Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.03.2023
Share:

By Village Missionary Movement

Thursday, 16-Mar-2023

ಧೈನಂದಿನ ಧ್ಯಾನ(Kannada) – 16.03.2023

 

ಅತಿಕ್ರಮಿಸಿದ ನಂತರವೂ ತ್ಯಜಿಸದವರು

 

"ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಾಗ್ರದಲ್ಲಿ ನನ್ನನ್ನು ಸುರಕ್ಷಿತವಾಗಿ ಇರಿಸುವನು" - ಕೀರ್ತನೆ 27:5

 

ಈ ಲೋಕದಲ್ಲಿ ನಾವು ದೇವರಿಗೆ ವಿರುದ್ಧವಾಗಿ, ಅವರ ಹೃದಯವನ್ನು ನೋಯಿಸುವ ಅನೇಕ ಕೆಲಸಗಳನ್ನು ಮಾಡಿದರೂ, ಮಾಡುತ್ತಿದ್ದರೂ ನಮ್ಮನ್ನು ದ್ವೇಷಿಸದ ಮತ್ತು ನಮ್ಮನ್ನು ತ್ಯಜಿಸದ ಏಕೈಕ ವ್ಯಕ್ತಿ ನಮ್ಮ ದೇವರು ಮಾತ್ರವೇ! ಯಾವ ಸಂದರ್ಭದಲ್ಲೂ ನಮ್ಮನ್ನು ಬಿಟ್ಟು ಬಿಡದವರು, ಕೈಬಿಡದವರೂ ಆಗಿದ್ದಾರೆ. ಬಹುಶಃ ನಮ್ಮ ಜೊತೆಗಿರುವವರಿಗೆ ನಮ್ಮ ಭೂತಕಾಲ ಅಥವಾ ನಾವು ರಹಸ್ಯವಾಗಿ ಮಾಡುವ ಪಾಪಗಳು ಗೊತ್ತಾದರೆ, ನಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಅನೇಕರು ನಮ್ಮೊಂದಿಗೆ ಇರುವುದಿಲ್ಲ. ಅವರು ನಮ್ಮನ್ನು ತ್ಯಜಿಸುತ್ತಾರೆ. ಆದರೆ ಕರ್ತನು ನನ್ನ ಮಗ, ಮಗಳು ನನ್ನ ಹತ್ತಿರ ಬರುವುದಿಲ್ಲವಾ, ತಮ್ಮ ಪಾಪವನ್ನು ಬಿಟ್ಟು ಮಾನಸಾಂತರ ಹೊಂದಿಬಿಡುವುದಿಲ್ಲವಾ ಎಂದು ಕಣ್ಣೀರಿನೊಂದಿಗೆ ನಿಮ್ಮ ಪಕ್ಕದಲ್ಲೇ ಕಾಯುತ್ತಿದ್ದಾರೆ.

 

ನನ್ನ ಯೌವ್ವನ ಪ್ರಾಯದಲ್ಲಿ ಕಠಿಣವಾದ ಪರಿಸ್ಥಿತಿಯಲ್ಲಿದ್ದಾಗ, ದೇವರೊಂದಿಗೆ ಮಾತನಾಡಲಾಗದೇ ತವಕಿಸುತ್ತಿದ್ದಾಗ, ನನ್ನನ್ನು ಕ್ರಿಸ್ತನ ಬಳಿಗೆ ಕರೆದೊಯ್ದ ಸಹೋದರಿ ನನ್ನನ್ನು ಕರೆದು ಪ್ರಾರ್ಥಿಸುತ್ತಿದ್ದರು. ನಾನು ಸಹ ಗೊಂದಲದ ಪರಿಸ್ಥಿತಿ ಏರ್ಪಟ್ಟಾಗ ಆ ಸಹೋದರಿಯನ್ನು ಸಂಪರ್ಕಿಸಿ ಪ್ರಾರ್ಥಿಸಲು ಕೇಳುತ್ತಿದ್ದೆ. ಒಮ್ಮೆ ನನ್ನ ಮನದಲ್ಲಿ ಒಂದು ಪ್ರಶ್ನೆ ಮೂಡಿತು. ಅದೇನೆಂದರೆ, ನಾನು ಈಗ ನನ್ನ ಸಮಸ್ಯೆಗಾಗಿ ಈ ಸಹೋದರಿಯನ್ನು ಸಂಪರ್ಕಿಸುತ್ತಿದ್ದೇನೆ, ಬಹುಶಃ ಈ ಸಹೋದರಿ ಇಲ್ಲದಿದ್ದರೆ, ನಾನು ಯಾರನ್ನು ಸಂಪರ್ಕಿಸಬೇಕು? ಎಂಬ ಪ್ರಶ್ನೆಯೇ ಅದು! ಆ ಸಮಯದಲ್ಲಿ ಕರ್ತನು ನನ್ನೊಂದಿಗೆ ಸ್ಪಷ್ಟವಾಗಿ ಮಾತನಾಡಿದರು. ನಿನ್ನೊಳಗೆ ಸದಾ ಇರುವ ನನ್ನನ್ನು ನೀನು ಮರೆತುಬಿಟ್ಟೆಯಲ್ಲಾ ಎಂದು. ಆಗಲೇ ನನಗೆ ಅರಿವಾಯಿತು. ಈ ಲೋಕದಲ್ಲಿ ನಾವು ಅವರನ್ನು ಸಂಪೂರ್ಣವಾಗಿ ನಂಬದಿರುವಾಗಲೂ ಮತ್ತು ಪ್ರೀತಿಸದಿರುವಾಗಲೂ ಅವರು ನಮ್ಮನ್ನು ಯಾವಾಗಲೂ ಪ್ರೀತಿಸಲು ಮಾತ್ರವೇ ತಿಳಿದಿದ್ದಾರೆ. ಆತನನ್ನು ಎಂದಿಗೂ ಮರೆಯಬಾರದು. ಆತನೊಬ್ಬನೇ ನಂಬಿಕೆಗೆ ಪಾತ್ರನು. ನಮ್ಮ ಅಳಲನ್ನು ಆಲಿಸಿ ನಮ್ಮನ್ನು ಅಪ್ಪಿಕೊಳ್ಳುವ, ಆದರಿಸಿ ಸಂತೈಸುವ ಪ್ರೀತಿಯ ದೇವರು! ನೀವು ಆತನ ಕೈ ಹಿಡಿದು ಆತನಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ಪ್ರಯಾಣಿಸಿದರೆ ಯಾವುದೇ ರೀತಿಯ traffic ನಿಮ್ಮ ಜೀವನದಲ್ಲಿ ಇರುವುದಿಲ್ಲ.

 

ಹದಿಹರೆಯದ ಸಹೋದರ ಸಹೋದರಿಯರೇ! ದೇವರನ್ನು, ಹೀಗೆ ಕೇಳೋಣ. "ನನ್ನನ್ನು ಈ ಲೋಕದಲ್ಲಿ ಯಾರು ಬಿಟ್ಟುಹೋದರೂ ನೀವು ಮಾತ್ರ ನನ್ನನ್ನು ಬಿಟ್ಟುಹೋಗಬೇಡಿ" ಎಂದು. ನಾನು ನಿಮ್ಮನ್ನು ನನ್ನ ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ ಎಂದು ಹೃದಯದ ಅಂತರಾಳದಿಂದ ಹೇಳುವಾಗ ಅವರು ನಿಮ್ಮನ್ನು ತುಂಬಲು ಶಕ್ತನಾಗಿದ್ದಾರೆ.

- Mrs. ದಿವ್ಯಾ ಬರ್ನಾರ್ಡ್

 

ಪ್ರಾರ್ಥನಾ ಅಂಶ:

ನಮ್ಮ ಪತ್ರಿಕಾ ಸೇವೆಗಳಲ್ಲಿ ಸಂದೇಶಗಳನ್ನು ಬರೆಯುವ ಸೇವಕರನ್ನು ದೇವರು ವಿಶೇಷವಾದ ಜ್ಞಾನದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet