು ಅಪಹಾಸ್ಯ ಮಾಡುವವರ ಮುಂದೆಯೇ ದೇವರು ನನ್ನನ್ನು ಹೆಚ್ಚಿಸಿದರು. ನಾನು ಎದುರಿಸಿದ ಸವಾಲುಗಳ ಮೂಲಕ ದೇವರು ಮೋಶೆಗೆ ಅರಣ್ಯದಲ್ಲಿ ತರಬೇತಿ ನೀಡಿದಂತೆ ನನಗೂ ತರಬೇತಿ ನೀಡಿದರು. ಸೇವೆಯಲ್ಲಿಯೂ ದೇವರು ನನ್ನನ್ನು ಆಶ್ಚರ್ಯಕರವಾಗಿ ನಡೆಸಿದರು. ಕತ್ತಲೆಯಲ್ಲಿದ್ದ ನನ್ನನ್ನು ಪ್ರಕಾಶಿಸುವಂತೆ ಮಾಡಿದರು. ಹೌದು, ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥ ನಿಜವಾದ ಬೆಳಕು ಅವರೇ!

 

ಸತ್ಯವೇದದಲ್ಲಿ ಯೇಸುವಿಗೆ ಮುನ್ನುಡಿಯಾಗಿ ಜೀವಿಸಿದವರು ಸ್ನಾನಿಕನಾದ ಯೋಹಾನನು. ಇವರು ಜಕರೀಯ-ಎಲಿಸಬೇತ್ ಎಂಬವರಿಗೆ ಮಗನಾಗಿ ಜನಿಸಿದರು. ಈ ಯೋಹಾನನ ಬಗ್ಗೆ "ಅವನು ಉರಿಯುತ್ತಾ ಪ್ರಕಾಶಿಸುವ ದೀಪವಾಗಿದ್ದನು" ಎಂದು ಸತ್ಯವೇದವು ನಮಗೆ ಎತ್ತಿ ತೋರಿಸುತ್ತಿದೆ. ಅಡವಿಯಲ್ಲಿ ಜೀವನ, ಸರಳ ಉಡುಗೆ ಮತ್ತು ಸರಳ ಆಹಾರ ಇವು ಅವರನ್ನು ಇತರ ಜನರಿಂದ ಪ್ರತ್ಯೇಕಿಸಿ ತೋರಿಸುತ್ತಿದೆ. ಅವರ ಸರಳ ಜೀವನಶೈಲಿ, ಪಾಪವನ್ನು ಖಂಡಿಸಿ ಎಚ್ಚರಿಸಿದ ವಿಧಾನವು ಮತ್ತು ಪಶ್ಚಾತ್ತಾಪಕ್ಕೆ ಜನರಿಗೆ ಕರೆಯುವಿಕೆ ಕೊಟ್ಟ ಯೋಹಾನನ ಬೋಧನೆಗಳು ಯೆರೂಸಲೇಮ್, ಯೂದಾಯ ಮತ್ತು ಯೊರ್ದಾನ್ ಸುತ್ತಮುತ್ತಲಿನ ಜನರು ತಮ್ಮ ಪಾಪಗಳನ್ನು ಒಪ್ಪಿಕೊಂಡು ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಮಾಡಿತು. ನಾನು ಕಡಿಮೆಯಾಗಬೇಕು ಮತ್ತು ಕ್ರಿಸ್ತನು ನನ್ನಲ್ಲಿ ಹೆಚ್ಚಬೇಕು ಎಂಬ ಪ್ರಾರ್ಥನೆಯು ಆತನ ನಮ್ರತೆಯನ್ನು ನಮಗೆ ಕಲಿಸಿ ಕೊಡುತ್ತಿದೆ. ಕ್ರಿಸ್ತನಿಗಾಗಿ ಅವರ ಧೈರ್ಯವು ರಕ್ತ ಸಾಕ್ಷಿಯಾಗಿ ಸಾಯಲು ಸಹ ಅರ್ಹತೆ ನೀಡಿತು. ಹೌದು, ಅವರು ಕ್ರಿಸ್ತನಿಗಾಗಿ ಉರಿಯುತ್ತಾ ಪ್ರಕಾಶಿಸುವ ದೀಪವಾಗಿದ್ದರು.

 

ಹೌದು, ಪ್ರಿಯರೇ, ನಿಮ್ಮೊಳಗೂ ನಾನು ಪ್ರಕಾಶಿಸಲು ಸಾಧ್ಯವೇ, ನನ್ನ ಜೀವನವು ಅನೇಕರಿಗೆ ಬೆಳಕಾಗಿ ಮಾರ್ಪಡುತ್ತದಾ? ಹೀಗೆಲ್ಲಾ ಅನಿಸುತ್ತಿದೆಯಾ? ನಮ್ಮನ್ನು ನಾವೇ ಸತ್ಯವೇದದ ವಾಕ್ಯಗಳ ಮೂಲಕ ಸರಿಪಡಿಸಿಕೊಳ್ಳೋಣ ಮತ್ತು ಸ್ನಾನಿಕನಾದ ಯೋಹಾನನಲ್ಲಿ ಕಂಡುಬಂದ ಸರಳತೆ, ನಮ್ರತೆ ಮತ್ತು ಕ್ರಿಸ್ತನ ಕುರಿತಾದ ವೈರಾಗ್ಯ ನಮ್ಮಲ್ಲಿಯೂ ಕಾಣಲ್ಪಡುವುದಾದರೆ ನಾವು ಕೂಡ ಉರಿಯುತ್ತಾ ಪ್ರಕಾಶಿಸುವ ದೀಪವೇ. ನಮ್ಮ ಜೀವನವು ಬದುಕಲು ದಾರಿಯನ್ನು ಹುಡುಕುತ್ತಿರುವ ಅನೇಕರಿಗೆ Light House ಆಗಿ ಮಾರ್ಪಡುತ್ತದೆ.

- Mrs. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಪ್ರತಿ ಕಾರ್ಯಸ್ಥಳದಲ್ಲಿ ನಡೆಯುತ್ತಿರುವ 24-ಗಂಟೆಗಳ ಸರಪಳಿ ಪ್ರಾರ್ಥನೆಯ ಮೂಲಕ ದೇಶದಲ್ಲಿ ಒಂದು ದೊಡ್ಡ ಬದಲಾವಣೆ ಉಂಟಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş holiganbet giriş matbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet jojobet jojobet jojobet jojobet jojobet holiganbet holiganbet grandpashabet grandpashabet grandpashabet cratosroyalbet