Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.03.2023
Share:

By Village Missionary Movement

Friday, 10-Mar-2023

ಧೈನಂದಿನ ಧ್ಯಾನ(Kannada) – 10.03.2023

 

ತಾಳ್ಮೆ

 

"...ನಾವು ಅವನನ್ನು ನೋಡಿದಾಗ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ" - ಯೆಶಾಯ 53:2

 

ಆಫ್ರಿಕಾ ದೇಶಕ್ಕೆ ಸೇರಿದ ಸಾಮುವೇಲ್ ಮೋರಿಸ್ ಎಂಬ ಸಮರ್ಪಿತ ಸೇವಕರ ಬಗ್ಗೆ ನಮಗೆ ತಿಳಿದಿರಬಹುದು. ಅವರು ಅನೇಕ ಕಷ್ಟಗಳ ನಡುವೆ ಹಾದು ಬಂದದ್ದರಿಂದ ತುಂಬಾ ತಾಳ್ಮೆಯನ್ನು ಕಲಿತುಕೊಂಡವರು. ಅವರು ಇಂಡಿಯಾನಾದ ಟೇಲರ್ ವಿಶ್ವವಿದ್ಯಾಲಯದಲ್ಲಿ ದೇವತಾಶಾಸ್ತ್ರವನ್ನು ಅಧ್ಯಯನ ಮಾಡಲು ಬಂದರು. ಶಾಲೆಯ ಮುಖ್ಯಸ್ಥರು ಅವರ ಬಳಿ ನೀವು ತಂಗಲು ಯಾವ ಕೊಠಡಿ ಬೇಕು ಎಂದು ಕೇಳಿದಾಗ, "ಯಾರಿಗೂ ಇಷ್ಟವಾಗದಂತಹ ಒಂದು ಕೊಠಡಿ ಇರುವುದಾದರೆ ಅದನ್ನೇ ನನಗೆ ಕೊಡಿ" ಎಂದು ಹೇಳಿದರಂತೆ. ಹಿಂದಿನ ದಿನಗಳಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಆ ಶಾಲೆಯ ಮುಖ್ಯಸ್ಥರು, “ಸಾಮುವೇಲ್ ಹಾಗೆ ಹೇಳಿದಾಗ, ನನ್ನ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗದೆ ನನ್ನ ಮುಖವನ್ನು ತಿರುಗಿಸಿದೆ. ಯಾರಿಗೂ ಇಷ್ಟವಾಗದ ಒಂದನ್ನು ನನ್ನಿಂದ ಸ್ವೀಕರಿಸಲು ಸಾಧ್ಯವಾ ಎಂದು ನನ್ನನ್ನು ನಾನೇ ಕೇಳಿಕೊಂಡೆ" ಎಂದು ಹೇಳಿದರು.

 

ಯಾರಾದರೂ ಇಷ್ಟಪಡುವಂತಹ ವ್ಯಕ್ತಿ ನಾನಲ್ಲದಿದ್ದರೆ ನಾನು ಅದನ್ನು ಸ್ವೀಕರಿಸುತ್ತೇನೆಯೇ? ಈ ಸಮಾಜದಲ್ಲಿ ನಾನು ಬದುಕಲು ಸಾಧ್ಯವೇ? ಎಂಬ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡಬಹುದು! ಯಾರೂ ಇಷ್ಟಪಡದ ಸ್ಥಳ, ಯಾರೂ ಇಷ್ಟಪಡದ ವಿಷಯ, ಯಾರೂ ಇಷ್ಟಪಡದ ವ್ಯಕ್ತಿ ಸಾಮಾನ್ಯವಾಗಿ ಇವುಗಳನ್ನು ನಾವು ಇಷ್ಟಪಡುವುದಿಲ್ಲ. ನಮ್ಮ ಹಿರಿಯ ಸಹೋದರನಾದ ಯೇಸುಕ್ರಿಸ್ತನಿಗೂ ಸಹ ಯಾರೂ ಇಷ್ಟಪಡದ ರೂಪವಿತ್ತು ಎಂದು ಸತ್ಯವೇದವು ಹೇಳುತ್ತಿದೆ. ಕ್ರಿಸ್ತನ ಮನಸ್ಸಿನೊಂದಿಗೆ ನಾವೂ ಸಹ ಇಂತಹ ಪರಿಸ್ಥಿತಿಯನ್ನು ಸ್ವೀಕರಿಸುವ ವಿಧದಲ್ಲಿ ತಾಳ್ಮೆಯುಳ್ಳವರಾಗಿ ಮಾರ್ಪಾಡಬೇಕು. ಇದನ್ನೇ ಯೇಸುಕ್ರಿಸ್ತನು ಬದುಕಿ ತೋರಿಸಿದ್ದು.

 

ಹಣ, ಕೀರ್ತಿ, ಅಂತಸ್ತು, ವಿದ್ಯೆ, ಸೌಂದರ್ಯ ಇದನ್ನೇ ಜಗತ್ತು ನಮ್ಮಿಂದ ನಿರೀಕ್ಷಿಸುವುದು! ಆದರೆ ದೇವರು ನಿರೀಕ್ಷಿಸುವುದು ನಮ್ರತೆ, ಯಥಾರ್ಥತೆ ಮತ್ತು ಸರಳ ಜೀವನ ಇದನ್ನೇ! ಯೇಸು ಕ್ರಿಸ್ತನು ಶಿಲುಬೆಯಲ್ಲಿ ಮರಣದ ವರೆಗೂ ತನ್ನನ್ನು ತಗ್ಗಿಸಿಕೊಂಡಾಗ, ನೀವು ಮತ್ತು ನಾನು ಇನ್ನೆಷ್ಟರವರು?

 

ನಿಮ್ಮ ಆಲೋಚನೆಗೆ: ಇತರರು ತಮ್ಮನ್ನು ತಾವು ಹೊಗಳಿಕೊಳ್ಳುತ್ತಿರುವಾಗ, ನಾನೋ ನಮ್ರತೆಯಿಂದ ಕ್ರಿಸ್ತನ ಶಿಲುಬೆಯ ಒಂದು ಮೂಲೆಯಲ್ಲಿ ಬಿದ್ದು ನನ್ನ ರಕ್ಷಣೆಯನ್ನು ನೆನೆಸಿ ಆಶ್ಚರ್ಯಪಡುತ್ತಿದ್ದೇನೆ.

- Mrs. ಬೇಬಿ ಕಾಮರಾಜ್

 

ಪ್ರಾರ್ಥನಾ ಅಂಶ:

ನಾವು ಕಳುಹಿಸುವ ಪ್ರಾರ್ಥನಾ ಅಂಶಗಳಿಗೆ ವಿಜ್ಞಾಪಿಸುತ್ತಾ ಪ್ರಾರ್ಥಿಸುವ "ಎಸ್ತೇರ್" ಗಳು ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino